ಮಂಗಳೂರು ಸ್ಫೋಟದಿಂದ ಮಹಾನಗರದಲ್ಲೂ ಕಟ್ಟೆಚ್ಚರ!

By Kannadaprabha NewsFirst Published Nov 25, 2022, 10:42 AM IST
Highlights
  • ಮಂಗಳೂರು ಸ್ಫೋಟ: ಮಹಾನಗರದಲ್ಲೂ ಕಟ್ಟೆಚ್ಚರ!
  • ವಿಮಾನ, ರೈಲ್ವೆ ಹಾಗೂ ಬಸ್‌ ನಿಲ್ದಾಣಗಳಲ್ಲಿ ತಪಾಸಣೆ
  • ಸ್ಲೀಪರ್‌ ಸೆಲ್‌ಗಳ ಪತ್ತೆಗೂ ವಿಚಕ್ಷಣೆ ತೀವ್ರ: ಕಮಿಷನರ್‌ ಲಾಬೂರಾಮ್‌

ಧಾರವಾಡ (ನ.25) : ಮಂಗಳೂರಿನಲ್ಲಿ ನಡೆದ ಕುಕ್ಕರ್‌ ಬಾಂಬ್‌ ಸ್ಫೋಟದ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಜನದಟ್ಟಣೆ ಪ್ರದೇಶ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿ ನ ಪೊಲೀಸ್‌ ನಿಗಾ ವಹಿಸಲಾಗಿದೆ. ನಗರದಲ್ಲಿ ಸ್ಪೀಪರ್‌ ಸೆಲ್‌ಗಳಿರುವ ಮಾಹಿತಿ ಗುಪ್ತಚರ ವರದಿಗಳಿಂದ ತಿಳಿದು ಬಂದ ಹಿನ್ನೆಲೆಯಲ್ಲೂ ವಿಚಕ್ಷಣೆ ತೀವ್ರಗೊಳಿಸಿದೆ.

ಮಾಧ್ಯಮ ಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಪೊಲೀಸ್‌ ಆಯುಕ್ತ ಲಾಬೂರಾಮ್‌, ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಮಹಾನಗರಕ್ಕೆ ಆಗಮಿಸುವ ವ್ಯಕ್ತಿಗಳ ತಪಾಸಣೆ ಮಾಡಲಾಗುತ್ತಿದೆ. ರೈಲ್ವೆ, ಬಸ್‌ ಹಾಗೂ ವಿಮಾನ ನಿಲ್ದಾಣಗಳಲ್ಲಿ ಅಂತಹ ವ್ಯಕ್ತಿಗಳ ಚಲನವಲನ ಗಮನಿಸಲಾಗುತ್ತಿದೆ. ಹೊರ ವಲಯದಲ್ಲಿರುವ ಒಂಟಿ ಮನೆಗಳ ಮೇಲೂ ನಿಗಾ ಇಡಲಾಗಿದ್ದು ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಮಾಹಿತಿ ನೀಡಲು ಸ್ಥಳೀಯರಿಗೂ ತಿಳಿಸಲಾಗಿದೆ. ಹಾಗೆಯೇ, ಮಹಾನಗರಗಳಲ್ಲಿ ಸ್ಪೀಪರ್‌ ಸೆಲ್‌ಗಳಿರುವ ಮಾಹಿತಿ ಗುಪ್ತಚರ ವರದಿಗಳಿಂದ ತಿಳಿದು ಬಂದ ಹಿನ್ನೆಲೆಯಲ್ಲೂ ವಿಚಕ್ಷಣೆ ತೀವ್ರಗೊಳಿಸಲಾಗಿದೆ ಎಂದರು.

 

ಮಂಗಳೂರು ಸ್ಫೋಟ ಭಯೋತ್ಪಾದನಾ ಕೃತ್ಯ: ಡಿಜಿಪಿ ಪ್ರವೀಣ್‌ ಸೂದ್‌ ಸ್ಪಷ್ಟನೆ

₹86 ಲಕ್ಷ ವಾಪಸ್‌:

ಇತ್ತೀಚಿನ ವರ್ಷಗಳಲ್ಲಿ ಆನ್‌ಲೈನ್‌ ಮೂಲಕ ವಂಚನೆ ಪ್ರಕರಣ ಹೆಚ್ಚಾಗಿವೆ. ಕಳೆದ ವರ್ಷ 300ಕ್ಕೂ ಹೆಚ್ಚು ಸೈಬರ್‌ ಪ್ರಕರಣ ದಾಖಲಾಗಿದ್ದು ಬಹುತೇಕ ಇತ್ಯರ್ಥಪಡಿಸಲಾಗಿದೆ. ನಾಗರಿಕರು ಈ ವಿಷಯದಲ್ಲಿ ಜಾಗೃತಿ ಇರುವುದು ಮುಖ್ಯ. ಅದಕ್ಕಾಗಿ ಜಾಗೃತಿ ಕಾರ್ಯಕ್ರಮ ಮಾಡಲಾಗಿದೆ. ಇಷ್ಟಾಗಿಯೂ ದೂರವಾಣಿ ಕರೆ ಸೇರಿದಂತೆ ವಿವಿಧ ರೀತಿಯಲ್ಲಿ ಸೈಬರ್‌ ಅಪರಾಧಗಳಾಗುತ್ತಿವೆ. ಇಂತಹ ಘಟನೆ ನಡೆದ ಒಂದು ಗಂಟೆಯೊಳಗೆ ಸೈಬರ್‌ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದರೆ ಅಂತಹ ಅಕೌಂಟ್‌ ಬ್ಲಾಕ್‌ ಮಾಡಿ ಹಣ ಮರಳಿಕೊಡಬಹುದು. ಜತೆಗೆ ಆರೋಪಿಗಳನ್ನು ಬಂಧಿಸಲು ಸಾಧ್ಯ. ಈಗಾಗಲೇ ಅಂತಹ . 86 ಲಕ್ಷ ಮರಳಿ ಕೊಡಿಸಲಾಗಿದೆ ಎಂದರು.

ಮಹಾನಗರದ ಸಾರ್ವಜನಿಕ ಸ್ಥಳಗಳಲ್ಲಿ ಗಾಂಜಾ ಸೇವನೆ, ಮದ್ಯಪಾನ ಮಾಡುವಂತಹ ಪ್ರಕರಣ ಹೆಚ್ಚಾಗಿರುವ ಮಾಹಿತಿ ಬಂದಿದ್ದು ಕ್ರಮ ವಹಿಸಲಾಗುವುದು. ಈಗಾಗಲೇ ಬಹುತೇಕ ವೃತ್ತ, ಸೂಕ್ಷ್ಮ ಪ್ರದೇಶದಲ್ಲಿ ಸಿಸಿ ಕ್ಯಾಮೆರಾ ಹಾಕಿದ್ದು ಹೆಚ್ಚುವರಿ ಮತ್ತೆ 100 ಕ್ಯಾಮೆರಾ ಅಳವಡಿಸಲಾಗುತ್ತಿದೆ. ಅತೀ ಹೆಚ್ಚಿನ ವ್ಯಾಪ್ತಿ ಹೊಂದಿರುವ ಧಾರವಾಡದ ಉಪನಗರ ಪೊಲೀಸ್‌ ಠಾಣೆ ಸೇರಿ ಅಗತ್ಯವಿರುವ ಠಾಣೆಗಳಿಗೆ ಹೆಚ್ಚಿನ ಸಿಬ್ಬಂದಿ ನೀಡುವ ಮೂಲಕ ಠಾಣೆಗಳನ್ನು ಬಲವರ್ಧನೆ ಮಾಡಲಾಗುತ್ತಿದೆ. ಹಲವು ಠಾಣೆಗಳು ಬಾಡಿಗೆ ಕಟ್ಟಡದಲ್ಲಿದ್ದು ಸದÜ್ಯದಲ್ಲಿ ಅವು ಸ್ವಂತ ಕಟ್ಟಡಗಳಿಗೆ ಸ್ಥಳಾಂತರ ಸಹ ಆಗಲಿವೆ ಎಂದು ಲಾಬೂರಾಮ್‌ ತಿಳಿಸಿದರು.

ಸೇವೆ ಸಮಾಧಾನ ತಂದಿದೆ:

ಆಯುಕ್ತನಾಗಿ ಮಹಾನಗರಕ್ಕೆ ಬಂದು ಎರಡು ವರ್ಷಗಳಾಗಿದೆ. ಈ ಸಮಯದಲ್ಲಿ ಉಂಟಾದ ಕೋವಿಡ್‌, ಹಳೇ ಹುಬ್ಬಳ್ಳಿ ಗಲಾಟೆ ಸೇರಿದಂತೆ ಹಬ್ಬ-ಹರಿದಿನಗಳಲ್ಲಿ ಸೂಕ್ತ ಪೊಲೀಸ್‌ ಬಂದೋಬಸ್‌್ತ ನೀಡುವ ಮೂಲಕ ಶಾಂತಿ ಸುವ್ಯವಸ್ಥೆಯನ್ನು ಸಮರ್ಪಕವಾಗಿ ಕಾಪಾಡಿದ ಸಮಾಧಾನವಿದೆ. ಜತೆಗೆ ಪೊಲೀಸ್‌ ವ್ಯವಸ್ಥೆ ಜನಸ್ನೇಹಿಯಾಗಿರುವಂತೆಯೂ ಕ್ರಮಕೈಗೊಳ್ಳಲಾಗುತ್ತಿದೆ. ಅಪರಾಧ ತಡೆಯಲು ಬೀಟ್‌ ವ್ಯವಸ್ಥೆ ಸಹ ಸುಧಾರಿಸಿದ್ದು ನಿತ್ಯ 1500ಕ್ಕೂ ಹೆಚ್ಚು ಪಾಯಿಂಟ್‌ಗೆ ಪೊಲೀಸರು ಬೀಟ್‌ ಕಾರ್ಯ ಮಾಡುತ್ತಿದ್ದಾರೆ. ಅಪರಾಧ ತಡೆಗೆ ನಿರಂತರ ಪ್ರಯತ್ನ ನಡೆಯುತ್ತಿವೆ ಎಂದು ಪ್ರಶ್ನೆಯೊಂದಕ್ಕೆ ಲಾಬೂರಾಮ್‌ ಉತ್ತರಿಸಿದರು.

 

ಮಂಗಳೂರು: ಕದ್ರಿ ದೇವಸ್ಥಾನ ಉಗ್ರರ ಟಾರ್ಗೆಟ್, ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಸುರಕ್ಷತಾ ಕ್ರಮವಿಲ್ಲದೇ ಶಾಲಾ ಮಕ್ಕಳನ್ನು ಆಟೋ, ವಾಹನಗಳಲ್ಲಿ ಕರೆದೊಯ್ಯುವ ಕುರಿತು ದೂರು ಬಂದಿದ್ದು ಈ ಕುರಿತು ಕ್ರಮ ವಹಿಸಲಾಗುವುದು. ಜತೆಗೆ ಅವಳಿ ನಗರದ ಟ್ರಾಫಿಕ್‌ ನಿಯಂತ್ರಣಕ್ಕೂ ಸಾಕಷ್ಟುಪ್ರಯತ್ನ ನಡೆಸಲಾಗುತ್ತಿದೆ. ಆದರೆ, ರಸ್ತೆ ಕಾಮಗಾರಿ, ಸ್ಮಾರ್ಚ್‌ಸಿಟಿ ಕಾಮಗಾರಿ, ಹುಬ್ಬಳ್ಳಿಯಲ್ಲಿ ಮೇಲ್ಸೇತುವೆ ನಿರ್ಮಾಣದಿಂದ ಟ್ರಾಫಿಕ್‌ ನಿಯಂತ್ರಣವಾಗುತ್ತಿಲ್ಲ. ಟ್ರಾಫಿಕ್‌ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮವಾಗುತ್ತಿದ್ದು ಸದ್ಯ ನಂಬರ್‌ ಪ್ಲೇಟ್‌ ಕುರಿತು ಡ್ರೈವ್‌ ನಡೆಯುತ್ತಿದೆ ಎಂದರು.

click me!