
ದಾಬಸ್‌ಪೇಟೆ(ಅ.12): ಚಾಕುವಿನಿಂದ ಪತ್ನಿ ಕುತ್ತಿಗೆ ಕುಯ್ದು ಪತಿ ಪರಾರಿಯಾಗಿರುವ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನೆಲಮಂಗಲ ತಾಲೂಕಿನ ಶಾಂತಿನಗರ ಗ್ರಾಮದ ಮಂಜುಳ(30) ಕೊಲೆಯಾದ ಮಹಿಳೆ. ಶಿವರಾಜು(36) ಕೊಲೆ ಮಾಡಿ ಪರಾರಿಯಾಗಿರುವ ಪತಿ.
ಮಂಜುಳಾ ಹಾಗೂ ಶಿವರಾಜು 20 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಶಿವರಾಜು ಕುಣಿಗಲ್‌ನಲ್ಲಿ ಕೆಲಸ ಮಾಡುತ್ತಿದ್ದು, ವಾರಕ್ಕೊಮ್ಮೆ ಮನೆಗೆ ಬರುತ್ತಿದ್ದನು. ಕಳೆದ 6 ತಿಂಗಳಿಂದ ಮಂಜುಳಾ ತಂಗಿ ಶಾರದಾ ಆರೋಗ್ಯದ ತೊಂದರೆಯಿದ್ದ ಕಾರಣ ಅಕ್ಕ ಮಂಜುಳಾ ಮನೆಯಲ್ಲಿ ತಂಗಿದ್ದಳು.
Bengaluru: ಯಾರದ್ದೋ ಲವ್ ಸ್ಟೋರಿ, ಅಪರಿಚಿತನಿಗೆ ಮಚ್ಚಿನೇಟು!
ಕಳೆದ ಶನಿವಾರ ಮನೆಗೆ ಬಂದಿದ್ದ ಶಿವರಾಜು ಕೆಲಸದಿಂದ ಬಂದ ಹಣದಲ್ಲಿ ಕಂಠ ಪೂರ್ತಿ ಕುಡಿದು ಪತ್ನಿ ಮಂಜುಳಳೊಂದಿಗೆ ಜಗಳವಾಡಿ ನಾದಿನಿಯನ್ನು ಮನೆಯಿಂದ ಹೊರಗೆ ಹಾಕಿದ್ದನು. ಭಾನುವಾರ ರಾತ್ರಿ ಪತಿ ಪತ್ನಿ ಇಬ್ಬರೂ ಕಂಠ ಪೂರ್ತಿ ಕುಡಿದಿದ್ದರು. ಬಳಿಕ ಆಕೆ ನಿದ್ರೆಗೆ ಜಾರಿದ್ದ ವೇಳೆ, ಪತಿ ಆಕೆಯ ಕುತ್ತಿಗೆ ಕುಯ್ದು ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್ಪಿ ಪುರುಷೋತ್ತಮ್ ಹಾಗೂ ದಾಬಸ್‌ಪೇಟೆ ಠಾಣೆಯ ಪಿಎಸ್‌ಐ ರವಿ ಸೇರಿದಂತೆ ನೆಲಮಂಗಲ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ