ಇಬ್ಬಿಬ್ಬರು ಮಹಿಳೆಯೊಟ್ಟಿಗೆ ಗಂಡನ ಸಹವಾಸ. ಬೆಟ್ಟಿಂಗ್ ಚಟ ಬೇರೆ, ಬೇಸತ್ತ ಪತ್ನಿ ಸಾವಿಗೆ ಶರಣು

By Govindaraj S  |  First Published Dec 28, 2024, 3:13 PM IST

ಗಂಡನ ಅನೈತಿಕ ಸಂಬಂಧ ಹಾಗೂ ಬೆಟ್ಟಿಂಗ್ ಚಟಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ನೇಣು ಬೀಗಿದುಕೊಂಡು ರಂಜಿತಾ(25) ಆತ್ಮಹತ್ಯೆಗೆ ಶರಣಾಗಿದ್ದಾರೆ. 


ಬೆಂಗಳೂರು (ಡಿ.28): ಗಂಡನ ಅನೈತಿಕ ಸಂಬಂಧ ಹಾಗೂ ಬೆಟ್ಟಿಂಗ್ ಚಟಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ನೇಣು ಬೀಗಿದುಕೊಂಡು ರಂಜಿತಾ(25) ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರೀತಿಸಿ ಮದುವೆಯಾದರೂ ಗಂಡನಿಗೆ ಪರಸ್ತ್ರಿಯರ ಮೇಲೆ ಮೋಹವಿದ್ದು, ನಂಬಿ ಬಂದವಳ ಬಿಟ್ಟು ಬೇರೆ ಇಬ್ಬರು ಮಹಿಳೆಯರ ಜೊತೆ ಲವ್ವಿ-ಡವ್ವಿ ಮಾಡ್ತಿದ್ದ. ಹೀಗಾಗಿ ಡಿ.25ರಂದು ಬ್ಯಾಡರಹಳ್ಳಿಯ ಕೆಂಪೇಗೌಡ ನಗರದ ನಿವಾಸದಲ್ಲಿ ನೇಣು ಬಿಗಿದುಕೊಂಡು ರಂಜಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಸದ್ಯ ಮೃತಳ ಸೋಹದರನಿಂದ ಪತಿ ಕಿಶೋರ್ ವಿರುದ್ಧ ಬ್ಯಾಡರಹಳ್ಳಿ ಪೊಲೀಸರಿಗೆ ದೂರು ನೀಡಲಾಗಿದ್ದು, ಪತಿ ಕಿಶೋರ್ ಗೆ ಇಬ್ಬರು ಮಹಿಳೆಯರೊಂದಿಗೆ ಸಂಬಂಧ ಇತ್ತು ಅಂತ ಆರೋಪ ಮಾಡಲಾಗಿದೆ. ಅಲ್ಲದೇ ಮೂವರು ಚಿತ್ರಹಿಂಸೆ ನೀಡಿ ಅಕ್ಕನ ಸಾವಿಗೆ ಕಾರಣರಾಗಿದ್ದಾರೆಂದು ಮೃತ ರಂಜಿತಾ ತಮ್ಮ ದೂರು ನೀಡಿದ್ದಾರೆ. ಕಿಶೋರ್ ಆ ಇಬ್ಬರು ಮಹಿಳೆಯರು ಸೇರಿ 10 ಜನರ ವಿರುದ್ಧ ಪೊಲೀಸರು ಎಫ್.ಐ.ಆರ್ ದಾಖಲಿಸಿಕೊಂಡಿದ್ದಾರೆ.

Tap to resize

Latest Videos

undefined

ಚಿಕ್ಕಪ್ಪ ನಾಗಬಾಬುಗೆ ಕೆಟ್ಟದಾಗಿ ಬೈದ ರಾಮ್ ಚರಣ್: ಪೊಲೀಸ್ ಬೆಲ್ಟ್‌ ತಗೊಂಡ ಚಿರಂಜೀವಿ ಮಾಡಿದ್ದೇನು?

ದೂರಿನಲ್ಲಿ ಏನಿದೆ?: 2018ರ ಫೆಬ್ರವರಿಯಲ್ಲಿ ರಂಜಿತ ಪ್ರೀತಿಸಿ ಕಿಶೋರ್ ಜೊತೆ ಓಡಿ ಹೋಗಿ ಮದುವೆ ಆಗಿದ್ಲು. ಮನೆಗೆ ತಿಳಿಸದೆ ಮದುವೆಯಾಗಿ ಸಂಸಾರ ಮಾಡ್ತಿದ್ದರುಬಳಿಕ ಒಂದು ಮಗುವಾದ ನಂತರ ಮನೆಯವರಿಗೆ ರಂಜಿತ ಆಗಾಗ ಕರೆ ಮಾಡ್ತಿದ್ದರು. ಆ ವೇಳೆ ಗಂಡನ ಬೆಟ್ಟಿಂಗ್ ಚಟದ ಬಗ್ಗೆ ಹೇಳಿ ಕಷ್ಟದಲ್ಲಿದ್ದೇನೆ‌ ಸಹಾಯ ಮಾಡುವಂತೆ ಕೇಳಿದ್ಲು. ಆಗ ಆಕೆಯ ತಮ್ಮ ಇಬ್ಬರಿಗೂ ಮಾಗಡಿಯಲ್ಲಿ ಮನೆ ಮಾಡಿಕೊಟ್ಟಿದ್ದ. ಜೊತೆಗೆ ಚಿಕ್ಕಪ್ಪನ ಜೊತೆ ಸಾಲ‌ ಮಾಡಿ ಸಾಲವನ್ನೂ ತೀರಿಸಿದ್ದ ರಂಜಿತ ತಮ್ಮ. ಜೀವನಕ್ಕೆ ಅಂತ ಒಂದು ಆಟೋವನ್ನು ಕೂಡ ಕೊಡಿಸಿದ್ದರು. 

ಆದರೆ ಸರಿಹೋಗದ ಕಿಶೋರ್, ರಂಜಿತ ಬಳಿ ಹಣಕ್ಕೆ ಪಿಡಿಸಿ ಹಿಂಸೆ ಮಾಡ್ತಿದ್ದ ಅಂತ ದೂರು ಹೇಳಿದಲ್ಲದೇ ಹಣ ತೆಗೆದುಕೊಂಡು ಬಾ ಎಂದು ಹಲ್ಲೆ ಮಾಡಿದ್ದಾಗಿ ಅಕ್ಕ ಹೇಳಿಕೊಂಡಿದ್ದಳಂತೆ. ಬೆಟ್ಟಿಂಗ್ ಚಟದ ಜೊತೆ ಮಹಿಳೆಯರೊಂದಿಗೆ ಅನೈತಿಕ‌ ಸಂಬಂಧ ಇಟ್ಟುಕೊಂಡಿದ್ದನಂತೆ. ಇಬ್ಬರು ಮಹಿಳೆಯರ ಜೊತೆ ಸಂಬಂಧ ಇಟ್ಟುಕೊಂಡ ಬಗ್ಗೆ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಕಿಶೋರ್ ಇಬ್ಬರು ಮಹಿಳೆಯರು ನಮ್ಮ ಜೊತೆಗೆ ಇರಲಿ ಅಂತ ಹಿಂಸೆ ನೀಡ್ತಿದ್ದನಂತೆ. ಮೂವರು ಸೇರಿ ನಿತ್ಯ ಹಲ್ಲೆ ಮಾಡಿ ಹಿಂಸೆ ನೀಡ್ತಿದ್ದರಂತೆ. ಜೊತೆಗೆ ಸಾಲಗಾರರು ಮನೆಗೆ ಬಂದು ಮಾನಸಿಕ‌ ಹಿಂಸೆ ನೀಡ್ತಾ ಇದ್ದರಂತೆ. 

ದುಬಾರಿ ಮದ್ಯದ ಬಾಟಲಿಗಳನ್ನು ಕಳವು ಮಾಡಿದ್ದ ಅಂತರ್ ಜಿಲ್ಲಾ ಕಳ್ಳರ ಬಂಧನ!

ಈ ಬಗ್ಗೆ ಮನೆಯವರ ಬಳಿ ಮೃತ ರಂಜಿತ ಹೇಳಿಕೊಂಡಿದ್ದರು. ಬಳಿಕ ರಂಜಿತ ಮನೆಯವರು ಕಿಶೋರ್ ಬುದ್ದಿವಾದ ಹೇಳಿದ್ದರು. ಬ್ಯಾಡರಹಳ್ಳಿಯ ಕೆಂಪೇಗೌಡ ನಗರದಲ್ಲಿ ಮನೆ ಮಾಡಿಕೊಟ್ಟಿದ್ದರು. ಆದರೆ ಬುದ್ದಿ ಬಿಡದ ಕಿಶೋರ್ ಆ ಇಬ್ಬರು ಮಹಿಳೆಯರನ್ನ ಕರೆದುಕೊಂಡು ಬಂದಿದ್ದನಂತೆ.  ತನ್ನ‌ ಮನೆಯ ಪಕ್ಕದ ರೋಡಿನಲ್ಲಿ ಇಬ್ಬರಿಗೆ ಮನೆ ಮಾಡಿಕೊಟ್ಟಿದ್ದನಂತೆ. ಅನೈತಿಕ‌‌ ಸಂಬಂಧ ಮುಂದುವರೆಸಿ, ಮೂವರು ಸೇರಿ ರಂಜಿತಗೆ ಹಿಂಸೆ ನೀಡ್ತಿದ್ದರೆಂದು ದೂರಿನಲ್ಲಿ ತಿಳಿಸಲಾಗಿದೆ. ಜೊತೆಗೆ ಗಂಡ ಸಾಲ ಮಾಡಿದವರು ಕಿರುಕುಳು ನೀಡಿದ್ದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಪ್ರಕರಣ ಸಂಬಂಧ 10 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

click me!