ಕಾರು-ಬೈಕ್ ನಡುವೆ ಭೀಕರ ಅಪಘಾತ; ಯುಗಾದಿ ಹಬ್ಬದಂದೇ ಹೆಡ್‌ಕಾನ್ಸ್‌ಟೇಬಲ್ ದುರ್ಮರಣ!

By Ravi Janekal  |  First Published Apr 9, 2024, 10:49 PM IST

ಕಾರು-ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಹೆಡ್‌ ಕಾನ್ಸ್‌ಟೇಬಲ್ ಓರ್ವರು ಸ್ಥಳದಲ್ಲಿ ದುರ್ಮರಣಕ್ಕೀಡಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ತಂಗಲಿ ಅಂಡರ್‌ಪಾಸ್‌ನಲ್ಲಿ ನಡೆದಿದೆ.


ಚಿಕ್ಕಮಗಳೂರು (ಏ.9): ಕಾರು-ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಹೆಡ್‌ ಕಾನ್ಸ್‌ಟೇಬಲ್ ಓರ್ವರು ಸ್ಥಳದಲ್ಲಿ ದುರ್ಮರಣಕ್ಕೀಡಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ತಂಗಲಿ ಅಂಡರ್‌ಪಾಸ್‌ನಲ್ಲಿ ನಡೆದಿದೆ.

ಮಲ್ಲಿಕಾರ್ಜುನ್ (44) ಮೃತ ದುರ್ದೈವಿ. ಮೃತ ಮಲ್ಲಿಕಾರ್ಜುನ ಕಡೂರು ತಾಲೂಕಿನ ಚಟ್ಟನಹಳ್ಳಿಯವರು ಎಂದು ಹೇಳಲಾಗಿದೆ. ಕಡೂರು ಪೊಲೀಸ್ ಠಾಣೆಯಲ್ಲಿ ಹೆಡ್‌ ಕಾನ್ಸ್‌ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಇಂದು ಪ್ರಕರಣವೊಂದರ ಸ್ಥಳ ಮಹಜರ್ ಗೆ ಅಂಚೆಚೋಮನಹಳ್ಳಿಗೆ ಹೊರಟಿದ್ದ ವೇಳೆ ನಡೆದಿರುವ ಭೀಕರ ಅಪಘಾತ. ಡಿಕ್ಕಿಯಾದ ರಭಸಕ್ಕೆ ಗಂಭೀರ ಗಾಯಗೊಂಡಿದ್ದ ಮಲ್ಲಿಕಾರ್ಜುನ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿ ಮೃತಪಟ್ಟಿದ್ದಾರೆ. 

Tap to resize

Latest Videos

ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಅಪಘಾತ ನಡೆದ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ.

click me!