ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಇಷ್ಟು ದಿನ ತಣ್ಣಗಾಗಿದ್ದ ಖೋಟಾನೋಟ್ ಚಲಾವಣೆ ದಂಧೆ ಮತ್ತೆ ಮುನ್ನೆಲೆಗೆ ಬಂದಿದೆ. ಪ್ರಖ್ಯಾತಿ ಮತ್ತು ಕುಖ್ಯಾತಿ ಎರಡರಲ್ಲೂ ಹೆಸರು ಮಾಡಿರುವ ಹುಬ್ಬಳ್ಳಿಯಲ್ಲಿ ಖೋಟಾ ನೋಟಿನ ಹಾವಳಿ ಮತ್ತೇ ಸದ್ದು ಮಾಡುತ್ತಿದೆ.
ಹುಬ್ಬಳ್ಳಿ (ಅ.12) : ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಇಷ್ಟು ದಿನ ತಣ್ಣಗಾಗಿದ್ದ ಖೋಟಾನೋಟ್ ಚಲಾವಣೆ ದಂಧೆ ಮತ್ತೆ ಮುನ್ನೆಲೆಗೆ ಬಂದಿದೆ. ಪ್ರಖ್ಯಾತಿ ಮತ್ತು ಕುಖ್ಯಾತಿ ಎರಡರಲ್ಲೂ ಹೆಸರು ಮಾಡಿರುವ ಹುಬ್ಬಳ್ಳಿಯಲ್ಲಿ ಖೋಟಾ ನೋಟಿನ ಹಾವಳಿ ಮತ್ತೇ ಸದ್ದು ಮಾಡುತ್ತಿದೆ.
ಹುಬ್ಬಳ್ಳಿ(Hubballi)ಯ ಹಳೆ ಬಸ್‌ನಿಲ್ದಾಣದ ಬಳಿ ಖೋಟಾನೋಟು(Fake notes)ಗಳನ್ನು ಚಲಾವಣೆ ಮಾಡುತ್ತಿದ್ದ ಮೂವರನ್ನು ಉಪನಗರ ಠಾಣೆ ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ. ವಿಜಯಪುರ(Vijayapur) ಜಿಲ್ಲೆಯ ಬಸವನ ಬಾಗೇವಾಡಿ(Basavanabagewadi) ತಾಲ್ಲೂಕಿನ ಶಿವಾನಂದ ಕಾರಜೋಳ(Shivanand Karjol), ವಿಜಯಪುರದ ಅಡವಿ ಶಂಕರಲಿಂಗನ ಗುಡಿ ನಿವಾಸಿ ಕಲ್ಲಯ್ಯ ಪಟ್ಟದಮಠ(Kallaiah pattadamath) ಹಾಗೂ ಉತ್ತರ ಕನ್ನಡ(Uttara kannada) ಜಿಲ್ಲೆಯ ಹೆಗ್ಗರಣಿಯ ಗುರುರಾಜ ಜಾಧವ(Gururaj jadhav) ಬಂಧಿತರು ಎಂದು ತಿಳಿದುಬಂದಿದೆ.
ಆರೋಪಿಗಳು ಹುಬ್ಬಳ್ಳಿಯ ಚನ್ನಮ್ಮ ಸರ್ಕಲ್(Channamma Circle) ಬಳಿಯ ಸನ್ಮಾನ್ ಲಾಡ್ಜ್(Sanman Lodge)ನಲ್ಲಿ 200 ಮತ್ತು 100 ಮುಖಬೆಲೆಯ ಖೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ದಂಧೆಯ ರೂವಾರಿಗಳನ್ನು ಬಂಧಿಸಿಸದ್ದು. ಬಂಧಿತ ಆರೋಪಿಗಳಿಂದ 73 ಖೋಟಾ ನೋಟುಗಳು, ಒಂದು ವಾಹನ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿಕ್ಕೋಡಿ: ಖೋಟಾ ನೋಟು ಜಾಲ ಪತ್ತೆ: ಮುಗ್ದ ಜನರಿಗೆ ವಂಚಿಸುತ್ತಿದ್ದ ಗ್ಯಾಂಗ್ ಅರೆಸ್ಟ್