Crime News ಮದ್ವೆಯಾಗಿ 10 ತಿಂಗಳಿಗೆ ಜೀವನ ಸಾಕಾಯ್ತೆ? ಪತ್ನಿಯ ಶವ ನೋಡಿ ಪತಿಯೂ ಆತ್ಮಹತ್ಯೆ

By Suvarna News  |  First Published Feb 21, 2022, 2:26 PM IST

* ಮದ್ವೆಯಾಗಿ 10 ತಿಂಗಳಿಗೆ ಜೀವನ ಬೇಡವಾಯ್ತೆ? 
* ಪತ್ನಿಯ ಶವ ನೋಡಿ ಪತಿಯೂ ಆತ್ಮಹತ್ಯೆ
* ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಬಿರುನಾಣಿಯಲ್ಲಿ ಘಟನೆ


ಕೊಡಗು, (ಫೆ.21): ಈ ಜೋಡಿ ಮದುವೆಯಾಗಿ ಕೇವಲ 10 ತಿಂಗಳು ಆಗಿವೆ ಅಷ್ಟೇ. ಆಗಲೇ ಅದ್ಯಾಕೆ ಜೀವನ ಬೇಸರ ಅನ್ನಿಸಿತ್ತೋ ಏನೋ. ಒಬ್ಬರ ಹಿಂದೊಬ್ಬರಂತೆ ಇಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ.

ಹೌದು..ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ನೊಂದ ಪತಿಯೂ ಆತ್ಮಹತ್ಯೆಗೆ (Suicide) ಶರಣಾದ ಘಟನೆ ಕೊಡಗು (Kodagu) ಜಿಲ್ಲೆಯ ಪೊನ್ನಂಪೇಟೆಯ ಬಿರುನಾಣಿಯಲ್ಲಿ ಈ ಪ್ರಕರಣ ನಡೆದಿದ್ದು, ಯುವರಾಜ್ (25), ಪತ್ನಿ ಶಿಲ್ಪಾ (22) ಆತ್ಮಹತ್ಯೆ ಮಾಡಿಕೊಂಡಡವರು.

Tap to resize

Latest Videos

undefined

Crime News ವಿಚಿತ್ರ ಘಟನೆ, ಮೊಬೈಲ್‌ಗಾಗಿ ಸಾವಿನ ಹಾದಿ ಹಿಡಿದ ಯುವಕ, ಯುವತಿ

ಶ್ರೀಮಂಗಲ ವನ್ಯಜೀವಿ ವಿಭಾಗದ ವ್ಯಾಪ್ತಿಯ ಬಿರುನಾಣಿಯಲ್ಲಿ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಮೊಗ್ಗದ ಯುವರಾಜ್ ಕಳೆದ 10 ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದು, ಬಿರುನಾಣಿಯ ಸಿ.ಸತ್ಯ ಎಂಬವರ ಮನೆಯಲ್ಲಿ ವಾಸವಾಗಿದ್ದರು.

ಭಾನುವಾರ ಸಂಜೆ ಕರ್ತವ್ಯ ಮುಗಿಸಿ ಯುವರಾಜ್ ಮನೆಗೆ ಬಂದಾಗ ಪತ್ನಿ ಶಿಲ್ಪಾ ವೇಲ್'ನಿಂದ ಬಾತ್ ರೂಮ್'ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರೆನ್ನಲಾಗಿದ್ದು, ಇದನ್ನು ನೋಡಿ ಮನೆ ಮಾಲಕ ಸತ್ಯ ಅವರನ್ನು ಕರೆದು ಮೃತದೇಹವನ್ನು ಇಬ್ಬರೂ ಸೇರಿ ಇಳಿಸಿದ್ದಾರೆ.

ಈ ವಿಷಯವನ್ನು ಸಂಬಂಧಿಕರಿಗೆ ದೂರವಾಣಿ ಮೂಲಕ ತಿಳಿಸಿದ್ದ ಯುವರಾಜ್, ಸ್ವಲ್ಪ ಸಮಯದಲ್ಲೇ ಬಾತ್ ರೂಮ್'ಗೆ ಹೋಗಿ ಪತ್ನಿ ನೇಣು ಬಿಗಿದು ಕೊಂಡಿದ್ದ ವೇಲ್'ನಿಂದ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಇನ್ನು ಸ್ಥಳಕ್ಕೆ ಕೊಡಗು ವನ್ಯಜೀವಿ ಎ. ಸಿ.ಎಫ್.ದಯಾನಂದ್, ಶ್ರೀಮಂಗಲ ಆರ್.ಎಫ್.ಓ.ವೀರೇಂದ್ರ ಮರಿಬಸಣ್ಣವರ್ ಭೇಟಿ ನೀಡಿದ್ದಾರೆ.

ಹೆಂಡ್ತಿಯ ಅಣ್ಣ, ತಮ್ಮನಿಗೆ ನಡು ರಸ್ತೆಯಲ್ಲೆ ಚಾಕು ಇರಿದ
ಕೋಲಾರ(ಫೆ.21): ಕೌಟುಂಬಿಕ ಕಲಹ ಹಿನ್ನಲೆ ಭಾವ ಚಾಕುವಿನಿಂದ ಇರಿದು ಭಾಮೈದುನನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೋಲಾರ (Kolar) ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿ ಫೆ.20ರಂದು ರಾತ್ರಿ ನಡೆದಿದೆ. ಇಲ್ಲಿನ ಗೌತಮ್ ನಗರದ ನಿವಾಸಿಯಾದ ಬಿಜಿಪಿ (BJP) ಯುವ ಮುಖಂಡ (Youth Leader) ಬಾಬು, ಪತ್ನಿ ಸುನಿತಾ ಅವರ ಅಣ್ಣ ಸುರೇಶ್ ಗೆ ಚಾಕು ಇರಿದು ಕೊಲೆ ಮಾಡಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೆ ಸುರೇಶ್ (36) ಸಾವನ್ನಪ್ಪಿದ್ದಾರೆ.

ಮೃತ ಸುರೇಶ್ ತಮ್ಮ ಹರೀಶ್ (33) ಗು ಆರೋಪಿ ಬಾಬು ಚಾಕು ಇರಿದಿದ್ದು, ಕೋಲಾರದ ಆರ್ ಎಲ್ ಜಾಲಪ್ಪ ಆಸ್ಪತ್ರೆಗೆ ಹರೀಶ್ ನನ್ನ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಹರೀಶ್ ಅವರ ಸ್ತಿತಿ ಗಂಭೀರವಾಗಿದ್ದು, ಐ.ಸಿ.ಯು ನಲ್ಲಿ (ICU) ಚಿಕಿತ್ಸೆ ನೀಡುತ್ತಿರುವ ವೈದ್ಯರು ಮುಂದಿನ 48 ಗಂಟೆ ಕಳೆಯುವವರೆಗು ಆರೋಗ್ಯ ಪರಿಸ್ತಿತಿ ಕುರಿತು ಯಾವುದೆ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಟ್ರ್ಯಾಕ್ಟರ್​ನಿಂದ ಕಬ್ಬು ಕೀಳಲು ಹೋದ ಬಾಲಕನ ಸಾವು
ಬೆಳಗಾವಿ: ಬೈಲಹೊಂಗಲ ತಾಲೂಕಿನ ಅಮಟೂರು ಗ್ರಾಮದಲ್ಲಿ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ನಿಂದ ಕಬ್ಬು ಕಿತ್ತುಕೊಳ್ಳಲು ಹೋಗಿ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ. ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿದ 8 ವರ್ಷದ ಬಾಲಕ ಅನಿಲ್ ಹಣಬರ್ ಮೃತಪಟ್ಟಿದ್ದಾನೆ. ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ಬಾಲಕ ನರಳಾಡುವ ದೃಶ್ಯವನ್ನು ಮೊಬೈಲ್​ನಲ್ಲಿ ರೆಕಾರ್ಡ್ ಮಾಡಿರುವ ಕೆಲವರು ಸಾಮಾಜಿಕ ಜಾಲತಾಣಗಳಿಗೆ ಹರಿಬಿಟ್ಟಿದ್ದಾರೆ. ಅಮಟೂರು ಗ್ರಾಮದಲ್ಲಿ ನಿನ್ನೆ (ಫೆ.18) ಸಂಜೆ ಈ ಘಟನೆ ನಡೆದಿದೆ.

ವಿದ್ಯಾರ್ಥಿ ಆತ್ಮಹತ್ಯೆ

ಬಳ್ಳಾರಿ: ಪೋಷಕರು ಮೊಬೈಲ್‌ ಕೊಡಿಸದ ಕಾರಣ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಟ್ಟೂರು ತಾಲ್ಲೂಕಿನ ತೂಲಹಳ್ಳಿ ಗ್ರಾಮದಲ್ಲಿ ನಡೆದಿದೆ. ನಾಗರಾಜ್‌ (17) ಆತ್ಮಹತ್ಯೆಗೆ ಶರಣಾದವರು. ವಿದ್ಯಾರ್ಥಿ ಪ್ರಥಮ ಪಿಯುಸಿ ಓದುತ್ತಿದ್ದ. ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!