ವಿಧಿ ಎಷ್ಟು ಕ್ರೂರಿ... ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಬಲಿ

By Govindaraj S  |  First Published Sep 30, 2024, 8:12 PM IST

ವಿಧಿ ಎಷ್ಟು ಕ್ರೂರಿ ಅನ್ನೊದಕ್ಕೆ ಇದು ಸಾಕ್ಷಿ. ಒಂದೇ ಕುಟುಂಬದ ನಾಲ್ಕು ಮಂದಿ ಕ್ಷಣ ಮಾತ್ರದಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ. ಇನ್ನೂ ಬಾಳಿ ಬದುಕ ಬೇಕಾದ ಮೂವರು ಮಕ್ಕಳು ತಂದೆಯ ಜೊತೆ ಇಹಲೋಕ ತ್ಯಜಿಸಿದ್ದಾರೆ.


ಉಡುಪಿ (ಸೆ.30): ವಿಧಿ ಎಷ್ಟು ಕ್ರೂರಿ ಅನ್ನೊದಕ್ಕೆ ಇದು ಸಾಕ್ಷಿ. ಒಂದೇ ಕುಟುಂಬದ ನಾಲ್ಕು ಮಂದಿ ಕ್ಷಣ ಮಾತ್ರದಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ. ಇನ್ನೂ ಬಾಳಿ ಬದುಕ ಬೇಕಾದ ಮೂವರು ಮಕ್ಕಳು ತಂದೆಯ ಜೊತೆ ಇಹಲೋಕ ತ್ಯಜಿಸಿದ್ದಾರೆ. ಮುದ್ದು ಕಂದಮ್ಮಗಳು  ರಕ್ತದ ಮಡುವಿನಲ್ಲಿ ಬಿದ್ದಿದ್ದರೆ ಹೆತ್ತ ತಾಯಿ, ಮಕ್ಕಳೆಲ್ಲಿದ್ದಾರೆ ಎಂದು ಆಘಾತದಿಂದ ಅಳುತ್ತಲೇ ಆಸ್ಪತ್ರೆಗೆ ದಾಖಲಾಗಿದ್ದಾರೆ!

ಉಡುಪಿಯ ಕಾರ್ಕಳ -ಧರ್ಮಸ್ಥಳ ಹೆದ್ದಾರಿಯಲ್ಲಿ ಒಂದು ರಣ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ಕು ಜನ ಸಾವನಪ್ಪಿದ್ದಾರೆ. ಒಬ್ಬಾಕೆ ಸಾವು ಬದುಕಿನ ಮಧ್ಯೆ ಉಡುಪಿ ಅಜ್ಜರಕಾಡು ಸರ್ಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳೂರಿನ ವೇಣೂರು ನಿಂದ ಒಂದೇ ಕುಟುಂಬದ ಐದು ಜನ ಉಡುಪಿ ಕಾರ್ಕಳ ಕಡೆಗೆ ಬೈಕ್ ಮೂಲಕ ಪ್ರಯಾಣಿಸುತ್ತಿದ್ರು. ವೇಣೂರಿನ ಸಂಬಂಧಿಗಳ ಮನೆಯ ಪೂಜೆ ತೆರಳಿದ್ದ ಕುಟುಂಬ ಮತ್ತೆ ತಮ್ಮ ಕಾರ್ಕಳದ ಹೊಸ್ಮಾರ್ ನ ಬಳಿ ನಲ್ಲೂರಿನ  ಮನೆಯ ಕಡೆಗೆ ಪ್ರಯಾಣ ಬೆಳೆಸಿದ್ರು. ಆದ್ರೆ ಹೊಸ್ಮಾರ್ ಪಾಜೆ ಗುಡ್ಡೆ ಸ್ಥಳ ಬರುತ್ತಿದಂತೆ ಮಿನಿಲಾರಿಯೊಂದು ಯಮನಂತೆ ಎದುರಾಗಿದೆ.

Tap to resize

Latest Videos

undefined

ವೇಣೂರುನಿಂದ ಡಿಸ್ಕವರಿ ಬೈಕ್ ನಲ್ಲಿ ಒಂದೇ ಕುಟುಂಬದ ಐವರು , ಅಂದರೆ ಪತಿ, ಪತ್ನಿ ಮತ್ತು ಮೂರು ಮಕ್ಕಳು ಪ್ರಯಾಣ ಬೆಳೆಸಿದ್ದರು‌. ಈ ಅಪಾಯಕಾರಿ ಸಂಚಾರ ಎತ್ತರದ ರಸ್ತೆ ಬಂದಾಗ ಮತ್ತಷ್ಟು ಭಯಾನಕವಾಯಿತು. ಕಾರೊಂದನ್ನು ಓವರ್ ಟೆಕ್ ಮಾಡುವ ಬರದಲ್ಲಿ, ಬೈಕ್ ಸವಾರ ಈಚರ್ ವಾಹನಕ್ಕೆ ಡಿಕ್ಕಿ ಹೊಡೆಯುವಂತಾಯ್ತು. ಎತ್ತರ ಪ್ರದೇಶದಲ್ಲಿ ಸಂಚಾರಿಸುತ್ತಿದ್ದ ಬೈಕ್ ಗೆ ವೇಗವಾಗಿ ಬಂದ ಲಾರಿ ಏಕಾಏಕಿ ಎದುರಾಗಿದೆ. 

ಕಾಂಗ್ರೆಸ್‌ನಲ್ಲಿ ಸಿಎಂ ಆಗಲು ಸೂಟ್‌ ಹೊಲೆಸಿ, ಕಾಯ್ತಿದ್ದಾರೆ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ

ಬೈಕ್  ಅಪ್ಪಳಿಸಿ, ಬೈಕ್ ನಲ್ಲಿದ್ದ ಸುರೇಶ್ ಆಚಾರ್ಯ ( 36 ), ಸಮೀಕ್ಷಾ (7) ಸುಶ್ಮೀತಾ (5) ಮತ್ತು ಸುಶಾಂತ್ (2) ಸ್ಥಳದಲ್ಲೆ  ಮೃತಪಟ್ಟಿದ್ದಾರೆ. ಮಕ್ಕಳ ತಾಯಿ ಮೀನಾಕ್ಷಿ ಆಚಾರ್ಯ(32) ಗಂಭೀರವಾಗಿಗಾಯಗೊಂಡಿದ್ದು ಉಡುಪಿಯ ಅಜ್ಜಕಾಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿಂದಿನಿಂದ ಬಂದ ಕಾರು , ಮುಂದಿನ ವೇಗವಾಗಿ ಬಂದ ಲಾರಿ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಈ ಅಪಘಾತ ಸಂಭವಿಸಿದೆ ಲಾರಿ ಚಾಲಕನ ಅತಿಯಾದ ವೇಗದ ಸಂಚಾರವೇ ಕುಟುಂಬದ ಸಾವಿಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಒಂದೇ ಬೈಕ್ ನಲ್ಲಿ ಐದು ಮಂದಿ ಪ್ರಯಾಣಿಸುತ್ತಿದ್ದು ಕೂಡ ಈ ದುರಂತದ ಭೀಕರ ತಲೆ ಯನ್ನು ಹೆಚ್ಚಿಸಿದೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!