ಹೆಂಡತಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸುತ್ತಿದ್ದನ್ನು ಕಣ್ಣಾರೆ ಕಂಡ ಪತಿ ಹಾರ್ಟ್ ಅಟ್ಯಾಕ್‌ಗೆ ಬಲಿ

By Gowthami K  |  First Published Nov 4, 2023, 11:01 AM IST

ಬೆಂಗಳೂರಿನ ಚಂದ್ರಲೇಔಟ್‌ನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಹೆಂಡತಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸುತ್ತಿದ್ದನ್ನು ಕಣ್ಣಾರೆ ಕಂಡು ಪತಿಗೆ ಹಾರ್ಟ್ ಅಟ್ಯಾಕ್ ಆಗಿ ಸಾವಿಗೀಡಾಗಿದ್ದಾನೆ.


ಬೆಂಗಳೂರು (ಅ.4): ಬೆಂಗಳೂರಿನ ಚಂದ್ರಲೇಔಟ್‌ನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಹೆಂಡತಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸುತ್ತಿದ್ದನ್ನು ಕಣ್ಣಾರೆ ಕಂಡು ಪತಿಗೆ ಹಾರ್ಟ್ ಅಟ್ಯಾಕ್ ಆಗಿ ಸಾವಿಗೀಡಾಗಿದ್ದಾನೆ. ಪತ್ನಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. 

ಬೆಂಗಳೂರಿನ ಚಂದ್ರಲೇಔಟ್‌ನ ಗಂಗೊಂಡನ ಹಳ್ಳಿ ನಿವಾಸಿ  ಮುದಾಸೀರ್ ಖಾನ್. ಸಣ್ಣ ಪುಟ್ಟ ಕೆಲಸ ಮಾಡ್ಕೊಂಡು ತನ್ನ ಹೆಂಡತಿ ಹಾಗೂ ಮೂವರು ಮಕ್ಕಳ ಜೊತೆ ಸುಖ ಸಂಸಾರ ನಡೆಸುತ್ತಿದ್ದ.‌ ಆದ್ರೆ ಈ ಸುಖ ಸಂಸಾರದ ಮೇಲೆ  ವಹೀದ್ ಅಹ್ಮದ್ ಹಾಗೂ ಮತೀನ್ ಅಹ್ಮದ್ ಎಂಬ  ಇಬ್ಬರ ಕಣ್ಣು ಬಿತ್ತು. ಮುದಾಸೀರ್ ಹೆಂಡತಿ ಕಂಡ್ರೆ ಅದೇನೋ ಇವರಿಬ್ಬರಿಗೆ ಕೋಪ. ಈ ಇಬ್ಬರೂ ಅಣ್ಣ ತಮ್ಮಂದಿರು  ಮುದಾಸೀರ್ ಸಂಬಂಧಿಕರೇ ಆಗಬೇಕು.  

Tap to resize

Latest Videos

undefined

ಈ ಪುಟ್ಟ ಸಂಸಾರ ಹಾಳು ಮಾಡಬೇಕೆಂದೇ ನಿನ್ನೆ ಮುದಾಸೀರ್ ಹೆಂಡತಿಯ ನಡತೆಯ ಬಗ್ಗೆ  ವಹೀದ್ ಹಾಗೂ ಮತೀನ್  ಕೆಟ್ಟದಾಗಿ ಮಾತನಾಡಿದ್ದಾರೆ. ಇದರಿಂದ ಕೋಪಗೊಂಡ ಮುದಾಸೀರ್ ಪತ್ನಿ ತನ್ನ ಗಂಡನನ್ನು ಕರೆದುಕೊಂಡು  ರಾತ್ರಿ ವಹೀದ್ ಹಾಗೂ ಮತೀನ್ ಜೊತೆ ಜಗಳ ಮಾಡುತ್ತಾರೆ. ಈ ವೇಳೆ ಕೋಪಗೊಂಡ ವಹೀದ್ ಹಾಗೂ ಮತೀನ್ ಇಬ್ಬರು ಮುದಾಸೀರ್ ಪತ್ನಿ ಮೇಲೆ ಮಚ್ಚಿನಿಂದ ಮನಸೋ ಇಚ್ಚೆ ಹಲ್ಲೆ ನಡೆಸಿದ್ದಾರೆ. ಹೆಂಡತಿ ಮೇಲೆ ಯಾವಾಗ ಮಾರಣಾಂತಿಕ ಹಲ್ಲೆ ನಡೆಯುತ್ತಿತ್ತೋ ಮುದಾಸಿರ್‌ಗೆ ಗಾಬರಿಯಿಂದ ಹಾರ್ಟ್ ಅಟ್ಯಾಕ್ ಆಗಿದೆ. 

ತಕ್ಷಣ ಮುದಾಸಿರ್‌ ಅನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ರು ಕೂಡ ಪ್ರಯೋಜನವಾಗದೇ ಕೊನೆಯುಸಿರೆಳೆದಿದ್ದಾನೆ. ಸದ್ಯಕ್ಕೆ ಚಂದ್ರಾಲೇಔಟ್ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ವಹೀದ್ ಹಾಗೂ ಮತೀನ್ ಇಬ್ಬರನ್ನೂ ಅರೆಸ್ಟ್ ಮಾಡಿ ತನಿಖೆ ಮುಂದುವರಿಸಿದ್ದಾರೆ. ಕೊನೆಗೂ ಅಣ್ಣ ತಮ್ಮನ ದ್ವೇಷಕ್ಕೆ ಮುದ್ದಾದ ಸಂಸಾರ ದುರಂತ ಅಂತ್ಯ ಕಂಡಿದ್ದು, ಮುದಾಸೀರ್ ಪತ್ನಿ ಸಾವು ಬದುಕಿನ ನಡುವೆ ಹೋರಾಟ ಮಾಡ್ತಿದ್ದಾಳೆ.

click me!