Hurting Hindu Sentiments : ಕೋರ್ಟ್‌ಗೆ ಹಾಜರಾದ ಭಗವಾನ್..  ಚಂಪಾ ಗೈರು

Published : Dec 31, 2021, 06:46 PM IST
Hurting Hindu Sentiments : ಕೋರ್ಟ್‌ಗೆ ಹಾಜರಾದ ಭಗವಾನ್..  ಚಂಪಾ ಗೈರು

ಸಾರಾಂಶ

* ಹಿಂದುಗಳ ಭಾವನೆಗೆ ಧಕ್ಕೆ ಉಂಟು ಮಾಡಿದ ಆರೋಪ ಪ್ರಕರಣ * ಬಿಗಿ ಭದ್ರತೆ ನಡುವೆ ಕೋರ್ಟ್ ಗೆ ಹಾಜರಾದ ಪ್ರೊ.ಕೆ.ಎಸ್.ಭಗವಾನ್ * 8ನೇ ಎಸಿಎಂಎಂ ನ್ಯಾಯಾಲಯಕ್ಕೆ ಬಿಗಿ ಭದ್ರತೆಯಲ್ಲಿ ಹಾಜರು * ನ್ಯಾ.ವೀರನಗೌಡ ಎಸ್. ಪಾಟೀಲ ಅವರಿಂದ ಪ್ರಕರಣದ ವಿಚಾರಣೆ

ಬೆಂಗಳೂರು(ಡಿ. 31) ಹಿಂದುಗಳ ಭಾವನೆಗೆ (Hurting hindu ಶentiments )ಧಕ್ಕೆ ಉಂಟು ಮಾಡಿದ ಆರೋಪ ಪ್ರಕರಣದಲ್ಲಿ ಚಿಂತಕ, ಬರಹಗಾರ ಪ್ರೋ. ಕೆಎಸ್ ಭಗವಾನ್ (KS Bhagwan) ಬಿಗಿ ಭದ್ರತೆ ನಡುವೆ ಕೋರ್ಟ್ ಗೆ (Court) ಹಾಜರಾಗಿದ್ದರು.

ಹಿಂದು ಧರ್ಮಕ್ಕೆ ಅವಹೇಳನ ಮಾಡಿ ಹಿಂದುಗಳ ಭಾವನೆಗಳಿಗೆ ಹಾನಿ ಮಾಡಿದ್ದ ಆರೋಪ ಲೇಖಕರ ಮೇಲೆ ಇತ್ತು.  8ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜಾರಾಗಿ ವಿಚಾರಣೆ ಎದುರಿಸಿದ್ದಾರೆ.

ನ್ಯಾ.ವೀರನಗೌಡ ಎಸ್. ಪಾಟೀಲ ಅವರಿಂದ ಪ್ರಕರಣದ ವಿಚಾರಣೆ ನಡೆಯಿತು ಭಗವಾನ್ ಪರವಾಗಿ ವಕೀಲ ಸಿ.ಎಚ್. ಹನುಮಂತರಾಯ  ಹಾಜರಾಗಿದ್ದರು. ಚಂದ್ರಶೇಖರ ಪಾಟೀಲ (ಚಂಪಾ) ಹಾಗೂ ತಮಿಳ್ ಸೆಲ್ವಿ ಅವರಿಗೂ ಸಮನ್ಸ್ ಜಾರಿಯಾಗಿತ್ತು ಚಂಪಾ, ತಮಿಳ್‌ಸೆಲ್ವಿ ಗೈರು ಹಾಜರಾಗಿದ್ದರು. ಹಾಜರಾತಿಗೆ ಚಂಪಾ ಮತ್ತು ತಮಿಳ್ ಸೆಲ್ವಿ ಪರ ವಕೀಲರು ವಿನಾಯಿತಿ ಕೋರಿದ್ದರು. ನ್ಯಾಯಾಲಯ  ವಿಚಾರಣೆಯನ್ನು 2022ರ ಏಪ್ರಿಲ್ 4ಕ್ಕೆ ಮುಂದೂಡಿದೆ.

ಹಿಂದು ಧರ್ಮ ಮತ್ತು ಹಿಂದೂ ದೇವರುಗಳನ್ನು ಅವಮಾನಿಸುವ ಮೂಲಕ ವಿವಾದ ಮೈ ಮೇಲೆ ಎಳೆದುಕೊಳ್ಳುವ ಸಾಹಿತಿ ಕೆಎಸ್ ಭಗವಾನ್ ಮುಖಕ್ಕೆ ಈ ವರ್ಷದ ಫೆಬ್ರವರಿಯಲ್ಲಿ ನ್ಯಾಯಾಲಯದ ಆವರಣದಲ್ಲೇ ವಕೀಲೆಯೊಬ್ಬರು ಮಸಿ ಬಳಿದಿದ್ದರು.

ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಭಗವಾನ್ ವಿರುದ್ಧ ವಕೀಲೆ ಮೀರಾ ರಾಘವೇಂದ್ರ ಖಾಸಗಿ ದೂರು ದಾಖಲಿಸಿದ್ದರು.  ಸಾಹಿತಿ ಭಗವಾನ್ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಾಜರಾಗಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಭಗವಾನ್ ಗೆ ಜಾಮೀನು ಮಂಜೂರು ಮಾಡಿತ್ತು.   ವಿಚಾರಣೆ ಬಳಿಕ ಕೋರ್ಟ್ ನಿಂದ ಹೊರಬಂದ ಭಗವಾನ್ ಮುಖಕ್ಕೆ  ಮಸಿ ಬಳಿಯಲಾಗಿತ್ತು.

ಭಗವಾನ್‌ಗೆ ಶಾಕ್ ಕೊಟ್ಟು ಸರ್ಕಾರಕ್ಕೂ ಎಚ್ಚರಿಕೆ ನೀಡಿದ್ದ ನ್ಯಾಯಾಲಯ

ಸೋಶಿಯಲ್ ಮೀಡಿಯಾದಲ್ಲಿಯೂ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.  ಹಿಂದೂ ಧರ್ಮ ಧರ್ಮವೇ ಅಲ್ಲ. ಹಿಂದೂ ಧರ್ಮ ಎಂದರೆ ಬ್ರಾಹ್ಮಣರು ಎಂದರ್ಥ. ಗ್ರಾಮೀಣ ಜನರಿಗೆ ಹಿಂದೂ ಎಂದರೆ ಏನೆಂದು ಗೊತ್ತೇ ಇಲ್ಲ. ನೀವು ಯಾವ ಧರ್ಮ ಎಂದರೆ ಒಕ್ಕಲಿಗ, ಕುರುಬ ಎಂದು ಜಾತಿಗಳ ಹೆಸರನ್ನಷ್ಟೇ ಹೇಳುತ್ತಾರೆ  ಎಂದು ನೀಡಿದ್ದ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿತ್ತು.

ಶ್ರೀರಾಮನು ದೇವರು ಅಲ್ಲ, ರಾಮನು ಮದ್ಯಪಾನ ಮಾಡುತ್ತಿದ್ದ. ಆತ ಮಾಂಸಾಹಾರಿ, ಮಾನಿನಿಯರ ಜೊತೆಗೆ ನೃತ್ಯ ಮಾಡುತ್ತಾ ಕಾಲ ಕಳೆಯುತ್ತಿದ್ದ  ಎಂದಿದ್ದು ವಿವಾದದ ಬೆಂಕಿ ಹೊತ್ತಿಸಿತ್ತು. 

ಹಿಂದೂಗಳ ಭಾವನೆಗೆ ಧಕ್ಕೆ ತರುವಂತಹ ಪುಸ್ತಕವನ್ನು ಸಾಹಿತಿ ಭಗವಾನ್ ಬರೆದಿದ್ದಾರೆ. ಹಿಂದೂಗಳ ದೇವರೆಂದು ಪೂಜಿಸುವ ಶ್ರೀ ರಾಮನ ಬಗ್ಗೆ ಅವಹೇಳನಕಾರಿಯಾಗಿ ತನ್ನ ಪುಸ್ತಕದಲ್ಲಿ ಬರೆದಿರುವ ಭಗವಾನ್ ಅವರ ಮೇಲೆ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಬೇಕು.  ರಾಮ ಮಂದಿರ ಏಕೆ ಬೇಡ ಎನ್ನುವ ಬಗ್ಗೆ ಪುಸ್ತಕ ಇಷ್ಟೆಲ್ಲ ಗೊಂದಲಗಳಿಗೆ ವೇದಿಕೆ ಮಾಡಿಕೊಟ್ಟಿತ್ತು. ಭಗವಾನ್ ವಿರುದ್ಧ ರಾಜ್ಯದ ಹಲವು ಭಾಗಗಳಲ್ಲಿ ದೂರು ದಾಖಲಾಗಿತ್ತು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು