ಕೈಕೊಟ್ಟ ವಯಾಗ್ರದಿಂದ ಜೀವ ಹೋಯ್ತು!

By Roopa Hegde  |  First Published Nov 5, 2024, 3:58 PM IST

ಮುಂಬೈನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾರೀರಿಕ ಸಂಬಂಧ ಬೆಳೆಸುವ ವೇಳೆ ವ್ಯಕ್ತಿ ಸಾವನ್ನಪ್ಪಿದ್ದಾನೆ. ಮೊದಲು ಹೃದಯಾಘಾತ ಅಂದ್ಕೊಂಡಿದ್ದ ಪೊಲೀಸರಿಗೆ ಈಗ ಬೇರೆ ಸುಳಿವು ಸಿಕ್ಕಿದೆ. 
 


ಅಪ್ರಾಪ್ತ ಬಾಲಕಿ (minor girl) ಜೊತೆ ಲೈಂಗಿಕ ಸಂಬಂಧ ಬೆಳೆಸುವ ವೇಳೆ ಸಾವನ್ನಪ್ಪಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ವ್ಯಕ್ತಿ ಹೃದಯಾಘಾತ (heart attack) ದಿಂದ ಅಲ್ಲ, ವಯಾಗ್ರ (Viagra) ಓವರ್ ಡೋಸ್  (overdose)ನಿಂದ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ್ಮೇಲೆ ಸಂಪೂರ್ಣ ಸತ್ಯ ಹೊರಬರಬೇಕಿದೆ.

ನವೆಂಬರ್ 2ರಂದು ಮುಂಬೈನ ಗ್ರಾಂಟ್ ರೋಡ್ ಪ್ರದೇಶದ ಹೊಟೇಲ್ ಒಂದರಲ್ಲಿ 41 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದ. ಅಪ್ರಾಪ್ತ ಬಾಲಕಿ ಜೊತೆ ಶಾರೀರಿಕ ಸಂಬಂಧ ಬೆಳೆಸಿದ್ದ ವ್ಯಕ್ತಿ, ಅದೇ ಸಮಯದಲ್ಲಿ ಕೆಳಗೆ ಬಿದ್ದಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರಂಭಿಕ ತನಿಖೆಯಲ್ಲಿ ಇದು ಹೃದಯಾಘಾತ ಎಂದಿದ್ದರು. ಆದ್ರೀಗ ವಯಾಗ್ರ ಇದಕ್ಕೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ.

Tap to resize

Latest Videos

ಬ್ಯಾಂಕ್ ಖಾತೆಯಲ್ಲಿ ಮಿನಿಮನ್ ಬ್ಯಾಲೆನ್ಸ್ ಇಲ್ಲದಿದ್ದರೆ ದಂಡ ಕಟ್ಟಬೇಕಾ? ಇಲ್ಲಿದೆ RBI ನಿಯಮ!

ಮೃತ ವ್ಯಕ್ತಿ ಗುಜರಾತಿನ ಸೂರತ್ ನಿವಾಸಿ. ಆತನ ಹೆಸರು ಸಂಜಯ್ ಕುಮಾರ್ ತಿವಾರಿ. ಸಂಜಯ್, ಡೈಮಂಡ್ ಪಾಲಿಶ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ. ಸಂಜಯ್ ಜೊತೆಗೆ ಬಂದಿದ್ದ ಬಾಲಕಿ, ಪಕ್ಕದ ಮನೆಯವಳು. ಬಾಲಕಿ ತಂದೆ ಪಾರ್ಶ್ವವಾಯುವಿಗೆ ಒಳಗಾಗಿದ್ದ ಸಮಯದಲ್ಲಿ ಸಂಜಯ್ ಕುಮಾರ್ ತಿವಾರಿ, ಬಾಲಕಿಗೆ ಸಹಾಯ ಮಾಡಿದ್ದ. ಮೃತ ವ್ಯಕ್ತಿ ಸಂಜಯ್ ಕುಮಾರ್ ತಿವಾರಿ, ಬಾಲಕಿ ತಂದೆಯ ಸ್ನೇಹಿತ. ಮನೆ ಖರ್ಚು ಸೇರಿದಂತೆ ಸಣ್ಣಪುಟ್ಟ ಕೆಲಸಕ್ಕೆ ಹಣ ಸಹಾಯ ಮಾಡುತ್ತಿದ್ದ. ಈ ಸಮಯದಲ್ಲಿಯೇ ಬಾಲಕಿ ಮತ್ತು ಸಂಜಯ್ ಕುಮಾರ್ ತಿವಾರಿ ಮಧ್ಯೆ ಸ್ನೇಹವಾಗಿದೆ. ಮುಂಬೈ ಸುತ್ತಾಟದ ಹೆಸರಿನಲ್ಲಿ ಹುಡುಗಿಯನ್ನು ಸಂಜಯ್ ಕುಮಾರ್ ತಿವಾರಿ ಕರೆತಂದಿದ್ದಾನೆ. ಇಬ್ಬರೂ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮುಂಬೈಗೆ ಬಂದಿದ್ದಾರೆ. ಅಲ್ಲಿಂದ ದಕ್ಷಿಣ ಮುಂಬೈನ ಡಿಬಿ ಮಾರ್ಗ್ ಪ್ರದೇಶಕ್ಕೆ ತೆರಳಿದ್ದಾರೆ. ನಾಲ್ಕು ಗಂಟೆ ಸುಮಾರಿಗೆ ಹೊಟೇಲ್ ರೂಮ್ ಬುಕ್ ಮಾಡಲಾಗಿದೆ. 

ಹುಡುಗಿ ಅಪ್ರಾಪ್ತೆಯಾಗಿದ್ದ ಕಾರಣ, ನಕಲಿ ಆಧಾರ್ ಕಾರ್ಡ್ ತಯಾರಿಸಿದ್ದ ಸಂಜಯ್, ಆಕೆ ತನ್ನ ಮಗಳು ಎಂದು ಹೊಟೇಲ್ ಸಿಬ್ಬಂದಿಯನ್ನು ನಂಬಿಸಿದ್ದಾನೆ. ರೂಮ್ ನಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಆಕೆ ಮೇಲೆ ಹಲ್ಲೆ ಕೂಡ ನಡೆಸಿದ್ದಾನೆ ಸಂಜಯ್ ಕುಮಾರ್ ತಿವಾರಿ. ನಂತ್ರ ಕೆಳಗೆ ಕುಸಿದು ಬಿದ್ದಿದ್ದಾನೆ. ಬಾಲಕಿ, ಹೋಟೆಲ್ ಸಿಬ್ಬಂದಿಯನ್ನು ಸಂಪರ್ಕಿಸಿ, ವಿಷ್ಯ ತಿಳಿಸಿದ್ದಾಳೆ. ತಕ್ಷಣ ಸಂಜಯ್ ನನ್ನು ಜೆಜೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಸಂಜಯ್ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು, ಮೃತ ದೇಹವನ್ನು ವಶಕ್ಕೆ ಪಡೆದಿದ್ದಾರೆ. 

41 ವರ್ಷದ ಸಂಜಯ್ ಕುಮಾರ್ ತಿವಾರಿ, ಅಪ್ರಾಪ್ತೆ ಜೊತೆ ಸಂಬಂಧ ಬೆಳೆಸುವ ವೇಳೆ ಹೃದಯಾಘಾತಕ್ಕೆ ಒಳಗಾಗಿದ್ದಾನೆಂದು ಪೊಲೀಸರು ಆರಂಭಿಕ ಹೇಳಿಕೆ ನೀಡಿದ್ದರು. ಆದ್ರೆ ಕೋಣೆಯಲ್ಲಿ ದೈಹಿಕ ಶಕ್ತಿ ಹೆಚ್ಚಿಸುವ ವಯಾಗ್ರ ಸಿಕ್ಕಿದೆ. ಸಂಜಯ್, ಸಂಬಂಧ ಬೆಳೆಸುವ ಮೊದಲು ವಯಾಗ್ರ ಸೇವನೆ ಮಾಡಿದ್ದಾನೆ. ಆದ್ರೆ ಓವರ್ ಡೋಸ್ ನಿಂದ ದುರ್ಘಟನೆ ನಡೆದಿದೆ ಎನ್ನಲಾಗ್ತಿದೆ. ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ವರದಿ ನಂತ್ರ ಎಲ್ಲ ಊಹಾಪೋಹಗಳಿಗೆ ಸ್ಪಷ್ಟನೆ ಸಿಗಲಿದೆ. ಸಂಜಯ್ ಕುಮಾರ್ ತಿವಾರಿ ಗುಜರಾತಿನಲ್ಲಿ ಸಂಸಾರ ಹೊಂದಿದ್ದಾನೆ. ಇತ್ತ ಬಾಲಕಿ ತಾಯಿ ಘಟನೆಯಿಂದ ದಂಗಾಗಿದ್ದಾರೆ. ಸಂಜಯ್ ಕುಮಾರ್ ತಿವಾರಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿದ್ದಾಳೆ. 

ಬೆಂಗಳೂರು ಉದ್ಯಮಿ ದಿವಾಳಿ: 70 ಲಾರಿಗಳ ಮಾಲೀಕ ಹುಡುಗೀರ ಶೋಕಿಯಿಂದಾದ ಭಿಕ್ಷುಕ!

ಇದಕ್ಕೂ ಮುನ್ನ ಗುಜರಾತಿನಲ್ಲಿ ಇಂಥ ಘಟನೆಯೊಂದು ನಡೆದಿತ್ತು. ನರ್ಸಿಂಗ್ ವಿಷ್ಯಾರ್ಥಿನಿ ಸಂಬಂಧ ಬೆಳೆಸುವ ವೇಳೆ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಳು. ಆಕೆ ಖಾಸಗಿ ಅಂಗಕ್ಕೆ ಹಾನಿಯಾಗಿ ಈ ದುರಂತ ನಡೆದಿತ್ತು. 

click me!