ವಿಚ್ಛೇದನ ಕೊಡಲು ಒಪ್ಪದ ಪತ್ನಿ ವಿರುದ್ಧ ಸಂಚು ಮಾಡಿದ ಪತಿ, ಹೆಂಡತಿಯ ತಂದೆ ಸೇರಿದಂತೆ ಮೂವರ ಮೇಲೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿರುವ ಘಟನೆ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ನಾರಾಯಣಪುರದಲ್ಲಿ ನಡೆದಿದೆ.
ಯಾದಗಿರಿ (ಜೂ.29): ವಿಚ್ಛೇದನ ಕೊಡಲು ಒಪ್ಪದ ಪತ್ನಿ ವಿರುದ್ಧ ಸಂಚು ಮಾಡಿದ ಪತಿ, ಹೆಂಡತಿಯ ತಂದೆ ಸೇರಿದಂತೆ ಮೂವರ ಮೇಲೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿರುವ ಘಟನೆ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ನಾರಾಯಣಪುರದಲ್ಲಿ ನಡೆದಿದೆ. ಈ ಘಟನೆಯಲ್ಲಿ ಗಾಯಗೊಂಡ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. ಕೌಟುಂಬಿಕ ಕಲಹ ಕಾರಣದಿಂದ ಪತಿಯನ್ನು ಬಿಟ್ಟು ಲಿಂಗಸೂರಿನಲ್ಲಿ ವಾಸಿಸುತ್ತಿದ್ದ ಪತ್ನಿ ಹುಲಿಗಮ್ಮರಿಗೆ ವಿಚ್ಛೇದನ ನೀಡುವಂತೆ ಆರೋಪಿ ಶರಣಪ್ಪ ಬೆದರಿಕೆ ಹಾಕುತ್ತಿದ್ದ. ಅಲ್ಲದೇ ವಿಚ್ಛೇದನ ವಿಚಾರಕ್ಕೆ ಮಾತುಕತೆಗೆ ಬರುವಂತೆ ಪತ್ನಿಯ ಸಂಬಂಧಿಕರನ್ನು ತನ್ನೂರಾದ ನಾರಾಯಣಪುರಕ್ಕೆ ಆರೋಪಿ ಶರಣಪ್ಪ ಆಹ್ವಾನಿಸಿದ್ದಾನೆ.
ಆತನ ಮನೆಯ ಕೋಣೆಯೊಂದರಲ್ಲಿ ಮಾತುಕತೆಗೆ ಕುಳಿತಿದ್ದಾಗ, ಹೊರಗಡೆಗೆ ಬಂದು ಬಾಗಿಲು ಕೀಲಿ ಹಾಕಿ, ಕೋಣೆಯ ಕಿಟಕಿಯಿಂದ ನಾಲ್ವರು ಸಂಬಂಧಿಕರ ಮೇಲೆ ಪೆಟ್ರೋಲ್ ಸುರಿದು ಆರೋಪಿ ಶರಣಪ್ಪ ಬೆಂಕಿ ಹಚ್ಚಿದ್ದಾನೆ.
undefined
ಬಳಿಕ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಿಂದ ಆಗಮಿಸಿದ್ದ ಪತ್ನಿಯ ಸಂಬಂಧಿಕರು, ಸಮೀಪದ ಲಿಂಗಸೂಗೂರು ಹಾಗೂ ರಾಯಚೂರು ಜಿಲ್ಲಾಸ್ಪತ್ರೆಗಳಿಗೆ ಗಾಯಾಳುಗಳನ್ನು ರವಾನಿಸಿದ್ದು, ಗಾಯಾಳುಗಳಾದ ಸಿದ್ಧರಾಮಪ್ಪ ಮುರಾಳ, ಮುತ್ತಪ್ಪ ಮುರಾಳ, ನಾಗಪ್ಪ ಹಾಗರಗೊಂಡ, ಶರಣಪ್ಪ ಸರೂರು ಅವರುಗಳ ಪರಿಸ್ಥಿತಿ ಗಂಭೀರವಾಗಿದೆ.
ತುಮಕೂರಿನಲ್ಲಿ ತಲೆ ಎತ್ತಿದೆ ನಕಲಿ ಚೈನ್ ಲಿಂಕ್ ಆನ್ಲೈನ್ ಕಂಪನಿ: ವಿದ್ಯಾರ್ಥಿಗಳೇ ಇವ್ರ ಮೈನ್ ಟಾರ್ಗೆಟ್
ಡಿವೋರ್ಸ್ ಕೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ: ಆತ ಕಳೆದ 10 ವರ್ಷದ ಹಿಂದೆ ಮದುವೆಯಾಗಿತ್ತು. ಅವರಿಬ್ಬರ ಸಂಸಾರಕ್ಕೆ ಸಾಕ್ಷಿಯಾಗಿ ಇಬ್ಬರೂ ಮಕ್ಕಳು ಇದ್ದಾರೆ. ಆದರೆ 5 ವರ್ಷದ ಹಿಂದೆ ಅವರಿಬ್ಬರ ಸಂಸಾರದಲ್ಲಿ ಬಿರುಕು ಉಂಟಾಗಿ ಅವನ ಹೆಂಡತಿ ಮನೆ ಬಿಟ್ಟು ಹೋಗಿದ್ದಳು. ಗಲಾಟೆಯಾಗಿ ತವರು ಮನೆಯವರು ಹಲ್ಲೆ ಮಾಡಿದ್ದರು. ಹೀಗಾಗಿ ಹೆಂಡತಿ ಬೇಡವೇಂದು ಗಂಡ ಕೋರ್ಟ್ ಮೆಟ್ಟಿಲು ಹತ್ತಿದ್ದ. ಎರಡು ಬಾರಿ ಕೋರ್ಟ್‌ನಲ್ಲಿ ಆತನ ಪರ ಸಾಕ್ಷಿಯಾಗಿತ್ತು. ಈಗ ಮತ್ತೆ ಕೋರ್ಟ್‌ಗೆ ಹಾಜರಾಗಬೇಕಿತ್ತು. ಹಾಗಾಗಿ ಸಾಕ್ಷಿ ಆತನ ಪರವಾಗಿ ಕೇಸ್ ಗೆಲ್ಲುತ್ತಾನೆ ಅಂತ ಹೆಂಡತಿ ಏನು ಮಾಡಿದ್ದಾಳೆ ಗೊತ್ತಾ. ಆ ಕುರಿತ ಒಂದು ವರದಿ ಇಲ್ಲಿದೆ ನೋಡಿ.
Dharwad: ನಾನು ನೂಪುರ್ ಶರ್ಮಾ ಬೆಂಬಲಿಸುತ್ತೇನೆ, ತಾಕತ್ ಇದ್ರೆ ನನ್ನನ್ನ ತಡಿರಿ ಎಂದ ಮುತಾಲಿಕ್
ಹೀಗೆ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿರುವ ಈತನ ಹೆಸರು ಗಜಾನನ ಶಿರಗಣ್ಣವರ್ ಅಂತ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ವಡ್ರಾಳ ಗ್ರಾಮದ ನಿವಾಸಿ ಕಳೆದ 10 ವರ್ಷದ ಹಿಂದೆ ಅದೇ ಗ್ರಾಮದ ಗ್ರಾಮದ ರುಕ್ಮಿಣಿ ಎನ್ನುವವಳ ಜೊತೆ ಮದುವೆಯಾಗಿದ್ದ ಗಜಾನನ. ಇವರಿಬ್ಬರ ಸಂಸಾರಕ್ಕೆ ಸಾಕ್ಷಿಯಾಗಿ ಇಬ್ಬರು ಮಕ್ಕಳು ಕೂಡ ಇದ್ದಾರೆ. ಕಳೆದ ಐದು ವರ್ಷದ ಹಿಂದೆ ಈತನ ಸಂಸಾರದಲ್ಲಿ ಕಲಹ ಉಂಟಾಗಿ ಗಂಡ ಬೇಡವೆಂದು ಈತನ ಹೆಂಡತಿ ರುಕ್ಮಿಣಿ ದೂರವಾಗಿದ್ದಳು. ಇಂದು ಅದೇ ಹೆಂಡತಿ ತನ್ನ ಸಂಬಂಧಿಕರೊಂದಿಗೆ ಬಂದು ಗಂಡ ಹಾಗೂ ಅತ್ತೆಯ ಮೇಲೆ ಕುಡಗೋಲಿನಿಂದ ಆತನ ಕಾಲು ತಲೆ ಸೇರಿದಂತೆ ಎದೆಯ ಮೇಲೆ ಕಲ್ಲು ಎತ್ತಿಹಾಕಿ ಮರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.