
ಸುರಪುರ(ಫೆ.24): ಶೀಲಶಂಕಿಸಿ ಪತ್ನಿಯ ಕುತ್ತಿಗೆ ಬಿಗಿದು ಪತಿಯೇ ಕೊಲೆ ಮಾಡಿರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ.
ಎಂಟು ವರ್ಷಗಳ ಹಿಂದೆ ತಿಂಥಣಿ ಗ್ರಾಮದ ಹಣಮಂತನಿಗೆ ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನವರಾದ ಅಯ್ಯಪ್ಪ ಕಲ್ಲಪ್ಪ ಅವರು ತಮ್ಮ ಕಿರಿಯ ಮಗಳನ್ನು ವಿವಾಹ ಮಾಡಿಕೊಟ್ಟಿದ್ದರು. ಇವರಿಗೆ ಮೂವರು ಮಕ್ಕಳಿದ್ದಾರೆ. ಪರ ಪುರುಷನೊಂದಿಗೆ ಪತ್ನಿ ಅನೈತಿಕ ಸಂಬಂಧವಿದೆ ಎಂದು ಪತಿ ಹನುಮಂತ ಪತ್ನಿಗೆ ಮಾಲಾಶ್ರೀ (ಶ್ರೀದೇವಿ)ಗೆ ಕಿರುಕುಳ ನೀಡುತ್ತಿದ್ದನು.
ಬೆಂಗಳೂರು: ಕುಡಿದ ಮತ್ತಿನಲ್ಲಿ ಜಗಳ; ಸ್ನೇಹಿತನನ್ನೇ ಕೊಂದ ಪಾಪಿಗಳು!
ಈ ವಿಚಾರವಾಗಿ ಹಿರಿಯ ಸಮ್ಮುಖದಲ್ಲಿ ರಾಜಿ-ಪಂಚಾಯಿತಿಗಳು ನಡೆದಿದ್ದವು. ಹನುಮಂತನ ವಿರುದ್ಧ ಸೂಕ್ತ ಕ್ರಮ ಕೊಳ್ಳಬೇಕು ಎಂದು ಮೃತಳ ತಂದೆ ಸುರಪುರ ಪೊಲೀಸ್ ಠಾಣೆಯಲ್ಲಿ ದೂರು ನೀರು ನೀಡಿದ್ದಾರೆ. ಮಹಿಳೆ ಕೊಲೆಯಾದ ಸ್ಥಳಕ್ಕೆ ಪಿಎಸ್‌ಐ ಆನಂದ ವಾಗ್ಮೋಡೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಂಡಿದ್ದಾರೆ.
ಸುರಪುರ ತಾಲೂಕಿನ ತಿಂಥಣಿಯಲ್ಲಿ ಮಹಿಳೆ ಕೊಲೆಯಾದ ಸ್ಥಳಕ್ಕೆ ಪಿಎಸ್‌ಐ ಆನಂದ ವಾಗ್ಮೋಡೆ ಭೇಟಿ ನೀಡಿ ಪರಿಶೀಲಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ