
ಬಳ್ಳಾರಿ (ಏ.19): ನಗರದ ಬೆಂಗಳೂರು ರಸ್ತೆಯಲ್ಲಿ ಮಾರುಕಟ್ಟೆಗೆ ಬಂದಿದ್ದ ಯುವತಿಯೊಬ್ಬಳ ಜೊತೆ ಯುವಕನೊಬ್ಬ ಅಸಭ್ಯವಾಗಿ ವರ್ತಿಸಿದ ಘಟನೆ ಶನಿವಾರ ನಡೆದಿದೆ. ಕುಟುಂಬದವರ ಜೊತೆ ಮಾರುಕಟ್ಟೆಗೆ ಆಗಮಿಸಿದ್ದ ಯುವತಿಯ ಬಳಿ ಯುವಕನ ದುರ್ವರ್ತನೆಯಿಂದ ಕಿರಿಕಿರಿಗೊಂಡ ಯುವತಿ, ತಕ್ಷಣ ತನ್ನ ಕುಟುಂಬದವರಿಗೆ ಮಾಹಿತಿ ನೀಡಿದ್ದಾಳೆ.
ಘಟನೆಯಿಂದ ಕುಪಿತಗೊಂಡ ಕುಟುಂಬಸ್ಥರು ಯುವಕನನ್ನು ನಿಲ್ಲಿಸಿ ನಡುರಸ್ತೆಯಲ್ಲೇ ಧರ್ಮದೇಟು ನೀಡಿದ್ದಾರೆ. ಸ್ಥಳಕ್ಕೆ ಜಮಾಯಿಸಿದ ಸ್ಥಳೀಯರು ಮಧ್ಯಸ್ಥಿಕೆ ವಹಿಸಿ, ಯುವಕನನ್ನು ಗದರಿಸಿ ಕಳುಹಿಸಿದ್ದಾರೆ. ಈ ಘಟನೆಯ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕಲಘಟಗಿಯಲ್ಲಿ ವಕ್ಫ್ ವಿರುದ್ಡ ಪ್ರತಿಭಟನೆ:'ಆಸ್ತಿ ನಿಮ್ಮಪ್ಪಂದ' ಎಂದ ಅನ್ಯಕೋಮಿನ ವ್ಯಕ್ತಿಗೆ ಬಿತ್ತು ಧರ್ಮದೇಟು!
ಈ ಘಟನೆಯಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ಉಂಟಾಯಿತಾದರೂ, ಸ್ಥಳೀಯರ ಮಧ್ಯಸ್ಥಿಕೆಯಿಂದ ಪರಿಸ್ಥಿತಿ ಶಾಂತಗೊಂಡಿದೆ. ಮಹಿಳೆಯರ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರು ಜಾಗೃತರಾಗಿರಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ನಗರದ ಬೆಂಗಳೂರು ರಸ್ತೆಯಲ್ಲಿ ಮಾರುಕಟ್ಟೆಗೆ ಬಂದಿದ್ದ ಯುವತಿಯೊಬ್ಬಳ ಜೊತೆ ಯುವಕನೊಬ್ಬ ಅಸಭ್ಯವಾಗಿ ವರ್ತಿಸಿದ ಘಟನೆ ಶನಿವಾರ ನಡೆದಿದೆ. ಕುಟುಂಬದವರ ಜೊತೆ ಮಾರುಕಟ್ಟೆಗೆ ಆಗಮಿಸಿದ್ದ ಯುವತಿಯ ಬಳಿ ಯುವಕನ ದುರ್ವರ್ತನೆಯಿಂದ ಕಿರಿಕಿರಿಗೊಂಡ ಯುವತಿ, ತಕ್ಷಣ ತನ್ನ ಕುಟುಂಬದವರಿಗೆ ಮಾಹಿತಿ ನೀಡಿದ್ದಾಳೆ.v
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ