ವರದಕ್ಷಿಣೆ ತರಲಿಲ್ಲ ಅಂತ ಮಹಿಳೆಯ ತಲೆಕೂದಲು ಕತ್ತರಿಸಿದ ಗಂಡ

Published : Apr 19, 2025, 06:03 PM ISTUpdated : Apr 19, 2025, 06:28 PM IST
ವರದಕ್ಷಿಣೆ ತರಲಿಲ್ಲ ಅಂತ ಮಹಿಳೆಯ ತಲೆಕೂದಲು ಕತ್ತರಿಸಿದ ಗಂಡ

ಸಾರಾಂಶ

ಉತ್ತರ ಪ್ರದೇಶದಲ್ಲಿ ವರದಕ್ಷಿಣೆಗಾಗಿ ಪತಿಯೊಬ್ಬ ಪತ್ನಿಯ ಕೂದಲನ್ನು ಕತ್ತರಿಸಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಒಂದು ಕಡೆ ಮಹಿಳೆಯರು ವರದಕ್ಷಿಣೆ ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡು ಮಜಾ ಉಡಾಯಿಸುತ್ತಿದ್ದರೆ, ಇನ್ನೊಂದೆಡೆ ಆ ಕಾಯ್ದೆ ಇದ್ದರೂ ಅದರ ನೆರವು ಪಡೆಯಲಾಗದೇ ಅನೇಕ ಮಹಿಳೆಯರು ಸಂಕಷ್ಟ ಪಡುತ್ತಿದ್ದಾರೆ. ವರದಕ್ಷಿಣೆ ತರಲಿಲ್ಲ ಅಂತ ಮಹಿಳೆ ವಾಸವಿದ್ದ ಮನೆಗೆ ನುದ್ದಿ ಆಕೆಯ ಪತಿ ತೀವ್ರವಾಗಿ ಹಿಂಸೆ ನೀಡಿ ಆಕೆಯ ಉದ್ದನೇಯ ತಲೆಕೂದಲನ್ನು ಕತ್ತರಿಸಿದಂತಹ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ  ಹರ್ದೋಯ್ ಜಿಲ್ಲೆಯ ಸಾಂಡಿ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಈಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಗಂಡ ಹಾಗೂ ಆಕೆಯ ಮನೆಯವರು ಮದುವೆಯ ವೇಳೆ ನೀಡುವುದಾಗಿ ಹೇಳಿದ್ದ ವರದಕ್ಷಿಣೆ ಹಣವನ್ನು ನೀಡಿಲ್ಲ ಎಂದು ಹೇಳಿ ಮಹಿಳೆಗೆ ಕಿರುಕುಳ ನೀಡುತ್ತಿದ್ದರು ಎಂದು ವರದಿಯಾಗಿದೆ.

ಸರಮುಲ್ಲಾ ಗಂಜ್ ಪ್ರದೇಶದಲ್ಲಿ ಮಹಿಳೆ ವಾಸ ಮಾಡುತ್ತಿದ್ದರು. ಈಗ ಗಂಡ ಹಾಗೂ ಆಕೆಯ ಮನೆಯವರು ಆಕೆಯ ಮೇಲೆ ಹಲ್ಲೆ ಮಾಡಿ ತಲೆಕೂದಲಿಗೆ ಕತ್ತರಿ ಹಾಕಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಮಹಿಳೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮ ಅಳಿಯ ಮಗಳಿಗೆ ಧೀರ್ಘಕಾಲದಿಂದಲೂ ವರದಕ್ಷಿಣೆ ತರುವಂತೆ  ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಅವನ ಬೇಡಿಕೆಗಳು ಈಡೇರದಿದ್ದಾಗ, ಅವನು ತನ್ನ ಸ್ನೇಹಿತರೊಂದಿಗೆ ಮನೆಗೆ ನುಗ್ಗಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಆಕೆಯ ಕೂದಲನ್ನು ಕತ್ತರಿಸಿದ್ದಾನೆ ಎಂದು ಮಹಿಳೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಅವರು ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಪತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

ಕರ್ನಾಟಕದಲ್ಲಿ ಗುಂಡಿನ ಮೊರೆತ: ಅಪರಾಧಿಗಳ ಸದ್ದಡಗಿಸಬಲ್ಲರೇ ಪೊಲೀಸರು?

ಸ್ಥಳೀಯ ಪೊಲೀಸ್ ಅಧಿಕಾರಿಗಳ ಪ್ರಕಾರ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋವನ್ನು ಸಹ ತನಿಖೆಯ ಭಾಗವಾಗಿ ಪರಿಗಣಿಸಲಾಗಿದೆ. ಮಹಿಳೆಯ ಹೇಳಿಕೆ ಮತ್ತು ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಈ ರೀತಿಯ ಘಟನೆಗಳನ್ನು ಸಹಿಸುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಾರ್ವಜನಿಕರು ಮತ್ತು ಮಹಿಳಾ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಅಂತಹ ಪ್ರಕರಣಗಳಲ್ಲಿ ತ್ವರಿತ ನ್ಯಾಯ ಮತ್ತು ಕಠಿಣ ಶಿಕ್ಷೆ ನೀಡಬೇಕು ಎಂದು ಜನರು ಒತ್ತಾಯಿಸಿದ್ದಾರೆ.

ರಿಕ್ಕಿ ರೈ ಪ್ರಕರಣ, ಮುತ್ತಪ್ಪ ರೈ ಪತ್ನಿ ಸೇರಿ ನಾಲ್ವರ ವಿರುದ್ಧ FIR!

ಒಂದೆಡೆ ವರದಕ್ಷಿಣೆ ಕಾಯ್ದೆಯನ್ನು ದುರುಪಯೋಗ ಪಡಿಸಿಕೊಂಡು ಮಹಿಳೆಯರು ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿರುವ ಬೆನ್ನಲೇ ಇಲ್ಲಿ ಈ ಕಾಯ್ದೆ ಬಲವಾಗಿದ್ದರೂ ಅನ್ಯಾಯಕ್ಕೊಳಗಾಗುತ್ತಿರುವ ಮಹಿಳೆಗೆ ನ್ಯಾಯ ಪಡೆಯಲಾಗುತ್ತಿಲ್ಲ. 

 

ಮದರಂಗಿ ಹಾಕಿಸಿಕೊಂಡು ಬರುವೆ ಅಂತ ಬ್ಯೂಟಿಪಾರ್ಲರ್‌ಗೆ ಹೋದ ವಧು ನಾಪತ್ತೆ

ಮಂಗಳೂರು: ಮದುವೆಗೆ ದಿನ ಮೊದಲು ವಧುವೊಬ್ಬಳು ನಾಪತ್ತೆಯಾಗಿರುವ ಆಘಾತಕಾರಿ ಘಟನೆ ಮಂಗಳೂರಿನ ಬೋಳಾರ್‌ನಲ್ಲಿ ನಡೆದಿದೆ. 22 ವರ್ಷದ ಪಲ್ಲವಿ ಎಂಬ ವಧುವಿನ ಮದುವೆ ಏಪ್ರಿಲ್ 16 ರಂದು ನಿಗದಿಯಾಗಿತ್ತು. ಆದರೆ ಮದರಂಗಿ ಶಾಸ್ತ್ರದ ದಿನವೇ ಆಕೆ ಬ್ಯೂಟಿಪಾರ್ಲರ್‌ಗೆ ಹೋಗಿ ಮೆಹಂದಿ ಹಾಕಿಸಿಕೊಂಡು ಬರುವುದಾಗಿ ತನ್ನ ಅಮ್ಮನಿಗೆ ಹೇಳಿ ಮನೆಯಿಂದ ಒಬ್ಬಳೇ ಹೊರಗೆ ಹೋದವಳು ಮತ್ತೆ ವಾಪಸ್ ಬಂದಿಲ್ಲ. ಇದರಿಂದಾಗಿ ವಧು ಹಾಗೂ ವರನ ಮನೆಯವರು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಏಪ್ರಿಲ್ 15ರಂದು ಈ ಘಟನೆ ನಡೆದಿದೆ. ಆಕೆಯ ಫೋನ್‌ಗೆ ಕರೆ ಮಾಡಿದರೆ ಫೋನ್ ಸ್ವಿಚ್ಆಫ್ ಎಂದು ಬರುತ್ತಿದೆ. ಪಲ್ಲವಿಯ ಒಪ್ಪಿಗೆಯ ಮೇರೆಗೆಯೇ ಈ ಮದುವೆಯನ್ನು ನಿಗದಿ ಮಾಡಲಾಗಿತ್ತು. ಎಲ್ಲವೂ ಸರಿಯಾಗಿದ್ದರೆ ಏಪ್ರಿಲ್ 16 ರಂದು ಮದುವೆ ನಡೆಯಬೇಕಿತ್ತು. ಆದರೆ ವಧು ಮದುವೆಗೆ ದಿನ ಮೊದಲು ನಾಪತ್ತೆಯಾಗಿರುವುದು ಆಕೆಯ ಕುಟುಂಬದವರು ನೆಂಟರು ಹಾಗೂ ವರನ ಕಡೆಯವರಿಗೆ ತೀವ್ರ ಆಘಾತವುಂಟು ಮಾಡಿದೆ. ಘಟನೆಗೆ ಸಂಬಂಧಿಸಿದಂತೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿದ್ದು, ಆಕೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!
ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ