ಬಾಡಿಗೆಗೆ ಪಡೆಯುವ ನೆಪದಲ್ಲಿ ಕ್ಯಾಮರಾ ಕಳವು ಮಾಡಿ, ಓಎಲ್‌ಎಕ್ಸ್‌ನಲ್ಲಿ ಮಾರಾಟ ಮಾಡುತ್ತಿದ್ದ ಖತರ್ನಾಕ್ ಕಳ್ಳನೊಬ್ಬನನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಮಾ.7): ಬಾಡಿಗೆಗೆ ಪಡೆಯುವ ನೆಪದಲ್ಲಿ ಕ್ಯಾಮರಾ (Camera) ಕಳವು ಮಾಡಿ, ಓಎಲ್‌ಎಕ್ಸ್‌ನಲ್ಲಿ (OLX) ಮಾರಾಟ ಮಾಡುತ್ತಿದ್ದ ಖತರ್ನಾಕ್ ಕಳ್ಳನೊಬ್ಬನನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ (Arrest). ಮಾಲೂರು ಮೂಲದ ಪುರುಷೋತ್ತಮ್(26) ಬಂಧಿತ. ಆರೋಪಿ ನೀಡಿದ ಮಾಹಿತಿ ಮೇರೆಗೆ ಸುಮಾರು 3.65 ಲಕ್ಷ ರು. ಮೌಲ್ಯದ ಐದು ಕ್ಯಾಮರಾ ಹಾಗೂ ಲೆನ್ಸ್‌ಗಳನ್ನು ಜಪ್ತಿ ಮಾಡಲಾಗಿದೆ.
ಆರೋಪಿಯು ಫೆ.22ರಂದು ಕ್ಯಾಮರಾ ಬಾಡಿಗೆ ಪಡೆಯುವ ನೆಪದಲ್ಲಿ ಚಂದ್ರಾಲೇಔಟ್‌ನ ಚೇತನ್ ಎಂಬುವವರ ಇಂಪೈಂಟ್ ವಿಂಗ್ಸ್ ಸ್ಟುಡಿಯೋಗೆ ಬಂದಿದ್ದು, ಫೋಟೋ ಕ್ಲಾರಿಟಿ ನೋಡುವುದಾಗಿ ಸ್ಟುಡಿಯೋದಿಂದ ಆಚೆ ಬಂದು ಕ್ಯಾಮರಾ ಸಮೇತ ಪರಾರಿಯಾಗಿದ್ದ. ಈ ಸಂಬಂಧ ದಾಖಲಾಗಿದ್ದ ದೂರಿನ ಮೇರೆಗೆ ಕಾರ್ಯಾಚರಣೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಮಿಳುನಾಡು ಕೃಷ್ಣಗಿರಿ ಮೂಲದ ಆರೋಪಿ ಪುರುಷೋತ್ತಮ್ ಕ್ಯಾಮರಾಗಳ ಬಗ್ಗೆ ಆಸಕ್ತನಾಗಿದ್ದ. ಆರಂಭದಲ್ಲಿ ಕೃಷ್ಣಗಿರಿಯಲ್ಲಿ ಸ್ಟುಡಿಯೊಗಳಲ್ಲಿ ಕ್ಯಾಮರಾ ಬಾಡಿಗೆಗೆ ಪಡೆದು ಫೋಟೋ ತೆಗೆಯುತ್ತಿದ್ದ.
ಬಳಿಕ ಸುಲಭವಾಗಿ ಹಣಗಳಿಸುವ ಉದ್ದೇಶದಿಂದ ಬಾಡಿಗೆ ನೆಪದಲ್ಲಿ ಕ್ಯಾಮರಾ ಪಡೆದು, ಓಎಲೆಕ್ಸ್‌ನಲ್ಲಿ ಕ್ಯಾಮರಾ ಮಾರಾಟ ಮಾಡುತ್ತಿದ್ದ. ಈ ಸಂಬಂಧ ಹಲವು ಬಾರಿ ಜೈಲು ಸೇರಿದ್ದ. ಹೀಗಾಗಿ ಮನೆಯವರು ಈತನನ್ನು ಮನೆಯಿಂದ ಹೊರಹಾಕಿದ್ದರು. ಹೀಗಾಗಿ ಆರೋಪಿ ಕೆಲ ವರ್ಷಗಳಿಂದ ಕೋಲಾರದ ಮಾಲೂರಿಗೆ ಬಂದು ಸೂಪರ್ ಮಾರ್ಕೆಟ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಎಂದು ವಿಚಾರಣೆಯಿಂದ ತಿಳಿದು ಬಂದಿದೆ.
Bengaluru Crime: ಮಹಿಳೆಯರಿಗೆ ಅಶ್ಲೀಲ ಸಂದೇಶ ಕಳಿಸುತ್ತಿದ್ದ ಕಾಮುಕನ ಬಂಧನ
ಕ್ಲಾರಿಟಿ ನೋಡುವುದಾಗಿ ಪರಾರಿ: ಆರೋಪಿ ಪುರುಷೋತ್ತಮ್ ನಗರದ ಹಲವೆಡೆ ಬಾಡಿಗೆಗೆ ಕ್ಯಾಮರಾ ಸಿಗುವ ಸ್ಟುಡಿಯೊಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯುತ್ತಿದ್ದ. ಫೋಟೊ ಕ್ಲಾರಿಟಿ ನೋಡುವುದಾಗಿ ಸ್ಟುಡಿಯೊದಿಂದ ಹೊರಗೆ ಕ್ಯಾಮರಾ ತಂದು ಬಳಿಕ ಕ್ಷಣಮಾತ್ರದಲ್ಲಿ ಪರಾರಿಯಾಗುತ್ತಿದ್ದ. ಬಳಿಕ ಓಎಲೆಕ್ಸ್‌ನಲ್ಲಿ ಕ್ಯಾಮರಾಗಳನ್ನು ಮಾರಾಟ ಮಾಡುತ್ತಿದ್ದ.
ಚಂದ್ರಾಲೇಔಟ್‌ನಲ್ಲಿಯೂ ಆರೋಪಿ ಫೋಟೋ ಕ್ಲಾರಿಟಿ ನೋಡುವುದಾಗಿ ಸ್ಟುಡಿಯೊದಿಂದ ಕ್ಯಾಮರಾ ಹೊರಗೆ ತಂದು ಫೋಟೋ ತೆಗೆಯುವ ಹಾಗೆ ನಟಿಸಿ, ಬಳಿಕ ಸ್ಟುಡಿಯೊ ಮಾಲೀಕ ಚೇತನ್ ಎದುರೇ ಕ್ಯಾಮರಾದೊಂದಿಗೆ ಓಡಿ ಹೋಗಿದ್ದ. ಆರೋಪಿಯು ಶ್ರೀರಂಗಪಟ್ಟಣ, ಬೆಂಗಳೂರು, ಮುಂಬೈ, ಹೊಸೂರು ಸೇರಿದಂತೆ ರಾಜ್ಯ ಹಾಗೂ ಹೊರಾಜ್ಯಗಳ ಗಿರಾಕಿಗಳಿಗೆ ಕ್ಯಾಮರಾ ಮಾರಾಟ ಮಾಡಿರುವುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೆಣ್ಣಿನ ಸಂಗಕ್ಕಾಗಿ ಕಳ್ಳತನವನ್ನೇ ಕಸುಬು ಮಾಡಿಕೊಂಡದಿದ್ದ ಬೆಂಗಳೂರು 'ತೀಟೆ ತಾತ: ಭಲೇ ತಾತ.. ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪೇ.... ತೀಟೆ ತೀರದ ತಾತನ ಕಥೆ ಕೇಳಿ ಪೊಲೀಸರೇ (Benghaluru Police) ಥಂಡಾ ಹೊಡೆದಿದ್ದಾರೆ. ಹೆಣ್ಣು ಮಕ್ಕಳ ಚಟಕ್ಕೆ (Prostitution) ಬಿದ್ದು ಕಳ್ಳತನಕ್ಕೆ ಇಳಿದಿದ್ದ ವೃದ್ಧ ಸೆರೆ ಸಿಕ್ಕಿದ್ದಾನೆ. ರಮೇಶ್ (70) ಬಂಧಿತ ವೃದ್ಧ, ಮನೆಗಳ್ಳತನ ಪ್ರಕರಣಗಳ ಸಂಬಂಧಗಳ ತನಿಖೆ ವೇಳೆ ಈತನ ಅಸಲಿತನ ಬಟಾಬಯಲಾಗಿದೆ.
Theft Cases in Bengaluru: ಬೀಗ ಹಾಕಿದ್ದ ಮನೆಗಳಿಗೆ ಕನ್ನ ಹಾಕ್ತಿದ್ದ ಗ್ಯಾಂಗ್ ಅರೆಸ್ಟ್
ಸಿಸಿಟಿವಿ (CCTV) ಆಧರಿಸಿ ವೃದ್ಧನ ಬಂಧನ ಮಾಡಲಾಗಿತ್ತು. ಬಳಿಕ ವಿಚಾರಣೆ ವೇಳೆ ಆರೋಪಿಯ ಹೆಣ್ಣು ಮಕ್ಕಳ ಚಟ ಬಯಲಿದೆ ಬಂದಿದೆ. ಎರಡು ಮದುವೆ, ಮೂರು ಮಕ್ಕಳಾದರೂ ಈತನ ಆಸೆ ಕಡಿಮೆ ಆಗಿರಲಿಲ್ಲ! ತನ್ನ ಚಟಕ್ಕೆ ಮನೆಯಲ್ಲಿ ಹಣ ಕೊಡುತ್ತಿಲ್ಲ ಎಂಬ ಕಾರಣಕ್ಕೆ ಕಳ್ಳತನಕ್ಕೆ ತಾತ ಇಳಿದಿದ್ದ. ಮೂಲತಃ ಚಿಕ್ಕಮಗಳೂರಿನ ರಮೇಶ್ ಕಳೆದ 12 ವರ್ಷಗಳ ಹಿಂದೆ ಮನೆಯ ತೊರೆದು ತಮಿಳುನಾಡಿಗೆ ತೆರಳಿದ್ದ. ಸಣ್ಣಪುಟ್ಟ ಕಳ್ಳತನ ಮಾಡಿಕೊಂಡು ಬಂದ ಹಣದಲ್ಲಿ ವ್ಯಾಮೊಹ ತೀರಿಸಿಕೊಳ್ಳುತಿದ್ದ.
ಆದ್ರೆ ಯಾವಾಗ ತಮಿಳುನಾಡು ಪೊಲೀಸರು ಬಂಧಿಸಿದ್ರೋ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬೆಂಗಳೂರು ಸೇರಿದ್ದ.ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಮನೆಗಳ್ಳತನ ಶುರು ಹಚ್ಚಿಕೊಂಡಿದ್ದ. ಸುದ್ದುಗುಂಟೆ ಪಾಳ್ಯ ಹಾಗೂ ಮೈಕೊಲೇಔಟ್ ಠಾಣೆಗಳಲ್ಲಿ ಪ್ರತ್ಯೇಕ ಕಳ್ಳತನ ಮಾಡಿದ್ದ. ಸಿಸಿಟಿವಿ ಆಧರಿಸಿ ಆರೋಪಿ ಬಂಧಿಸಿರುವ ಸುದ್ದುಗುಂಟೆ ಪೊಲೀಸರು ತಾತನಿಂದ 170 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.