ವರದಿ: ಮುಷ್ತಾಕ್ ಪೀರಜಾದೇ.
ಬೆಳಗಾವಿ (ಆ.26) : ಇತ್ತೀಚಿನ ದಿನಗಳಲ್ಲಿ ಪತಿ ಪತ್ನಿಯರ ನಡುವಿನ ಸಂಬಂಧ ಮೊದಲಿನಷ್ಟು ಗಟ್ಟಿಯಾಗಿ ಉಳಿದಿಲ್ಲ ಎಂಬುದಕ್ಕೆ ಹಲವು ಉದಹಾರಣೆಗಳು ಸಿಗುತ್ತವೆ. ಅದರಲ್ಲೂ ದಿನ ಸುದ್ದಿ ಪತ್ರಿಕೆಗಳಲ್ಲಿ ಪತ್ನಿಯ ಮೇಲೆ ಅನೈತಿಕ ಸಂಬಂಧದ ಶಂಕೆ ಕೊಲೆ, ಪರಪುರುಷನೊಂದಿಗೆ ಪತ್ನಿ ಲವ್ವಿಡವ್ವಿ ಪತಿ ಕೊಲೆಗೆ ಸುಪಾರಿ, ಪ್ರೀತಿಸಿ ಮದುವೆಯಾದ ಗಂಡನಿಂದ ಕಿರುಕುಳ, ವರದಕ್ಷಿಣೆ ಕಿರುಕುಳ ಇಂಥ ಸುದ್ದಿಗಳು ದಿನವೂ ವರದಿಯಾಗುತ್ತಲೇ ಇವೆ. ಆದರೆ ಇಲ್ಲೊಂದು ಘಟನೆ ಮನಕಲುಕುತಯ್ತದೆ. ಹೌದು ಕೆಲವರು ಹೆಂಡತಿಯನ್ನು ಮನಸಾರೆ ಪ್ರೀತಿಸುತ್ತಾರೆ. ಪತ್ನಿಯಿಲ್ಲದೆ ಒಂದು ಕ್ಷಣವೂ ಇರಲಾರರು. ಪತ್ನಿಗಾಗಿ ಎಲ್ಲ ತ್ಯಾಗಕ್ಕೂ ಸಿದ್ಧರಿರ್ತಾರೆ. ಅನಾರೋಗ್ಯದಿಂದ ಪತ್ನಿ ಸಾವನ್ನಪ್ಪಿದ ಎರಡೇ ದಿನದಲ್ಲಿ ಮನನೊಂದು ಪತಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಈ ಘಟನೆಯಿಂದ ಇಡೀ ಊರೇ ಈ ದಂಪತಿಯ ಪ್ರೇಮಕ್ಕೆ ಮಮ್ಮಲಮರುಗಿದೆ.
Belagavi Crime: ಹೊಡೆತಕ್ಕೆ ಪತ್ನಿ ಮೃತಪಟ್ಟಿದ್ದಾಳೆ ಎಂದು ತಿಳಿದು ಪತಿ ಆತ್ಮಹತ್ಯೆ!
ಸದಾಶಿವ ರಾಮಪ್ಪ ಕಾಂಬಳೆ (26) ಮನೆಯಲ್ಲಿಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತಾದರೂ ಸಹ ಬೆಂಕಿಯ ಕೆನ್ನಾಲಗೆಗೆ ಅವರ ದೇಹ ಶೇ. ೮೦ ರಷ್ಟು ಸುಟ್ಟು ಹೋಗಿದ್ದರಿಂದ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸದಾಶಿವ ಸಾವನ್ನಪ್ಪಿದ್ದಾರೆ. ಇನ್ನು ಕೇವಲ ಎರಡು ದಿನಗಳ ಹಿಂದಷ್ಟೆ ಸದಾಶಿವ ಪತ್ನಿ ರೂಪಾ ಕಾಂಬಳೆಯವರು ಅನಾರೋಗ್ಯದಿಂದ ನಿಧನರಾಗಿದ್ದರು. ಇದರಿಂದ ಮನನೊಂದಿದ್ದ ಪತಿ ಸದಾಶಿವ ಅಸತ್ಮಹತ್ಯೆ ಮಾಡಿಕೊಂಡಿದ್ದಾರೆ.
Suicide Cases: ಪತ್ನಿ ಕಳುಹಿಸಲಿಲ್ಲ ಎಂದು ಪತಿ ಆತ್ಮಹತ್ಯೆ
ಈ ಜೋಡಿಗೆ ಮದುವೆಯಾಗಿ ಕೇವಲ ಎರಡೇ ವರ್ಷವಾಗಿತ್ತು. ಸುಂದರ ಸಂಸಾರ ನಡೆಸಿ ಬಾಳಿ ಬದುಕಬೇಕಿದ್ದ ಜೋಡಿಗಳ ಬದುಕಲ್ಲಿ ವಿಧಿ ತನ್ನ ಕ್ರೂರ ಆಟವಾಡಿದ್ದು ಪತಿ-ಪತ್ನಿಯ ಸಾವಿನಿಂದ ಇಡೀ ಝುಂಜರವಾಡ ಗ್ರಾಮವೇ ಮಮ್ಮಲ ಮರುಗುತ್ತಿದೆ.