Suicide Case: ಮೊಬೈಲ್‌ ಆ್ಯಪ್‌ ಸಾಲ ತೀರಿಸಲಾಗದೆ ಆತ್ಮಹತ್ಯೆ

By Kannadaprabha NewsFirst Published Dec 31, 2021, 6:28 AM IST
Highlights

*   ಉಡುಪಿ ಜಿಲ್ಲೆ ಹೆಮ್ಮಾಡಿಯ ಹರೆಗೋಡುವಿನಲ್ಲಿ ನಡೆದ ಘಟನೆ
*  ಸ್ನೇಹಿತರ ಜತೆಗೂಡಿ ಬ್ರಹ್ಮಾವರ ಸಮೀಪ ಚಪ್ಪಲಿ ಅಂಗಡಿ ತೆರೆದಿದ್ದ ಮೃತ ಯುವಕ
*  ವ್ಯವಹಾರ ಕೈಹಿಡಿಯದ ಹಿನ್ನೆಲೆಯಲ್ಲಿ ಸಾಲ ತೀರಿಸಲು ಆಗಿರಲಿಲ್ಲ

ಕುಂದಾಪುರ(ಡಿ.31): ಮೊಬೈಲ್‌ ಆ್ಯಪ್‌(Mobile App) ಒಂದರಲ್ಲಿ ಮಾಡಿಕೊಂಡ ಸಾಲ(Loan) ಮರು ಪಾವತಿಸಲಾಗದೆ ಎಂಎನ್‌ಸಿ ಉದ್ಯೋಗಿಯೊಬ್ಬರು ಡೆತ್‌ ನೋಟ್‌ ಬರೆದು ಆತ್ಮಹತ್ಯೆ(Suicide) ಮಾಡಿಕೊಂಡ ಘಟನೆ ಉಡುಪಿ(Udupi) ಜಿಲ್ಲೆ ಹೆಮ್ಮಾಡಿಯ ಹರೆಗೋಡುವಿನಲ್ಲಿ ಬುಧವಾರ ರಾತ್ರಿ ನಡೆದಿದೆ. 

ಹೆಮ್ಮಾಡಿಯ ಹರೆಗೋಡು ಕೊಳಹಿತ್ಲು ನಿವಾಸಿ ವಿಘ್ನೇಶ್‌(25) ಮೃತರು. ಲಾಕ್‌ಡೌನ್‌(Lockdown) ಬಳಿಕ ವರ್ಕ್ ಫ್ರಂ ಹೋಂ ಮಾಡುತ್ತಿದ್ದ ವಿಘ್ನೇಶ್‌, ಸ್ನೇಹಿತರ ಜತೆಗೂಡಿ ಬ್ರಹ್ಮಾವರ ಸಮೀಪ ಚಪ್ಪಲಿ ಅಂಗಡಿ ತೆರೆದಿದ್ದರು. ಇದಕ್ಕೆ ಆ್ಯಪ್‌ ಮೂಲಕ ಸಾಲ ಮಾಡಿದ್ದರು. ವ್ಯವಹಾರ ಕೈಹಿಡಿಯದ ಹಿನ್ನೆಲೆಯಲ್ಲಿ ಸಾಲ ತೀರಿಸಲು ಆಗಿರಲಿಲ್ಲ. ಸಾಲ ಕೊಟ್ಟವರು ಕಿರುಕುಳ ನೀಡಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ರಾತ್ರಿ ಮನೆಯಲ್ಲಿ ಊಟ ಮುಗಿಸಿ ಬೇಗನೇ ಮಲಗಿದ್ದ ವಿಘ್ನೇಶ್‌ ನಸುಕಿನ ಜಾವ ಐದು ಗಂಟೆಯ ಸುಮಾರಿಗೆ ಮನೆ ಎದುರಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Suicide Cases: ತಡರಾತ್ರಿ ಮೇಲ್ಸೇತುವೆಯಿಂದ ಜಿಗಿದು ಯುವಕ ಆತ್ಮಹತ್ಯೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಬೆಂಗಳೂರಿನ(Bengaluru) ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ವಿಘ್ನೇಶ್‌ ಮೊದಲ ಲಾಕ್‌ಡೌನ್‌ ಸಮಯದಲ್ಲಿ ಊರಿಗೆ ಮರಳಿದ್ದು ಅದರ ಬಳಿಕ ವರ್ಕ್ ಫ್ರಮ್‌ ಹೋಂ(Work From Home) ನಿರ್ವಹಿಸುತ್ತಿದ್ದರು. ಕೆಲಸದ ಜೊತೆ ಜೊತೆಗೆ ಕಳೆದ ಒಂದು ವರ್ಷಗಳ ಹಿಂದೆ ಸ್ನೇಹಿತರೊಡಗೂಡಿ ಬ್ರಹ್ಮಾವರ ಸಮೀಪ ಚಪ್ಪಲಿ ಹೋಲ್‌ ಸೆಲ್‌ ಶೋರೂಂ ಆರಂಭಿಸಿದ್ದರು. ಇದಕ್ಕೆ ಬಂಡವಾಳ ಹೊಂದಿಸಲು ಮೊಬೈಲ್‌ ಆ್ಯಪ್‌ ಮೂಲಕ ವಿಘ್ನೇಶ್‌ ಸಾಲ ಪಡೆದುಕೊಂಡಿದ್ದರು ಎನ್ನಲಾಗಿದೆ. ವ್ಯವಹಾರ ಕೈಹಿಡಿಯದ ಹಿನ್ನೆಲೆ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ. ಸಾಲ ಕೊಟ್ಟವರು ಕಿರುಕುಳ ನೀಡಿದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್‌ನೋಟ್‌ನಲ್ಲಿ(Death Note) ಉಲ್ಲೇಖಿಸಿದ್ದಾರೆ. ಕುಂದಾಪುರ ಗ್ರಾಮಾಂತರ ಪೊಲೀಸರು(Police) ಪ್ರಕರಣ ದಾಖಲಿಸಿದ್ದಾರೆ.

ರೈಲಿಗೆ ಬಿದ್ದು ವ್ಯಕ್ತಿ ಆತ್ಮಹತ್ಯೆ

ಅಂಕೋಲಾ(Ankola): ಯುವಕನೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಳೆಗುಳಿಯಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಲಕ್ಷ್ಮೇಶ್ವರದ ಕೆರೆಕಟ್ಟೆ ನಿವಾಸಿ, ಆಟೋ ಚಾಲಕ ಆದಿತ್ಯಕುಮಾರ ನಾಯ್ಕ (21) ಮೃತ ಯುವಕ. ಮೃತದೇಹವು(Deadbody) ಚಿದ್ರಗೊಂಡ ಸ್ಥಿತಿಯಲ್ಲಿ ರೈಲು ಹಳಿಯಲ್ಲಿ(Railway Track) ಪತ್ತೆಯಾಗಿದೆ. ಗುರುವಾರ ಬೆಳಗ್ಗೆ ಮೃತನ ಗುರುತು ಪತ್ತೆಯಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಪಿಎಸ್‌ಐ ಪ್ರವೀಣಕುಮಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಪುತ್ರಿ ಆತ್ಮಹತ್ಯೆ

ಪಿರಿಯಾಪಟ್ಟಣ(Piriyapatna):  ತಾಯಿಯ ಮರಣದಿಂದ ಮಾನಸಿಕ ಖಿನ್ನತೆಯಿಂದ(Mental Depression) ಬಳಲುತ್ತಿದ್ದ ಪುತ್ರಿ ಗುರುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪಟ್ಟಣದ ಕಾವೇರಿ ಗ್ರಾಮೀಣ ಬ್ಯಾಂಕ್‌ ಹಿಂಭಾಗದ ಬಡಾವಣೆಯಲ್ಲಿ ವಾಸಿಸುತ್ತಿದ್ದ, ಬಿ.ಎಸ್‌ಸಿ ಓದುತ್ತಿದ್ದ ವಿದ್ಯಾರ್ಥಿನಿ(Student) ರಕ್ಷಿತಾ (19) ಆತ್ಮಹತ್ಯೆ ಮಾಡಿಕೊಂಡ ಯುವತಿ.

ಈಕೆಯ ತಾಯಿ ಏಳು ವರ್ಷಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು, ಅಂದಿನಿಂದ ನೋವಿನಲ್ಲಿ ಬಳಲುತ್ತಿದ್ದ ಈಕೆ ಕಳೆದ ಕೆಲವು ದಿನಗಳಿಂದ ಮಾನಸಿಕ ಖಿನ್ನತೆಗೊಳಗಾಗಿ ಗುರುವಾರ ಬೆಳಗ್ಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ ಎಂದು ಮೃತಳ ತಂದೆ ರಮೇಶ್‌ ಪಟ್ಟಣದ ಪೊಲೀಸ್‌ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Crime News: ಗುಂಡು ಹಾರಿಸಿಕೊಂಡು ಬಿಇಒ ಆತ್ಮಹತ್ಯೆ, ಮೀಟರ್ ಬಡ್ಡಿ ದಂಧೆಗೆ ಗೃಹಿಣಿ ಬಲಿ

ಹುಣಸೂರಿನ ಡಿ. ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಎಸ್ಸಿ ವ್ಯಾಸಂಗ ಮಾಡುತ್ತಿದ್ದ ರಕ್ಷಿತಾಳ ಅಂತಿಮ ದರ್ಶನವನ್ನು ಕಾಲೇಜಿನ ವಿದ್ಯಾರ್ಥಿಗಳು ಸಹಪಾಠಿಗಳು ಪಟ್ಟಣದ ಶವಾಗಾರದಲ್ಲಿ ಪಡೆದರು. ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಲಾಡ್ಜ್‌ನಲ್ಲಿ ಮಹಿಳೆ ಆತ್ಮಹತ್ಯೆ

ಮಂಗಳೂರು(Mangaluru): ನಗರದ ಸ್ಟೇಟ್‌ಬ್ಯಾಂಕ್‌ನ ಲಾಡ್ಜೊಂದರಲ್ಲಿ ಉಳ್ಳಾಲದ ವಿವಾಹಿತ ಮಹಿಳೆ(Married Woman) ಭಾರತಿ (37) ಎಂಬಾಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಗುರುವಾರ ರಾತ್ರಿ ಬೆಳಕಿಗೆ ಬಂದಿದೆ. ಉಳ್ಳಾಲದ ಸಂದೀಪ್‌ ಎಂಬಾತನೊಂದಿಗೆ ಭಾರತಿ ಸಂಬಂಧ ಹೊಂದಿದ್ದು, ನಗರದಲ್ಲಿ ಲಾಡ್ಜ್‌ನಲ್ಲಿ ಇಬ್ಬರು ತಂಗಿದ್ದರು. ಸಂದೀಪ್‌ ಹೊರಗೆ ಹೋಗಿದ್ದಾಗ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಂದರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸಂದೀಪ್‌ನನ್ನು ಬಂಧಿಸಲಾಗಿದೆ.
 

click me!