ಘಟಾನುಘಟಿ ಪೊಲೀಸರೂ ಕೈಚೆಲ್ಲಿ ಕೂತಿದ್ದ ಕೊಲೆ ಪ್ರಕರಣ ಬೇಧಿಸಿದ ನೊಣಗಳು! ವಿಚಿತ್ರ ಸ್ಟೋರಿ ಇಲ್ಲಿದೆ...

By Suchethana D  |  First Published Nov 5, 2024, 5:41 PM IST

 ಘಟಾನುಘಟಿ ಪೊಲೀಸರೂ ಕೈಚೆಲ್ಲಿ ಕೂತಿದ್ದ ಕೊಲೆ ಪ್ರಕರಣ ಬೇಧಿಸಿದ ನೊಣಗಳು! ವಿಚಿತ್ರ ಎನಿಸಿದರೂ ಕುತೂಹಲದ ಘಟನೆ ನಡೆದದ್ದು ಹೀಗೆ... 
 


ಪೊಲೀಸ್​ ನಾಯಿಗಳು ಕೊಲೆ ಪ್ರಕರಣವನ್ನು ಬೇಧಿಸಿರುವ ಪ್ರಕರಣಗಳು ಸಾಕಷ್ಟು ಇವೆ. ಇನ್ನು ಸಾಕು ಪ್ರಾಣಿಗಳು ನೀಡುವ ಸುಳಿವಿನ ಆಧಾರದ ಮೇಲೆ ಕೊಲೆ ಪ್ರಕರಣಗಳು ಬೇಧಿಸಿರುವ ಕೆಲವು ಘಟನೆಗಳೂ ಇವೆ. ಆದರೆ ನೊಣಗಳು ಕೊಲೆ ಪ್ರಕರಣವನ್ನು ಬೇಧಿಸಿದವು ಎಂದರೆ ನಂಬಬಲ್ಲಿರಾ? ಸಾಧ್ಯನೇ ಇಲ್ಲ ಅಲ್ವಾ? ಘಟಾನುಘಟಿ ಪೊಲೀಸರಿಂದಲೂ ಬೇಧಿಸಲು ಸಾಧ್ಯವಾಗದ ಕೊಲೆ  ಪ್ರಕರಣವನ್ನು ನೊಣಗಳು ಪತ್ತೆ ಹಚ್ಚಿ ಆರೋಪಿಯನ್ನು ಕಟಕಟೆಯಲ್ಲಿ ನಿಲ್ಲಿಸಿರುವ ವಿಚಿತ್ರ, ಕುತೂಹಲ ಹಾಗೂ ಅಷ್ಟೇ ನಂಬಲು ಅಸಾಧ್ಯವಾಗಿರುವ ಘಟನೆ ನಡೆದಿರುವುದು ಮಧ್ಯಪ್ರದೇಶದ ಜಬಲ್‌ಪುರದಲ್ಲಿ.

 ಕಳೆದ ಅಕ್ಟೋಬರ್ 31 ರ ಬೆಳಿಗ್ಗೆ ಮಧ್ಯಪ್ರದೇಶದ ಜಬಲ್‌ಪುರದ ಹೊಲವೊಂದರಲ್ಲಿ ವ್ಯಕ್ತಿಯ ಶವ ಪತ್ತೆಯಾಗಿತ್ತು. ಆ ವ್ಯಕ್ತಿಯನ್ನು 26 ವರ್ಷದ ಮನೋಜ್ ಠಾಕೂರ್ ಎಂದು ಗುರುತಿಸಲಾಯಿತು. ಒಂದು ದಿನ ಹಿಂದೆ ಅವರು ಕಾಣೆಯಾಗಿದ್ದರು. ಮನೆಯವರೆಲ್ಲರೂ ಹುಡುಕಿದಾಗ ಮನೋಜ್​ ಸಿಕ್ಕಿರಲಿಲ್ಲ. ಅವರು ಕೊನೆಯದ್ದಾಗಿ ಕಾಣಿಸಿಕೊಂಡದ್ದರು ಕೊಲೆಯಾದ ಹಿಂದಿನ ದಿನ ಅಂದರೆ ಅಕ್ಟೋಬರ್​ 30ರಂದು.  ಅವರು ಅಂಗಡಿಯಿಂದ ಮದ್ಯವನ್ನು ಖರೀದಿಸಿದ್ದರು.  ಸೋದರಳಿಯ ಧರಂ ಸಿಂಗ್ ಜೊತೆಗೆ ಕುಳಿತು ಪಾರ್ಟಿ ಮಾಡಿದ್ದರು. ಅಲ್ಲಿಯೇ ಮದ್ಯ ಸೇವಿಸಿ ಊಟವನ್ನೂ ಮಾಡಿದ್ದದರು.  ಅಂದರೆ ಮನೋಜ್‌ ಅವರನ್ನು ಜೀವಂತವಾಗಿ ನೋಡಿದ ಕೊನೆಯ ವ್ಯಕ್ತಿ ಧರಂ. 

Tap to resize

Latest Videos

ಎಲ್ಲರೆದರೂ ಐಶ್ವರ್ಯಳನ್ನು ಒಂಟಿಯಾಗಿ ಬಿಟ್ಟು, ನಿಮ್ರಿತ್​ ಪಕ್ಕ ಕುಳಿತ ಅಭಿಷೇಕ್​! ವಿಡಿಯೋ ನೋಡಿ ಸುಸ್ತಾದ ಫ್ಯಾನ್ಸ್​

ಆದರೆ ಆ ಬಳಿಕ ಯುವಕ ಪತ್ತೆಯಾಗಿರಲಿಲ್ಲ.  ಕುಟುಂಬದ ಸದಸ್ಯರು ಅವರನ್ನು ಹುಡುಕಿದಾಗ ಸಿಗದ ಹಿನ್ನೆಲೆಯಲ್ಲಿ ಪೊಲೀಸ್​ ಕಂಪ್ಲೇಂಟ್​ ಕೊಟ್ಟಿದ್ದರು.  ಪೊಲೀಸರು ತನಿಖೆ ಮಾಡಿದಾಗ,  ಮನೋಜ್ ಠಾಕೂರ್  ದೇಹವು ಹೊಲದಲ್ಲಿ ಬಿದ್ದಿರುವುದು ಕಂಡುಬಂದಿದೆ. ತನಿಖೆ ಕೈಗೊಂಡ ಪೊಲೀಸರಿಗೆ ಈ ವ್ಯಕ್ತಿ ಕೊನೆಯಾಗಿ  ಸೋದರಳಿಯ ಧರಂ ಜೊತೆ ಇರುವುದು ತಿಳಿದಿದೆ. ಆದ್ದರಿಂದ ಅವರ ಮೇಲೆಯೇ ಅನುಮಾನ ಪಟ್ಟು ಸಾಕಷ್ಟು ಪ್ರಶ್ನಿಸಿದ್ದಾರೆ. ಆದರೆ ಅವರೇ ಕೊಲೆ  ಮಾಡಿರುವುದಕ್ಕೆ ಯಾವುದೇ ಸಾಕ್ಷ್ಯಾಧಾರಗಳೂ ಸಿಕ್ಕಿರಲಿಲ್ಲ.  ಇಡೀ ಪೊಲೀಸ್​ ಟೀಮ್​ ಈ ಕೊಲೆ ಕೇಸನ್ನು ಪತ್ತೆ ಮಾಡಿತ್ತು.  ಆದರೆ, ಯಾವುದೇ ಸೂಕ್ತ ಸಾಕ್ಷ್ಯಗಳು ಇಲ್ಲದ ಕಾರಣ, ಇದು ಪೊಲೀಸರಿಗೆ ತಲೆ ನೋವಾಯಿತು. 

 ಜಬಲ್‌ಪುರ ಪೊಲೀಸರು ಕೊಲೆಯ ತನಿಖೆ ನಡೆಸುವಾಗ ಹತ್ತಾರು ಜನರನ್ನು ಪ್ರಶ್ನಿಸಿದರು. ಯಾರಿಂದಲೂ ಸರಿ ಉತ್ತರ ಬರಲಿಲ್ಲ.  ಏಕೆಂದರೆ, ಧರಂ ಮತ್ತು ಕೊಲೆಯಾದ ವ್ಯಕ್ತಿಯ ನಡುವೆ ವೈಮನಸ್ಸು ಇರಲಿಲ್ಲ. ಬೇರೆಯವರು ಕೊಲೆ  ಮಾಡಿದ್ದಾರೆ ಎನ್ನಲು  ಯಾವುದೇ ದರೋಡೆ ನಡೆದಿಲ್ಲ, ಯಾವ ವಸ್ತುಗಳೂ ಕಾಣಿಯಾಗಿರಲಿಲ್ಲ. ಮನೋಜ್ ಠಾಕೂರ್ ಜೊತೆ ಯಾರಿಗೂ ದ್ವೇಷ ಇಲ್ಲ ಎಂದೇ ಜನರು ಹೇಳಿದರು. ಹಣಕಾಸಿನ ವಿಚಾರದಲ್ಲಿಯೂ ಯಾವುದೇ ಗಲಾಟೆ, ದ್ವೇಷ, ಗದ್ದಲ ಏನೂ ಇರಲಿಲ್ಲ. ಇದರಿಂದ ಪೊಲೀಸರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಯಿತು.
 
ಆದರೆ ಪೊಲೀಸರಿಗೆ ಧರಂ ಮೇಲೆಯೇ ಶಂಕೆ ಇದ್ದುದರಿಂದ ಅವರನ್ನು ವಿಚಾರಣೆ ಒಳಪಡಿಸಿದ್ದರು. ಆದರೆ  ಯಾವುದೇ ಕಾರಣಕ್ಕೂ ಅವರ ಬಾಯಿಯಿಂದ ಸತ್ಯ ಹೊರ ಬಂದಿರಲಿಲ್ಲ. ಆದರೆ ಅವರ ನೆರವಿಗೆ ಬಂದದ್ದು ನೊಣಗಳು! ಹೌದು. ವಿಚಾರಣೆ ಸಂದರ್ಭದಲ್ಲಿ ಧರಂ ಹತ್ತಿರ ನೊಣಗಳು ಸುಳಿದಾಡತೊಡಗಿದವು. ಅದನ್ನು ಅವರು ಎಷ್ಟೇ ಓಡಿಸಿದರೂ ಓಡುತ್ತಿರಲಿಲ್ಲ. ಓಡಿಸಿ ಓಡಿಸಿ ಸಾಕಾಯ್ತು. ಆದರೂ ನೊಣ ಮುತ್ತುತ್ತಲೇ ಇದ್ದವು. ಇದನ್ನು  ಗಮನಿಸಿದ ಚಾರ್ಗವಾನ್ ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿ ಅಭಿಷೇಕ್ ಪಯಾಸಿ ಅವರಿಗೆ ಅನುಮಾನ ಬಂದಿತ್ತು. ಇಲ್ಲಿ ಏನೋ ಎಡವಟ್ಟು ನಡೆದಿದೆ ಎನ್ನುವುದು ಅವರ ಪೊಲೀಸ್​ ತಲೆಗೆ ಹೊಳೆಯಿತು.

ಹೆಬ್ಬಾವು, ಇಗ್ವಾನಾ ಜೊತೆ ಬಿಗ್​ಬಾಸ್​ ಸಂಗೀತಾ ಶೃಂಗೇರಿ ಸರಸ- ವಿಡಿಯೋ ವೈರಲ್​- ಬೆಚ್ಚಿ ಬಿದ್ದ ಅಭಿಮಾನಿಗಳು!

ಕೊನೆಗೆ,  ಧರಂ ಅವರ ಶರ್ಟ್ ಅನ್ನು ತೆಗೆದು ಪೊಲೀಸರಿಗೆ ಒಪ್ಪಿಸುವಂತೆ ಕೇಳಲಾಯಿತು, ನಂತರ ಅದನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಯಿತು. ಕುತೂಹಲದ ಸಂಗತಿ ಎಂದರೆ, ಫೋರೆನ್ಸಿಕ್ ತಜ್ಞರು ಬರಿಗಣ್ಣಿಗೆ ಕಾಣದ ಅಂಗಿಯ ಮೇಲಿರುವ ರಕ್ತವನ್ನು ಗುರುತಿಸಿದರು. ನೊಣಗಳು ಇದೇ ರಕ್ತದ ಹಿನ್ನೆಲೆಯಲ್ಲಿ ಅವರನ್ನು ಮುತ್ತುತ್ತಿದ್ದವು ಎನ್ನುವುದು ತಿಳಿಯಿತು. ನಂತರ ತಮ್ಮದೇ ಭಾಷೆಯಲ್ಲಿ ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದನ್ನು ಧರಂ ಒಪ್ಪಿಕೊಂಡರು.  ಇಬ್ಬರೂ ಮದ್ಯದ ಅಮಲಿನಲ್ಲಿ ಇದ್ದೆವು. ಮದ್ಯ ಮತ್ತು ತರಿಸಿದ ಊಟವನ್ನು ಆತ ನನಗೆ ಸರಿಯಾಗಿ ಹಂಚಿರಲಿಲ್ಲ. ಅದಕ್ಕಾಗಿ ಜಗಳ ಆರಂಭವಾಯಿತು. ನಂತರ ಇಬ್ಬರ ನಡುವೆ ಜಗಳವಾಗಿ, ಸಿಟ್ಟಿನಿಂದ ನಾನು ಮರದ ದಿಮ್ಮಿನಿಂದ ಹೊಡೆದೆ. ಆತ ಸತ್ತು ಹೋದ ಎಂದು ತಿಳಿಸಿದರು. ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ. 
 

click me!