Latest Videos

ಆಸ್ಪತ್ರೆಯ 4ನೇ ಮಹಡಿ ವಾರ್ಡ್‌ಗೇ ಜೀಪ್‌ ನುಗ್ಗಿಸಿ ಆರೋಪಿ ಬಂಧಿಸಿದ ಉತ್ತರಾಖಂಡದ ಪೊಲೀಸರು..!

By Kannadaprabha NewsFirst Published May 24, 2024, 6:00 AM IST
Highlights

ಶಸ್ತ್ರ ಚಿಕಿತ್ಸಾ ಘಟಕದಲ್ಲಿ ಆಪ್‌ರೇಷನ್ ನಡೆಯುತ್ತಿರುವ ಸಂದರ್ಭದಲ್ಲಿ ಕಿರಿಯ ವೈದ್ಯೆ ಜೊತೆಗೆ ನರ್ಸಿಂಗ್ ಅಧಿಕಾರಿ ಅಸಭ್ಯವಾಗಿ ವರ್ತಿಸಿದ್ದಾನೆ. ಆಕೆಗೆ ಅಶ್ಲೀಲ ಸಂದೇಶ ಕಳುಹಿಸಿ, ಬೆದರಿಕೆ ಕೂಡ ಹಾಕಿದ್ದ. ಘಟನೆಗೆ ಸಂಬಂಧಿಸಿದ್ದಂತೆ ವೈದ್ಯೆ ಮಂಗಳವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ರಿಷಿಕೇಶ(ಮೇ.24):  ಕಿರಿಯ ಮಹಿಳಾ ವೈದ್ಯೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ನರ್ಸಿಂಗ್ ಸಿಬ್ಬಂದಿಯನ್ನು ಬಂಧಿಸಲು ಉತ್ತರಾಖಂಡದ ರಿಷಿಕೇಶದ ಏಮ್ಸ್ ಆಸ್ಪತ್ರೆಯಲ್ಲಿ ಪೊಲೀಸರು ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ಮಾಡಿದ ಘಟನೆ ನಡೆದಿದೆ. ಆರೋಪಿಯನ್ನು ಬಂಧಿಸಲು ಪೊಲೀಸರು , ತಮ್ಮ ವಾಹನವನ್ನು ಆಸ್ಪತ್ರೆಯೊಳಗೆ ನುಗ್ಗಿಸಿದ್ದು, ಮಂಗಳವಾರ ನಡೆದ ಈ ಘಟನೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಭಾನುವಾರ ಶಸ್ತ್ರ ಚಿಕಿತ್ಸಾ ಘಟಕದಲ್ಲಿ ಆಪ್‌ರೇಷನ್ ನಡೆಯುತ್ತಿರುವ ಸಂದರ್ಭದಲ್ಲಿ ಕಿರಿಯ ವೈದ್ಯೆ ಜೊತೆಗೆ ನರ್ಸಿಂಗ್ ಅಧಿಕಾರಿ ಅಸಭ್ಯವಾಗಿ ವರ್ತಿಸಿದ್ದಾನೆ. ಆಕೆಗೆ ಅಶ್ಲೀಲ ಸಂದೇಶ ಕಳುಹಿಸಿ, ಬೆದರಿಕೆ ಕೂಡ ಹಾಕಿದ್ದ. ಘಟನೆಗೆ ಸಂಬಂಧಿಸಿದ್ದಂತೆ ವೈದ್ಯೆ ಮಂಗಳವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಹುಬ್ಬಳ್ಳಿ: ಅಂಜಲಿ ಹಂತಕನನ್ನ ಬಂಧಿಸಿದ್ದೇ ಬಲು ರೋಚಕ..!

ಈ ಕೃತ್ಯ ನಡೆಸಿದವರನ್ನು ಬಂಧಿಸಬೇಕೆಂದು, ಕೆಲಸದಿಂದ ವಜಾಗೊಳಿಸಬೇಕೆಂದು ಆಸ್ಪತ್ರೆ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದ್ದರು.ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ, ಜನ ಸುತ್ತುವರೆಯುತ್ತಿದ್ದಂತೆ , ಆಸ್ಪತ್ರೆಯಲ್ಲಿರುವ ಇತರ ರೋಗಿಗಳಿಗೆ ಯಾವುದೇ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ಸ್ಥಳಕ್ಕಾಗಮಿಸಿದ ಪೊಲೀಸರು ಆರನೇ ಮಹಡಿಗೆ ಕಾರು ನುಗ್ಗಿಸಿದ್ದಾರೆ. ಪೊಲೀಸರು ತುರ್ತು ಚಿಕಿತ್ಸಾ ಘಟಕದಿಂದ ಆಸ್ಪತ್ರೆ ಪ್ರವೇಶಿಸಿ ಆರೋಪಿ ಬಂಧಿಸಿದ್ದಾರೆ.

click me!