ರಾಣೆಬೆನ್ನೂರು: ಹೆಂಡತಿಯನ್ನು ಮಚ್ಚಿನಿಂದ ಕೊಲೆಗೈಯಲು ಯತ್ನಿಸಿದ ಪತಿ

By Suvarna News  |  First Published Jan 23, 2021, 1:56 PM IST

ಕಳೆದೊಂದು ತಿಂಗಳಿನಿಂದ ದಂಪತಿ ಪರಸ್ಪರ ಕಿತ್ತಾಡಿಕೊಳ್ಳುತ್ತಿದ್ದ ದಂಪತಿ| ಹಾವೇರಿ ಜಿಲ್ಲೆಯ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಲಗೇರಿ ಕ್ರಾಸ್ ಬಳಿ ನಡೆದ ಘಟನೆ| ಪತ್ನಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಗಂಡ| 


ಹಾವೇರಿ(ಜ.23): ಪತಿಯೊಬ್ಬ ತನ್ನ ಹೆಂಡತಿಯನ್ನು ಮಚ್ಚಿನಿಂದ ಹಲ್ಲೆಮಾಡಿ ಕೊಲೆಗೈಯಲು ಯತ್ನಿಸಿದ ಘಟನೆ ಹಾವೇರಿ ಜಿಲ್ಲೆಯ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಲಗೇರಿ ಕ್ರಾಸ್ ಬಳಿ ಇಂದು(ಶನಿವಾರ) ನಡೆದಿದೆ. 

ಮಹದೇವಕ್ಕ ಎಂಬಾಕೆಯ ಮೇಲೆ ಪತಿ ಮೈಲಾರ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಕಳೆದೊಂದು ತಿಂಗಳಿನಿಂದ ದಂಪತಿ ಪರಸ್ಪರ ಕಿತ್ತಾಡಿಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ.

Tap to resize

Latest Videos

ಬೆಳಗಾವಿ: ಆಸ್ತಿ ವಿವಾದಕ್ಕೆ ಏನೂ ಅರಿಯದ ನಾಲ್ಕು ವರ್ಷದ ಬಾಲಕ ಬಲಿ

ಈ ದಂಪತಿಗಳು ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಅರೆಮಲ್ಲಾಪೂರ ಗ್ರಾಮದ ನಿವಾಸಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ರಾಣೆಬೆನ್ನೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

click me!