Chikkamagaluru: 3 ದುಬಾರಿ ಮದ್ಯದ ಬಾಟಲಿಗಳನ್ನು ಕಳವು ಮಾಡಿದ್ದ ಅಂತರ್ ಜಿಲ್ಲಾ ಕಳ್ಳರ ಬಂಧನ!

By Govindaraj S  |  First Published Dec 28, 2024, 8:19 AM IST

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಯಲ್ಲಿ ಕಳ್ಳತನ ಮಾಡುತ್ತಿದ್ದ  ಅಂತರ್ ಜಿಲ್ಲಾ ಖದೀಮರನ್ನು ಚಿಕ್ಕಮಗಳೂರು ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಡಿ.28): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಯಲ್ಲಿ ಕಳ್ಳತನ ಮಾಡುತ್ತಿದ್ದ  ಅಂತರ್ ಜಿಲ್ಲಾ ಖದೀಮರನ್ನು ಚಿಕ್ಕಮಗಳೂರು ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸರಣಿ ಕಳ್ಳತನವನ್ನು ಮಾಡುವ ಮೂಲಕ ಇಬ್ಬರು ಕಳ್ಳರು  ಪೊಲೀಸರ ನಿದ್ದೆಗೆಡಿಸಿದರು. 

Tap to resize

Latest Videos

undefined

ದುಬಾರಿ‌ ಮದ್ಯ ಕಳ್ಳತನ ಮಾಡಿದ್ದ ಕಳ್ಳರು: ಡಿಸೆಂಬರ್ 18ರಂದು ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಪಟ್ಟಣದಲ್ಲಿ ಸರಣಿ ಕಳ್ಳತನವಾಗಿತ್ತು.‌ಬಾಳೆಹೊನ್ನೂರಿನಲ್ಲಿ ಸರಣಿ ಕಳ್ಳತನ ಮಾಡಿದ್ದು ಇಬ್ಬರು ಖದೀಮರು ತಮ್ಮ ಕೈಚಳಕವನ್ನು ತೋರಿಸಿ ಪರಾರಿಯಾಗಿದ್ದರು.ಪಟ್ಟಣದ ಮುಬಾರಕ್ ಹುಸೇನ್ ಎಂಬುವವರ ಅಂಗಡಿಯ ಬೀಗ ಮುರಿದು 20 ಸಾವಿರ ನಗದು ಎರಡು ದುಬಾರಿ ಮೌಲ್ಯದ  ವಾಚ್ ಹಾಗೂ ಸಿಸಿ ಟಿವಿ ಕ್ಯಾಮರಾದ ಡಿವಿಆರ್ ಅನ್ನು ಎಗರಿಸಿದ್ದರು.  ಅಷ್ಟೆ ಅಲ್ಲದೇ ಅಲ್ಲೇ ಇದ್ದ ಕಲ್ಮಕ್ಕಿ ವೈನ್ ಶಾಪ್ ಬೀಗ ಒಡೆದು  ದುಬಾರಿ ಮದ್ಯವನ್ನು ಕಳ್ಳತನ ಮಾಡಿದರು. 

ಟಿಕೆಟ್‌ ಕೊಳ್ಳಲು ದುಡ್ಡಿಲ್ಲ ಎಂದು ರೈಲಿನ ಕೆಳಗೆ ಕುಳಿತು 250 ಕಿ. ಮೀ ಪ್ರಯಾಣ!

ಬಾರ್ ನಲ್ಲಿ ದುಬಾರಿ ಮದ್ಯವಾದ 2 ಬ್ಲಾಕ್ ಅಂಡ್ ವೈಟ್, 1 ಬ್ಲೈಂಡರ್ ಸ್ಪೈಡ್ ಎಣ್ಣೆ ಜೊತೆ 20 ಸಾವಿರ ನಗದು ಕಳ್ಳತನ ಮಾಡಿದ್ದರು. ಈ ಕುರಿತು ಅಂಗಡಿ ಮಾಲೀಕರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಬಾಳೆಹೊನ್ನೂರು ಪಿಎಸ್ಐ ರವೀಶ್ ಹಾಗೂ ಸಿಬ್ಬಂದಿಗಳು, ಚಿತ್ರದುರ್ಗ ಮೂಲದ ಕರುಣ ಹಾಗೂ ಹಸೈನ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ 3.50 ಲಕ್ಷ ನಗದು, 4.10 ಲಕ್ಷ ಮೌಲ್ಯದ ವಸ್ತುಗಳು ಸೇರಿದಂತೆ ಮಾರುತಿ ಸ್ವಿಫ್ಟ್ ಕಾರನ್ನು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ.ಬಾಳೆಹೊನ್ನೂರು ಪೊಲೀಸರ ಕಾರ್ಯಕ್ಕೆ ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ ಪ್ರಶಂಸೆ  ವ್ಯಕ್ತಪನಿದ್ದೆಗೆಡಿಸಿದರು.

click me!