ಆರೋಪಿ ಹೊಸಪೇಟೆಯ ನಿವಾಸಿ ಆಸೀಫ್‌ನನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ರಾಜೇಶ್ವರಿ, ವಸಂತ, ಸಾಯಿಧರ್ಮ ತೇಜ ಕೊಲೆಯಾಗಿದ್ದರು. ತಾನು ಪ್ರೀತಿಸಿದಾಕೆಯನ್ನು ತನ್ನ ಅಣ್ಣನೊಂದಿಗೆ ಮದುವೆ ಮಾಡಿಸಿದ್ದಾರೆ ಎಂದು ಸಿಟ್ಟಿಗೆದ್ದು ಕೊಲೆ ಮಾಡಿರುವುದಾಗಿ ಆಸೀಫ್ ತಪ್ಪೊಪ್ಪಿಕೊಂಡಿದ್ದಾನೆ ಎಂದ ಎಸ್ಪಿ ಯಶೋದಾ ವಂಟಗೋಡಿ
ಕೊಪ್ಪಳ(ಮೇ.30): ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಗ್ರಾಮದಲ್ಲಿ ತಾಯಿ, ಮಗಳು ಮತ್ತು ಮೊಮ್ಮಗ ನಿಗೂಢ ಸಾವು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಇದು ಆತ್ಮಹತ್ಯೆಯಲ್ಲ, ಕೊಲೆ ಎನ್ನುವುದು ರುಜುವಾತಾಗಿದ್ದು, ಕೊಲೆಯ ಆರೋಪಿಯನ್ನು ಬಂಧಿಸುವಲ್ಲಿ ಕೊಪ್ಪಳ ಪೊಲೀಸರು ಯಶಸ್ವಿಯಾಗಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಎಸ್ಪಿ ಯಶೋದಾ ವಂಟಗೋಡಿ, ಆರೋಪಿ ಹೊಸಪೇಟೆಯ ನಿವಾಸಿ ಆಸೀಫ್‌ನನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ರಾಜೇಶ್ವರಿ, ವಸಂತ, ಸಾಯಿಧರ್ಮ ತೇಜ ಕೊಲೆಯಾಗಿದ್ದರು. ತಾನು ಪ್ರೀತಿಸಿದಾಕೆಯನ್ನು ತನ್ನ ಅಣ್ಣನೊಂದಿಗೆ ಮದುವೆ ಮಾಡಿಸಿದ್ದಾರೆ ಎಂದು ಸಿಟ್ಟಿಗೆದ್ದು ಕೊಲೆ ಮಾಡಿರುವುದಾಗಿ ಆಸೀಫ್ ತಪ್ಪೊಪ್ಪಿಕೊಂಡಿದ್ದಾನೆ ಎಂದರು.
undefined
ಅನ್ಯಕೋಮಿನ ವ್ಯಕ್ತಿ ಮದುವೆಯಾಗಿದ್ದ ಮಹಿಳೆ ಸೇರಿ, ಒಂದೇ ಕುಟುಂಬದ ಮೂವರು ಶವವಾಗಿ ಪತ್ತೆ!
ಘಟನೆ ಹಿನ್ನೆಲೆ:
ಆಂಧ್ರ ಮೂಲದ ವಸಂತ ಮನಸ್ತಾಪದಿಂದ ನಾಲ್ಕು ವರ್ಷಗಳ ಹಿಂದೆಯೇ ಪತಿಯನ್ನು ತೊರೆದು ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಗ್ರಾಮಕ್ಕೆ ಬಂದು ವಾಸಿಸುತ್ತಿದ್ದಳು. ಈ ವೇಳೆ ಹೊಸಪೇಟೆಯಲ್ಲಿ ಈಗಾಗಲೆ ಮದುವೆಯಾಗಿದ್ದ ಆರೀಫ್‌ನೊಂದಿಗೆ ಪ್ರೇಮಾಂಕುರವಾಗಿ ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದಾಳೆ.
ಇದು ಆರೀಫ್ ಅವರ ಕುಟುಂಬದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ನಡುವೆ ಆರೀಫ್‌ನ ಸಹೋದರ ಆಸೀಫ್ ಸಹ ಈಕೆಯನ್ನು ಪ್ರೀತಿಸಿ, ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಆರೀಫ್, ವಸಂತ ಮದುವೆಯಾಗಿದ್ದು ಆಸೀಫ್‌ನ ಕೆಂಗಣ್ಣಿಗೆ ಗುರಿಯಾಗಿದೆ. ಇದನ್ನು ಮೀರಿ ವಸಂತ, ಆರೀಫ್‌ನೊಂದಿಗೆ ಮುದುವೆಯಾಗಿದ್ದರಿಂದ ಆಸೀಫ್ ರೊಚ್ಚಿಗೆದ್ದು ಕೊಲೆ ಮಾಡಿದ್ದಾನೆ ಎನ್ನುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.