ಜಿಲ್ಲೆಯಲ್ಲಿ ನಾಗರೀಕರು ತಲೆತಗ್ಗಿಸುವ ಘಟನೆ ನಡೆದಿದೆ. ವಿದ್ಯಾರ್ಥಿಗಳಿಗೆ ಗುರುವಿನ ಸ್ಥಾನದಲ್ಲಿ ನಿಂತು ವಿದ್ಯಾದಾನ ಮಾಡ್ಬೇಕಾಗಿದ್ದ ಸರ್ಕಾರಿ ಶಾಲೆ ಶಿಕ್ಷಕನೋರ್ವ ವಿದ್ಯಾರ್ಥಿನಿಯ ಮೇಲೆ ಶಾಲೆಯಲ್ಲೇ ನಿರಂತರ ಅತ್ಯಾಚಾರ ಎಸಗಿ ಪೋಲಿಸರ ಅತಿಥಿಯಾಗಿದ್ದಾನೆ.
ವರದಿ: ವರದರಾಜ್, ದಾವಣಗೆರೆ
ದಾವಣಗೆರೆ (ನ.04): ಜಿಲ್ಲೆಯಲ್ಲಿ ನಾಗರೀಕರು ತಲೆತಗ್ಗಿಸುವ ಘಟನೆ ನಡೆದಿದೆ. ವಿದ್ಯಾರ್ಥಿಗಳಿಗೆ ಗುರುವಿನ ಸ್ಥಾನದಲ್ಲಿ ನಿಂತು ವಿದ್ಯಾದಾನ ಮಾಡ್ಬೇಕಾಗಿದ್ದ ಸರ್ಕಾರಿ ಶಾಲೆ ಶಿಕ್ಷಕನೋರ್ವ ವಿದ್ಯಾರ್ಥಿನಿಯ ಮೇಲೆ ಶಾಲೆಯಲ್ಲೇ ನಿರಂತರ ಅತ್ಯಾಚಾರ ಎಸಗಿ ಪೋಲಿಸರ ಅತಿಥಿಯಾಗಿದ್ದಾನೆ. ದಾವಣಗೆರೆ ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಯೊಂದರಲ್ಲಿ ಈ ದುರ್ಘಟನೆ ನಡೆದಿದ್ದು ಪೋಷಕರು ಆತಂಕಕ್ಕೊಳಗಾಗಿದ್ದಾರೆ. ಈ ಘಟನೆ ನಡೆದು ವಾರದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿ ತನ್ನ ಪೋಷಕರ ಬಳಿ ಅನಾರೋಗ್ಯದ ಬಗ್ಗೆ ಹೇಳಿಕೊಂಡ ಬಳಿಕವೇ ಈ ವಿಚಾರ ಬೆಳಕಿಗೆ ಬಂದಿದೆ.
ವೈದ್ಯರಲ್ಲಿಗೆ ಬಾಲಕಿಯನ್ನು ಕರೆದುಕೊಂಡು ಹೋದಾಗ ಪರಿಶೀಲಿಸಿದ ವೈದ್ಯರು ಅತ್ಯಾಚಾರದ ಬಗ್ಗೆ ಮಾಹಿತಿಯನ್ನು ಪೋಷಕರಿಗೆ ತಿಳಿಸಿದ್ದಾರೆ. ತಕ್ಷಣ ಅಲರ್ಟ್ ಆದ ಪೋಷಕರು ಪೋಲಿಸರಿಗೆ ತಿಳಿಸಿದ ಬೆನ್ನಲ್ಲೇ ಮಹಿಳಾ ಠಾಣೆಯ ಪೋಲಿಸರು ಅಪ್ರಾಪ್ತ ಬಾಲಕಿ ಹೇಳಿಕೆ ಪಡೆದು ಶಾಲೆಯಲ್ಲೇ ಶಿಕ್ಷಕನನ್ನು ಬಂಧಿಸಿದ್ದಾರೆ. ಆರೋಪಿ ಶಿಕ್ಷಕನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಆರೋಪಿ ಜೈಲು ಸೇರಿದ್ದಾನೆ. ಈ ಘಟನೆಯಿಂದ ಇಡೀ ದಾವಣಗೆರೆ ಜಿಲ್ಲೆಯ ನಾಗರೀಕರು ಹಾಗು ಶಿಕ್ಷಕರ ವರ್ಗ ತಲೆತಗ್ಗಿಸುವಂತಾಗಿದೆ. ಇನ್ನು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಈ ಘಟನೆಯಿಂದ ಹಿಂದೇಟು ಹಾಕುವಂತಾಗಿದೆ.
ವಾಟ್ಸಾಪ್‌ನಲ್ಲಿ ಉತ್ತರ ಕಳುಹಿಸಿ ಕೆಇಎ ಎಫ್‌ಡಿಎ ಪರೀಕ್ಷಾ ಅಕ್ರಮ?
ಬಾಲಕಿ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ಚಿಕಿತ್ಸೆಗೆ ಹೋದಾಗ ಪ್ರಕರಣ ಬೆಳಕಿಗೆ: ಅಪ್ರಾಪ್ತ ಬಾಲಕಿ ಮೇಲೆ ಶಿಕ್ಷಕ ಶಾಲಾ ವೇಳೆಯಲ್ಲೆ ರಾಕ್ಷಸಿ ಕೃತ್ಯ ಎಸಗಿದ್ದಾನೆ. ಈ ಘಟನೆ ನಡೆದು ಒಂದು ವಾರದ ನಂತರ ಬೆಳಕಿಗೆ ಬಂದಿದೆ. ಅತ್ಯಾಚಾರ ಎಸಗಿದ ಕೆಲದಿನಗಳ ಬಳಿಕ ಅಪ್ರಾಪ್ತ ಬಾಲಕಿ ಅನಾರೋಗ್ಯಕ್ಕೀಡಾಗಿದ್ದಾಳೆ ಅದ್ರೂ ಕೂಡ ಶಿಕ್ಷಕನ ಬೆದರಿಕೆಗೆ ಹೆದರಿ ಬಾಲಕಿ ಈ ವಿಚಾರ ಪೋಷಕರ ಬಳಿ ಬಾಯಿ ಬಿಟ್ಟಿಲ್ಲ, ಅನಾರೋಗ್ಯಕ್ಕೀಡಾಗಿದ್ದ ಬಾಲಕಿಯನ್ನು ಪೋಷಕರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ಈ ಸೂಕ್ಷ್ಮ ವಾಗಿ ಪರಿಶೀಲಿಸಿದಾಗ ಏನೋ ಅನಾಹುತವಾಗಿದೆ ಎಂದು ಎಂ ಎಲ್ ಸಿ ಮಾಡಿಸಿ ಘಟನೆಯನ್ನು ಬಾಲಕಿಯ ಪೋಷಕರಿಗೆ ತಿಳಿಸಿದ್ದಾರೆ.
Sandalwood ಸೆಂಚುರಿ ಸ್ಟಾರ್ ಶಿವಣ್ಣನಿಗೆ ಅನಾರೋಗ್ಯ: ಆಸ್ಪತ್ರೆಗೆ ದಾಖಲು
ಬಳಿಕ ಮಾಹಿತಿ ಪಡೆದ ಪೋಷಕರು ಶಿಕ್ಷಕನ ಕೀಚಕ ಕೃತ್ಯ ಕೇಳಿ ದಂಗಾಗಿದ್ದಾರೆ. ತಡಮಾಡದೇ ಪೋಷಕರು ಹಾಗು ವೈದ್ಯರು ಮಹಿಳಾ ಪೋಲಿಸರಿಗೆ ಮಾಹಿತಿ ನೀಡಿದ್ದರಿಂದ ಆರೋಪಿ ಶಿಕ್ಷಕನನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪಿಐ ನೂರ್ ಅಹ್ಮದ್ ರವರು "ಈ ಘಟನೆಗೆ ಸಂಬಂಧಿಸಿದಂತೆ ಬಾಲಕಿ ಹೇಳಿಕೆ ಪಡೆದು ಪೋಕ್ಸೋ ಪ್ರಕರಣ ದಾಖಲಿಸಿ ಶಿಕ್ಷಕನನ್ನು ಬಂಧಿಸಿದ್ದೇವೆ, ಪೋಷಕರು ದೂರು ಸಲ್ಲಿಸಿದ್ದರಿಂದ ಎಫ್ಐಆರ್ ದಾಖಲಿಸಿಕೊಂಡು ಶಾಲೆಯಿಂದಲೇ ಶಿಕ್ಷಕನನ್ನು ಬಂಧಿಸಿದ್ದೇವೆ, ಸಧ್ಯ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ, ತನಿಖೆ ಮುಂದುವರೆದಿದೆ ಎಂದಿದ್ದಾರೆ.