* ಪ್ರೀತಿಸಿ ಮದ್ವೆಯಾದವಳ ಮೇಲೆ ಪತಿ ಅನುಮಾನ
* ಅನುಮಾನಪಟ್ಟವನನ್ನು ಅನುಮಾನದಿಂದಲೇ ಪೊಲೀಸ್ರ ತನಿಖೆ
* ಅದೇ ಅನುಮಾನದಿಂದಲೇ ಪತಿ ಅಂದರ್
ಹಾಸನ, (ಮಾ.08): ಪ್ರೀತಿಸಿ ಮದುವೆಯಾದವಳಿಗೆ(Love Marriage) ಪತಿಯೇ ಸೀಮೆ ಎಣ್ಣೆ ಸುರಿದು ಹತ್ಯೆಗೆ ಯತ್ನಿಸಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮರಡಿಕೆರಿ ಗ್ರಾಮದಲ್ಲಿ ನಡೆದಿದೆ.
ಮರಡಿಕೆರಿ ಗ್ರಾಮದ ಸತೀಶ್ ಎಂಬಾತ ಪತ್ನಿ ಭವ್ಯ(22) ಮೇಲೆ ಅಮಾನವೀಯವಾಗಿ ದಾಳಿ ನಡೆಸಿದ್ದಾನೆ. ಪ್ರೀತಿಸಿ ಮದುವೆಯಾಗಿದ್ದ ಮಡದಿ ಮೇಲಿನ ಅನುಮಾನದಿಂದ ಆಕೆ ಮಲಗಿದ್ದ ವೇಳೆ ಮೈ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ್ದಾನೆ. ಮಹಿಳೆ ದೇಹ ಶೇಕಡಾ 70 ರಷ್ಟು ಸುಟ್ಟು ಹೋಗಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾಳೆ.
ಮದುವೆ ಬಳಿಕವೂ ಮುಂದುವರೆದ ಅಕ್ರಮ ಸಂಬಂಧ, ಮನೆಯವರೊಂದಿಗೆ ಸೇರಿ ಪ್ರೇಮಿಯ ಹತ್ಯೆ!
ತನಿಖೆ ವೇಳೆ ಬಯಲಾಯ್ತು ಪತಿ ನೀಚ ಕೃತ
ಹೌದು...ಗ್ಯಾಸ್ ಲೀಕ್ ಆಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಿಕೆ ಕೊಡಿಸಿದ್ದ. ಇದರಿಂದ ಪೊಲೀಸರು ಅನುಮಾನ ಬಂದಿದ್ದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಆಗ ಮಹಿಳೆಗೆ ಬೆಂಕಿ ಹಚ್ಚಿವುದಕ್ಕೆ ಕಾರಣ ಬಟಾಬಯಲಾಗಿದೆ.
ಐದು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಸತೀಶ್ ಮತ್ತು ಭವ್ಯ ಇಬ್ಬರೂ ಮದುವೆಯಾಗಿದ್ದರು. ಮದುವೆಯಾದ ಕೆಲವೇ ವರ್ಷದಲ್ಲಿ ಪತ್ನಿ ಮೇಲೆ ಪತಿಗೆ ಅನುಮಾನ ಹುಟ್ಟುಕೊಂಡಿದೆ. ಇದೇ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿ ಮಾರ್ಚ್ 5 ರ ಶನಿವಾರ ಪತ್ನಿ ಹತ್ಯೆಗೆ ಸತೀಶ್ ಸಂಚು ರೂಪಿಸಿದ್ದಾನೆ. ಪತ್ನಿ ಮಲಗಿದ್ದಾಗ ಬೆಂಕಿ ಹಚ್ಚಿ ಕೊಲೆ ಮಾಡಲು ಮುಂದಾಗಿದ್ದಾನೆ. ಅದೃಷ್ಟವಶಾತ್ ಆಕೆ ಉಸಿರಾಡುತ್ತಿದ್ದು ಆಕೆ ಬದುಕುಳಿದಾಗ ಗ್ಯಾಸ್ ಲೀಕ್ ಆಗಿ ಬೆಂಕಿ ಬಿದ್ದಿದ್ದಾಗಿ ಹೇಳಿಕೆ ನೀಡುವಂತೆ ಪತ್ನಿಯನ್ನು ಬೆದರಿಸಿ ಹೇಳಿಕೆ ಕೊಡಿಸಿದ್ದಾನೆ.
ಗ್ಯಾಸ್ ಲೀಕ್ ಆಗಿ ಬೆಂಕಿ ಹೊತ್ತಿಕೊಂಡ ಬಗ್ಗೆ ಭವ್ಯ ಹೇಳಿಕೆ ನೀಡಿದ್ದರು. ಆದ್ರೆ ಘಟನೆ ಬಗ್ಗೆ ಅನುಮಾನದಿಂದ ತನಿಖೆ ನಡೆಸಿದಾಗ ಪೊಲೀಸರಿಗೆ ಘಟನೆ ಹಿಂದಿನ ಮರ್ಮದ ಸತ್ಯ ತಿಳಿದಿದೆ. ಅನುಮಾನದ ಪತಿಯ ರಹಸ್ಯ ಬಯಲಾಗಿದೆ. ಸದ್ಯ ಆರೋಪಿ ಪತಿ ಸತೀಶ್ನನ್ನ ಪೊಲೀಸರು ಬಂಧಿಸಿದ್ದಾರೆ. ಸಕಲೇಶಪುರ ತಾಲೂಕಿನ ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೈತ ಮಹಿಳೆಯರು
ಗದಗ: ರೈತರನ್ನು ಒಕ್ಕಲೆಬ್ಬಿಸುತ್ತಿದ್ದಾರೆ ಎಂದು ರೈತ ಮಹಿಳೆಯರಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೇಲೂರು ಗ್ರಾಮದಲ್ಲಿ ನಡೆದಿದೆ.
ಅರಣ್ಯಾಧಿಕಾರಿಗಳು ರೈತರನ್ನು ಒಕ್ಕಲೆಬ್ಬಿಸಿ, ಬೆಳೆದ ಬೆಳೆಯನ್ನು ಜೆಸಿಬಿಯಿಂದ ನಾಶಪಡಿಸಿದ್ದಾರೆ ಎಂದು ಆರೋಪಿಸಿ, ರೈತ ಮಹಿಳೆಯರಾದ ಸರೋಜವ್ವ ಹಾಗೂ ನಿರ್ಮಲಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅರಣ್ಯಾಧಿಕಾರಿಗಳು ರೈತರನ್ನು ಒಕ್ಕಲೆಬ್ಬಿಸಿ, ಬೆಳೆದ ಬೆಳೆಯನ್ನು ಜೆಸಿಬಿಯಿಂದ ನಾಶಪಡಿಸಿದ್ದಾರೆ ಎಂದು ಆರೋಪಿಸಿ, ರೈತ ಮಹಿಳೆಯರಾದ ಸರೋಜವ್ವ ಹಾಗೂ ನಿರ್ಮಲಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅರಣ್ಯ ಜಾಗದಲ್ಲಿ ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದ ನೂರಾರು ರೈತರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಒಕ್ಕಲೆಬ್ಬಿಸುತ್ತಿದ್ದು, ಬಿತ್ತಿದ ಜಮೀನನ್ನೇ ಜೆಸಿಬಿ ಮೂಲಕ ತೆರವುಗೊಳಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರ ವಿರುದ್ಧ ರೈತರು ಕೆಲ ದಿನಗಳ ಹಿಂದೆ ಪ್ರತಿಭಟನೆ ನಡೆಸಿದ್ದರು. ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದ ಅಧಿಕಾರಿಗಳು ಇದೀಗ ಮತ್ತೆ ಕಿರುಕುಳ ನೀಡಿ ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.