ಬೆಂಗಳೂರು ಸಿಟಿ ಪೊಲೀಸರ ನಿದ್ದೆಗೆಡೆಸಿದ್ದ ಕುಖ್ಯಾತ ಖತರ್ನಾಕ್ ಸರಕಳ್ಳನ ಬಂಧನವಾಗಿದೆ. ಪುಟ್ಟೇನಹಳ್ಳಿ ಪೊಲೀಸರ ಭರ್ಜರಿ ಕಾರ್ಯಾಚರಣೆಯಲ್ಲಿ ತಮಿಳುನಾಡು ಮೂಲದ ಸಂತೋಷ್ ಎಂಬಾತನನ್ನು ಬಂಧಿಸಲಾಗಿದೆ.
ಬೆಂಗಳೂರು (ಆ.26): ಬೆಂಗಳೂರು ಸಿಟಿ ಪೊಲೀಸರ ನಿದ್ದೆಗೆಡೆಸಿದ್ದ ಕುಖ್ಯಾತ ಖತರ್ನಾಕ್ ಸರಕಳ್ಳನ ಬಂಧನವಾಗಿದೆ. ಪುಟ್ಟೇನಹಳ್ಳಿ ಪೊಲೀಸರ ಭರ್ಜರಿ ಕಾರ್ಯಾಚರಣೆಯಲ್ಲಿ ತಮಿಳುನಾಡು ಮೂಲದ ಸಂತೋಷ್ ಎಂಬಾತನನ್ನು ಬಂಧಿಸಲಾಗಿದೆ. ಸಂತೋಷ್ ಜೊತೆಗೆ ಆತನಿಗೆ ಸಹಕರಿಸಿದ್ದ ಆರೋಪಿ ರವಿ ಕೂಡ ಬಂಧನವಾಗಿದೆ. ಬಂಧಿತನಿಂದ ಸುಮಾರು 1.5 ಕೋಟಿ ಮೌಲ್ಯದ 2.ಕೆ.ಜಿ. 510 ಗ್ರಾಂ. ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಎರಡು ಕಾರು, ನಾಲ್ಕು ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಸಂತೋಷ್ ಇಡೀ ಬೆಂಗಳೂರು ನಗರ ಸುತ್ತಿ ಸರಗಳ್ಳತನ ಮಾಡುತ್ತಿದ್ದ. ಬೆಳಗ್ಗೆ 5 ಗಂಟೆಗೆ ಮನೆ ಬಿಟ್ಟರೇ ಸರಗಳ್ಳತನ ಮಾಡುವವರೆಗೂ ಬೈಕ್ ನಲ್ಲಿ ಸುತ್ತಾಡುತ್ತಿದ್ದ. ನಕಲಿ ನಂಬರ್ ಪ್ಲೇಟ್ ಬಳಸಿ ಆರೋಪಿ ಈ ಕೃತ್ಯ ಎಸಗುತ್ತಿದ್ದ. ಟಾಟಾ ಏಸ್ ನಲ್ಲಿ ಬೈಕ್ ತಂದು ಕೃತ್ಯ ಎಸಗಿದ್ದ ಆರೋಪಿ, ಆರ್. ಟಿ.ಓ ವೆಬ್ ಸೈಟ್ ಗೆ ಹೋಗಿ ಬೈಕ್ ನಂಬರ್ ಸರ್ಚ್ ಮಾಡುತ್ತಿದ್ದ. ತನ್ನ ಪಲ್ಸರ್ ಬೈಕ್ ಕಲರ್ ಗೆ ಯಾವ ಯಾವ ನಂಬರ್ ಇದೆ ಎಂದು ಸರ್ಚ್ ಮಾಡಿ ಬಳಿಕ ಅದೇ ಕಲರ್ ಬೈಕ್ ನ ಬೇರೆ ಬೇರೆ ಬೈಕ್ ಗಳ ನಕಲಿ ನಂಬರ್ ಕಲೆಕ್ಟ್ ಮಾಡುತ್ತಿದ್ದ. ಆ ನಕಲಿ ನಂಬರ್ ಪ್ಲೇಟ್ ಬಳಸಿಕೊಂಡು ಚೈನ್ ಸ್ನ್ಯಾಚ್ ಮಾಡುತ್ತಿದ್ದ. ಎಲ್ಲಿಯೂ ಹೆಲ್ಮೆಟ್ ತೆಗೆಯದೇ ಬೈಕ್ ನಲ್ಲಿ ಓಡಾಟ ನಡೆಸುತ್ತಿದ್ದ ಸಂತೋಷ್. ಒಂಟಿ ಮಹಿಳೆಯರನ್ನೇ ಟಾರ್ಗೇಟ್ ಮಾಡಿ ಸರ ಎಗರಿಸುತ್ತಿದ್ದ. ಬೈಕ್ ನಲ್ಲಿ ಸುತ್ತಾಡುವಾಗ ಊಟಕ್ಕೆ ಹೋದರು ಹೆಲ್ಮೆಟ್ ತೆಗೆಯುತ್ತಿರಲಿಲ್ಲ.
ಕಳೆದ ಎರಡು ತಿಂಗಳಿಂದ ಪುಟ್ಟೇನಹಳ್ಳಿ ಪೊಲೀಸರು ಚೈನ್ ಸ್ನ್ಚಾರ್ ಸಂತೋಷ್ ಹಿಂದೆ ಬಿದ್ದಿದ್ದರು. ಪುಟ್ಟೇನಹಳ್ಳಿ ಠಾಣೆಯಲ್ಲಿ ಎರಡು ಕಡೆ ಸರಗಳ್ಳತನ ಮಾಡಿದ್ದ ಹೀಗಾಗಿ ಸುಮಾರು 300 ಕಿ.ಲೋ .ಮೀಟರ್ ಸಿಸಿಟಿವಿ ಪರಿಶೀಲನೆ ನಡೆಸಿದ್ದ ಪೊಲೀಸರು , ಬೆಂಗಳೂರು ನಗರದ, ಮಾದನಾಯಕನಹಳ್ಳಿ, ಪುಟ್ಟೇನಹಳ್ಳಿ, ಬ್ಯಾಡರಹಳ್ಳಿ, ವೈಯಾಲಿಕಾವಲ್ ,ಎಸ್.ಆರ್.ನಗರ ,ವಿಜಯ ನಗರ, ಮಲೇಶ್ವರಂ ,ಅಮೃತಹಳ್ಳಿಯಲ್ಲಿ ಕಳವು ಮಾಡಿದ್ದ. ಈತನನ್ನು ಹಿಡಿಯಲು ಬೆಂಗಳೂರು ನಗರ, ಗ್ರಾಮಾಂತರ ಪೊಲೀಸರು ತಲೆ ಕೆಡೆಸಿಕೊಂಡಿದ್ದರು. ಆದರೆ ಯಾರಿಗೂ ಕಳೆದ 4 ವರ್ಷದಿಂದ ಆರೋಪಿ ಸಿಕ್ಕಿರಲಿಲ್ಲ. ಪುಟ್ಟೇನಹಳ್ಳಿ ಪೊಲೀಸರು ಆರೋಪಿ ಸಂತೋಷ್ ಚಲನವಲನ ಬಗ್ಗೆ ಹದ್ದಿನ ಕಣ್ಣೀಟ್ಟಿದ್ದರು.
ಬೆಂಗಳೂರಲ್ಲಿ ವೆಪನ್ ಡೀಲರ್ ಅರೆಸ್ಟ್: ಗಣೇಶ ಹಬ್ಬ ವೇಳೆ ಗಲಭೆ ಸೃಷ್ಟಿಸಲು ಪ್ಲಾನ್?
ರಾತ್ರಿ ಹಗಲು ರೋಡ್ನಲ್ಲಿ ಕಾಯುತ್ತಿದ್ದ ಪುಟ್ಟೇನಹಳ್ಳಿ ಇನ್ಸ್ ಪೆಕ್ಟರ್ ಮುನಿರೆಡ್ಡಿ ತಂಡ. ಪಿಎಸ್ ಐ ಪ್ರಸನ್ನ ಕುಮಾರ್ , ರಮೇಶ್ ಹೂಗಾರ್, ಮನು ಹಾಗೂ ಸಿಬ್ಬಂದಿಗಳ ಹುಡುಕಾಟ. ಸಿಸಿಟಿವಿ ಕೊಟ್ಟಿತ್ತು ಆರೋಪಿ ಕ್ಲೂ. ಆರೋಪಿ ಸರಗಳ್ಳ ಸಂತೋಷ್ ಮುಖ ಚಹರೆ ಗೊತ್ತಿರಲಿಲ್ಲ. ಸಿಸಿಟಿವಿಯಲ್ಲಿ ಆರೋಪಿ ದೇಹದ ಮಾದರಿ, ಹೆಲ್ಮೆಟ್ ಹಾಗೂ ಬ್ಲೂ ಕಲರ್ ಶರ್ಟ್ ಬಗ್ಗೆ ಗೊತ್ತಾಗಿತ್ತು.
ಪರ ಪತ್ನಿ ಮೇಲಿನ ವ್ಯಾಮೋಹ, ಶಿವಮೊಗ್ಗ ಅನಾಮಧೇಯ ಗಲಭೆ ಪತ್ರದ ರಹಸ್ಯ ಬಯಲು!
ಇದರ ಆಧಾರದ ಮೇಲೆ ಆರೋಪಿ ಬಂಧಿಸಿದ ಪೊಲೀಸರು. ಅದ್ರಲ್ಲೂ ಆರೋಪಿ ಧರಿಸಿದ್ದ ಹೆಲ್ಮೆ ಟ್ ಮೇಲೆ ಇದ್ದ ವೈಟ್ ಕಲರ್ ಗೇರೆ ಆರೋಪಿ ಪತ್ತೆಗೆ ಸಹಕಾರವಾಗಿತ್ತು. ಸದ್ಯ 51 ಕೇಸ್ ಪತ್ತೆ ಮಾಡಿರುವ ಪುಟ್ಟೇನಹಳ್ಳಿ ಪೊಲೀಸರು. ಆರೋಪಿ ಸಂತೋಷ್ ಬಿ.ಕಾಂ.ಓದಿದ್ದ. ಬಳಿಕ ಮನೆ ಇಂಟಿರಿಯರ್ ಕೆಲಸ ಮಾಡುತ್ತಿದ್ದ. ಇಂಟಿರಿಯರ್ ಕೆಲಸದಿಂದ ಬರುವ ಹಣ ಸಾಕಾಗುತ್ತಿರಲಿಲ್ಲ. ಹೀಗಾಗಿ ಕಳೆದ 4 ವರ್ಷದಿಂದ ಚೈನ್ ಸ್ನ್ತಾಚ್ ಅನ್ನೇ ವೃತ್ತಿಯಾಗಿಸಿಕೊಂಡಿದ್ದ. 4 ವರ್ಷದಲ್ಲಿ ಒಂದು ಬಾರಿಯು ಅರೆಸ್ಟ್ ಆಗದ ಆರೋಪಿ ಸಂತೋಷ್ . ಸದ್ಯ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.