ತುಮಕೂರು ಗ್ರಾಮಾಂತರದ ಮಲ್ಲಸಂದ್ರ ಗ್ರಾಮದ ವಿಶ್ವಭಾರತಿ ಶಾಲೆಯಲ್ಲಿ ನಡೆದ ಘಟನೆ
ತುಮಕೂರು(ನ.25): ಶಾಲಾ ಮಾಲೀಕನ ಮಗ ಕುಡಿದ ಮತ್ತಿನಲ್ಲಿ ಮಕ್ಕಳಿಗೆ ಮನಬಂದಂತೆ ಥಳಿಸಿದ ಘಟನೆ ತುಮಕೂರು ಗ್ರಾಮಾಂತರದ ಮಲ್ಲಸಂದ್ರ ಗ್ರಾಮದ ವಿಶ್ವಭಾರತಿ ಶಾಲೆಯಲ್ಲಿ ನಡೆದಿದೆ. ವಿಶ್ವಭಾರತಿ ಸರ್ಕಾರಿ ಅನುದಾನಿತ ಶಾಲೆಯಾಗಿದ್ದು ಶಾಲೆಯ ಮಾಲೀಕ ಎನ್. ಮೂರ್ತಿಯ ಮಗ ಭರತ್ ಎಂಬಾತನೇ ಯಾವುದೇ ಕಾರಣವಿಲ್ಲದೆ ಮಕ್ಕಳ ಮೇಳೆ ಥಳಿಸಿದ್ದಾನೆ ಅಂತ ಆರೋಪಿಸಲಾಗಿದೆ.
ಕುಡಿದ ಮತ್ತಿನಲ್ಲಿ ಬಂದ ಭರತ್ ಯಾವುದೇ ಕಾರಣ ಇಲ್ಲದೆ ಶಾಲೆಯ ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿಗಳಿಗೆ ಥಳಿಸಿದ್ದಾನೆ. ಶಾಲೆಯ ಮಕ್ಕಳ ಕೈಯಲ್ಲಿ ಮನೆಯ ಶೌಚಾಲಯ, ಕಾರು ತೊಳೆಸಿ, ಮಕ್ಕಳ ಕೈಯಲ್ಲಿ ಮನೆ ಕೆಲಸ ಮಾಡಿಸುತ್ತಿದ್ದನಂತೆ ಭರತ್.
Viral Video: ಕುಡಿದು ಟೈಟಾದ 4 ಯುವತಿಯರಿಂದ ಪಬ್ ಎದುರೇ ಮತ್ತೊಬ್ಬಳ ಮೇಲೆ ಥಳಿತ
ಭರತ್ ಪ್ರತಿನಿತ್ಯ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದನು. ಕುಡಿದ ಮತ್ತಿನಲ್ಲಿ ಬಂದು ಹಾಸ್ಟೆಲ್‌ನಲ್ಲಿದ್ದ 48 ಮಕ್ಕಳಿಗೆ ಥಳಿಸಿದ್ದಾನೆ. ಹಿಗ್ಗಾಮುಗ್ಗಾ ಥಳಿಸಿದ್ದರಿಂದ ದಾವಣೆಗೆರೆ ಮೂಲದ ಮೂವರು ಮಕ್ಕಳ ಮೂಳೆ ಮುರಿತವಾಗಿದೆ ಅ<ತ ತಿಳಿದು ಬಂದಿದೆ. ಶಾಲೆಗೆ ಬಿಇಒ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ಭರತ್ ವಿರುದ್ಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.