
ಕೊಪ್ಪಳ(ಏ.10): ಪತ್ನಿ ಕೊಲೆ ಮಾಡಿ ಬಳಿಕ ಪತಿ ಆತ್ಮಹತ್ಯೆಗೆ ಶರಣಾದ ಘಟನೆ ಕೊಪ್ಪಳ ತಾಲೂಕಿನ ಬುಡಶೇಟ್ನಾಳ್ ಗ್ರಾಮದಲ್ಲಿ ನಿನ್ನೆ(ಮಂಗಳವಾರ) ನಡೆದಿದೆ. ಲಕ್ಷ್ಮವ್ವ ವಾಲಿಕಾರ್(36) ಕೊಲೆಯಾದ ಮಹಿಳೆಯಾಗಿದ್ದಾಳೆ.
ನಿಂಗಪ್ಪ ವಾಲಿಕಾರ್(40) ಎಂಬಾತನೇ ಪತ್ನಿ ಲಕ್ಷ್ಮವ್ವ ವಾಲಿಕಾರ್‌ಳನ್ನ ಕೊಲೆ ಮಾಡಿದ್ದಾನೆ. ಪತ್ನಿ ಮೃತಪಟ್ಟ ಬಳಿಕ ನಿಂಗಪ್ಪ ವಾಲಿಕಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಂಗಳೂರು: ಹೋಟೆಲ್‌ನ 19ನೇ ಮಹಡಿಯಿಂದ ಜಿಗಿದು ಯುವಕ ಆತ್ಮಹತ್ಯೆ
ಮಲಗಿದ್ದ ವೇಳೆ ತಡರಾತ್ರಿ ಪತ್ನಿ ಲಕ್ಷ್ಮವ್ವಳ ತೆಲೆ ಮೇಲೆ ಕಲ್ಲು ಎತ್ತಿ ಹಾಕಿ ಪತಿ ನಿಂಗಪ್ಪ ವಾಲಿಕಾರ್ ಹತ್ಯೆ ಮಾಡಿದ್ದಾನೆ. ಈ ವೇಳೆ ಗ್ರಾಮಸ್ಥರು ಲಕ್ಷ್ಮವ್ವಳನ್ನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಲಕ್ಷ್ಮವ್ವ ಸಾವನ್ನಪ್ಪಿದ್ದಾಳೆ. ಬಳಿಕ ಪತಿ ನಿಂಗಪ್ಪ ವಾಲಿಕಾರ್ ಗ್ರಾಮದ ಹೊರವಲಯ ಜಮೀನಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ