ಹುಬ್ಬಳ್ಳಿ-ಧಾರವಾಡ ಪಾಲಿಕೆ ಸದಸ್ಯನ ಕೊಲೆ ಪ್ರಕರಣದಲ್ಲಿ ಸುಮಾರು ಎಂಟು ವರ್ಷಗಳಿಂದ ಫಕೀರ ವೇಷ ಧರಿಸಿ ನಾಪತ್ತೆಯಾಗಿದ್ದ ಆರೋಪಿಯನ್ನು ಕೊನೆಗೂ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಸೈಫ್ ಅಲಿ ಬಾಂಬೆ, ಬಂಧಿತ ಆರೋಪಿ.
ಹುಬ್ಬಳ್ಳಿ (ಮೇ.30): ಹುಬ್ಬಳ್ಳಿ-ಧಾರವಾಡ ಪಾಲಿಕೆ ಸದಸ್ಯನ ಕೊಲೆ ಪ್ರಕರಣದಲ್ಲಿ ಸುಮಾರು ಎಂಟು ವರ್ಷಗಳಿಂದ ಫಕೀರ ವೇಷ ಧರಿಸಿ ನಾಪತ್ತೆಯಾಗಿದ್ದ ಆರೋಪಿಯನ್ನು ಕೊನೆಗೂ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಸೈಫ್ ಅಲಿ ಬಾಂಬೆ, ಬಂಧಿತ ಆರೋಪಿ. 2016ರಲ್ಲಿ ನಡೆದಿದ್ದ ಕೊಲೆ. ಹು-ಧಾ ಪಾಲಿಕೆ ಸದಸ್ಯ ಆರೀಪ್ ಭದ್ರಾಪೂರ ಕೊಲೆ ಕೇಸ್ ನಲ್ಲಿ ಅರೆಸ್ಟ್ ಆಗಿದ್ದ ಸೈಫ್ ಅಲಿ ಬಾಂಬೆ. ಬಳಿಕ 2016 ರಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ನಾಪತ್ತೆಯಾಗಿದ್ದ. ಎಷ್ಟೇ ಹುಡುಕಾಡಿದರೂ ಪೊಲೀಸರಿಗೆ ಸಿಕ್ಕಿರಲಿಲ್ಲ.
ಪಕೀರ ವೇಷ ಧರಿಸಿ ದೇಶವನ್ನೇ ಸುತ್ತಿರುವ ಸೈಫ್ ಅಲಿ ಬಾಂಬೆ. ಫಕೀರ್ ವೇಷ ಧರಿಸಿ ಅಲೆದಾಡುತ್ತಿರುವ ಬಗ್ಗೆ ಮಾಹಿತಿ ಕಲೆಹಾಕಿ ಬೆನ್ನಹತ್ತಿದ ಹುಬ್ಬಳ್ಳಿ ಶಹರ ಪೊಲೀಸರು ಕೊನೆಗೂ ಹಂತಕನನ್ನ ಬಂಧಿಸಿದ್ದಾರೆ.
ನಿಜವಾಯ್ತು ವರ್ತೆ ಪಂಜುರ್ಲಿ ದೈವದ ನುಡಿ; ತಲೆಮರೆಸಿಕೊಂಡಿದ್ದ ಪಾತಕಿ ಕೋರ್ಟ್ ಮುಂದೆ ಹಾಜರು!