Latest Videos

ಬೆಳಗಾವಿ: ಮದ್ಯದ ನಶೆಯಲ್ಲಿ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿ..!

By Kannadaprabha NewsFirst Published May 24, 2024, 12:01 PM IST
Highlights

ಯಲ್ಲಪ್ಪ ಕಾಕಿ ಪತ್ನಿಯನ್ನು ಹತ್ಯೆ ಮಾಡಿದ ಆರೋಪಿ. ಪ್ರತಿನಿತ್ಯ ಕುಡಿದು ಬಂದು ಪತಿ ಗಲಾಟೆ ಮಾಡುತ್ತಿದ್ದ. ರಾತ್ರಿ ಮಲಗಿದ್ದ ವೇಳೆ ಸಲಾಕೆಯಿಂದ ಹೊಡೆದು ಹತ್ಯೆ ಮಾಡಿ ಪರಾರಿಯಾಗಿದ್ದಾನೆ.
 

ಬೆಳಗಾವಿ(ಮೇ.24):  ಕುಡಿದ ನಶೆಯಲ್ಲಿ ಪತ್ನಿಗೆ ಸಲಾಕೆಯಿಂದ ಹೊಡೆದು ಪತಿಯೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೈಲಹೊಂಗಲ ತಾಲೂಕಿನ ಹಣಬರಹಟ್ಟಿ ಗ್ರಾಮದಲ್ಲಿ ನಡೆದಿದೆ. ಹಣಬರಹಟ್ಟಿ ಗ್ರಾಮದ ಫಕೀರವ್ವ ಕಾಕಿ (35) ಕೊಲೆಯಾದ ದುರ್ದೈವಿ.  ಯಲ್ಲಪ್ಪ ಕಾಕಿ ಪತ್ನಿಯನ್ನು ಹತ್ಯೆ ಮಾಡಿದ ಆರೋಪಿ. ಪ್ರತಿನಿತ್ಯ ಕುಡಿದು ಬಂದು ಪತಿ ಗಲಾಟೆ ಮಾಡುತ್ತಿದ್ದ. ರಾತ್ರಿ ಮಲಗಿದ್ದ ವೇಳೆ ಸಲಾಕೆಯಿಂದ ಹೊಡೆದು ಹತ್ಯೆ ಮಾಡಿ ಪರಾರಿಯಾಗಿದ್ದಾನೆ.

ಸ್ಥಳಕ್ಕೆ ನೇಸರಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗೆ ಬೆಳಗಾವಿ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಮೃತದೇಹ ತಂದು ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಈ ಕುರಿತು ನೇಸರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕೋಪದ ಕೈಗೆ ಬುದ್ದಿ ಕೊಟ್ಟು ಕರುಳ ಕುಡಿಯ ಕೊಂದ ತಾಯಿ: ಗಂಡನೊಂದಿಗೆ ಫೈಟ್, ಮಗುವಿನ ಕತೆ ಫಿನೀಷ್

ಕೂಲಿ ಮಾಡಿ ಬಂದ ಹಣದಲ್ಲಿ ವಿಪರೀತ ಸಾರಾಯಿ ಕುಡಿಯುತ್ತಿದ್ದ. ಕುಡಿದ ನಶೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರತಿದಿನ ಪತ್ನಿ ಜೊತೆಗೆ ಜಗಳ ಆಡುತ್ತಿದ್ದ, ಮೂರು ಬಾರಿ ಕರೆಸಿ ಬುದ್ದಿ ಹೇಳಿದ್ದೆವು. ಪೊಲೀಸರಿಂದಲೂ ಎಚ್ಚರಿಕೆ ಕೊಟ್ಟಿದ್ದೇವು. ಆದರೆ, ಈಗ ನೋಡಿದರೆ ಕೊಲೆ ಮಾಡಿದ್ದಾನೆ. ನಾಲ್ಕು ಮಕ್ಕಳು ಈಗ ಅನಾಥ ಆಗಿದ್ದಾವೆ ಎಂದು ಕೊಲೆಯಾದ ಫಕೀರವ್ವ ಸಂಬಂಧಿಕ ಮುರಾರಿ ತೇನಗಿ ತಿಳಿಸಿದ್ದಾರೆ.

click me!