ಈ ನಕಲಿ ಮದ್ಯ ತಯಾರಕರು ಸೇಮ್ ಟು ಸೇಮ್ ಕಂಪನಿಯ ಮದ್ಯದಂತೆ ಕಲರ್, ಸ್ಟಿಕ್ಕರ್, ಲೇಬಲ್, ಸೀಲ್ ಅಳವಡಿಸಿಕೊಂಡು ಲಕ್ಷಾಂತರ ರುಪಾಯಿ ಮೌಲ್ಯದ ಮದ್ಯ ತಯಾರಿಕೆ ಮಾಡುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಪೊಲೀ ಸರು ಬರೋಬ್ಬರಿ ಎಂಟೂವರೆ ಲಕ್ಷ ರುಪಾಯಿ ಮೌಲ್ಯದ ನಕಲಿ ಮದ್ಯ ಜಪ್ತಿ ಮಾಡಿದ್ದಾರೆ.
ಶಶಿಕಾಂತ ಮೆಂಡೆಗಾರ
ವಿಜಯಪುರ(ಡಿ.28): ಇನ್ನೇನು ಹೊಸವರ್ಷ ಬಂದೇಬಿಡ್ತು, ಎಲ್ಲರೂ ಸೇರಿ ಹೊಸ ವರ್ಷದ ಸಂಭ್ರಮ ಮಾಡಲು ಎಂದುಕೊಂಡಿರುವ ಮದ್ಯ ಪ್ರಿಯರಿಗೆ ನಕಲಿ ಮದ್ಯ ತಯಾರಕರು ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಬ್ರಾಂಡೆಡ್ ಕಂಪ ನಿಗಳ ಲಕ್ಷ ಲಕ್ಷ ಮೌಲ್ಯದ ಮದ್ಯವನ್ನು ಅಸಲಿಯ ತಲೆಯ ಮೇಲೆ ಹೊಡೆದಂತೆ ತಯಾರಿಸುತ್ತಿದ್ದ ತಂಡವೊಂದನ್ನು ಅಬಕಾರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಕಲಿ ತಯಾರಿಕಾ ಅಡ್ಡೆಯ ಮೇಲೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಅಸಲಿ ಯಾವುದು, ನಕಲಿ ಯಾವುದು ಎಂದು ಕಂಡುಹಿಡಿಯಲು ಪೇಚಾಡಿದ ಘಟನೆ ನಡೆದಿದೆ.
undefined
ಅಸಲಿಯತ್ತಿಗೆ ನಕಲಿ ಸವಾಲ್:
ಸಾಕಷ್ಟು ನಿಯಮಾವಳಿಗಳನ್ನು ಪಾಲಿಸಿ ಮದ್ಯ ತಯಾರು ಮಾಡುವ ಕಂಪನಿಗಳು ತಕ್ಕ ಮಟ್ಟಿಗೆ ಗುಣಮಟ್ಟ ಕಾಪಾಡಿಕೊಂ ಡು ನಿಗದಿಪಡಿಸಲಾದ ಪ್ರಮಾಣದಲ್ಲಿ ಕಂಟೆಂಟ್ ಗಳನ್ನು ಬೆರೆಸುತ್ತವೆ. ಜತೆಗೆ ಕರ್ನಾಟಕ ಸರ್ಕಾರ ನಿಗದಿಪಡಿಸಿದ ಲೇಬಲ್, ಸ್ಟಿಕ್ಚರ್, ಸೀಲ್ ಗಳನ್ನು ಅಳವಡಿಕೆ ಮಾಡಲಾಗುತ್ತದೆ. ಆದರೆ ಈ ನಕಲಿ ಮದ್ಯ ತಯಾರಕರು ಸೇಮ್ ಟು ಸೇಮ್ ಕಂಪನಿಯ ಮದ್ಯದಂತೆ ಕಲರ್, ಸ್ಟಿಕ್ಕರ್, ಲೇಬಲ್, ಸೀಲ್ ಅಳವಡಿಸಿಕೊಂಡು ಲಕ್ಷಾಂತರ ರುಪಾಯಿ ಮೌಲ್ಯದ ಮದ್ಯ ತಯಾರಿಕೆ ಮಾಡುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಪೊಲೀ ಸರು ಬರೋಬ್ಬರಿ ಎಂಟೂವರೆ ಲಕ್ಷ ರುಪಾಯಿ ಮೌಲ್ಯದ ನಕಲಿ ಮದ್ಯ ಜಪ್ತಿ ಮಾಡಿದ್ದಾರೆ.
ಹೊಸ ವರ್ಷಕ್ಕೆ ಮದ್ಯದ ಪಾರ್ಟಿಗೆ ಪ್ಲಾನ್ ಹಾಕಿರೋರು ಹುಷಾರ್; ನಕಲಿ ಬ್ರಾಂಡೆಡ್ ಮದ್ಯ ತಯಾರಿಸೋ ಗ್ಯಾಂಗ್ ಪತ್ತೆ!
ಕರುಳು ಸುಡುತ್ತೆ ನಕಲಿ ಮದ್ಯ:
ನಕಲಿ ಮದ್ಯ ತಯಾರಿಕೆಗೆ ಕಳಪೆ ಮಟ್ಟದ ಸೀರಿಟ್, ಕಳಪೆ ಕಲರ್, ವಾಸನೆಗೆ ಕಳಪೆ ಪ್ಲೇವರ್ ಬಳಸುತ್ತಿದ್ದರು. ದಾಳಿ ನಡೆಸಿದ ಅಧಿಕಾರಿಗಳಿಗೆ ನಕಲಿ ಬ್ರಾಡೆಂಡ್ ಮದ್ಯ ತಯಾರಿಕೆಗೆ ಈ ಖದೀಮರು ಉಪಯೋಗಿಸಿ ಬಿಸಾಕಿದ ಬ್ರಾಂಡೆಡ್ ಕಂಪನಿಗಳ ಮದ್ಯದ ಬಾಟಲಿ ಸಂಗ್ರಹಿಸುತ್ತಿದ್ದರು. ಅದರಲ್ಲಿ ಅಸಲಿಯಂತೆ ಕಾಣುವ ನಕಲಿ ಮದ್ಯ ತುಂಬಿಸುತ್ತಿದ್ದರು. ಇಂತಹ 561 ಲೀಟರ್ ನಕಲಿ ಮದ್ಯವುಳ್ಳ 65 ಬಾಕ್ಸ್ ಹಾಗೂ 200 ಲೀಟರ್ ಸ್ಪಿರಿಟ್ ವಶಪಡಿಸಿಕೊಳ್ಳಲಾಗಿದೆ.
ಯಾವ ಯಾವ ಬ್ರ್ಯಾಂಡ್ ತಯಾರಿಸುತ್ತಿದ್ದ ಖದೀಮರು?:
ಈ ಗ್ಯಾಂಗ್ ಮಾರ್ಕೆಟ್ ನಲ್ಲಿ ಹೆಚ್ಚೆಚ್ಚು ಮಾರಾಟವಾಗುವ ಜನಪ್ರಿಯ ಬ್ರಾಂಡ್ ಗಳ ಮದ್ಯವನ್ನೇ ಡುಪ್ಲಿಕೇಟ್ ಮಾಡಿದ್ದಾರೆ. ಎಂ.ಸಿ.ಮೆಗ್ದಾಲ್ ನಂಬರ್ 1 ಹಾಗೂ ಇಂಪಿರಿಯಲ್ ಬ್ಲೂ ಬ್ರಾಂಡ್ಗಳನ್ನು ನಕಲಿ ಬಾಟಲ್ ತಯಾರಿಸಿದ್ದಾರೆ. ಗುವಾಹಟಿಯಿಂದ ಎರಡು ಕಂಪನಿಗಳ ನಕಲಿ ಸ್ಟಿಕ್ಟರ್, ಸೀಲ್, ಕರ್ನಾಟಕ ಸರ್ಕಾರದ ಹಾಲೊಗ್ರಾಮ್ ಸಹಿತವಾಗಿ ನಕಲಿ ತಯಾರಿಸಿ ನಕಲಿ ಬಾಟಲ್ ರೆಡಿ ಮಾಡಿದ್ದಾರೆ.
ನಕಲಿ ಮದ್ಯ ತಯಾರಿಕಾ ಅಡ್ಡೆಯಾಗಿರುವ ಸಿಂದಗಿ:
ಜಿಲ್ಲೆಯ ಸಿಂದಗಿ ಪಟ್ಟಣದ ಹೊರವಲಯದಲ್ಲಿ ನಕಲಿ ಮದ್ಯ ತಯಾರಿಸೋ ಅಡ್ಡೆ ಹುಟ್ಟಿಕೊಂಡಿತ್ತು. ಸಿಂದಗಿಯ ಅಮೋಘಸಿದ್ದ ಹೂಗಾರ್ ಎಂಬುವವರ ಜಮೀನಿನಲ್ಲಿ ಹುಬ್ಬಳ್ಳಿಯ ಕಮರಿಪೇಟೆಯಿಂದ ಬಂದಿದ್ದ ಐವರು ದಂಧೆಕೋರರು ನಕಲಿ ಬ್ರಾಂಡೆಡ್ ಮದ್ಯ ತಯಾರಿಕೆಯಲ್ಲಿ ತೊಡಗಿದ್ದರು.
ಮಂಡ್ಯದಲ್ಲಿ ತಯಾರಾಗುತ್ತೆ ಬ್ರ್ಯಾಂಡೆಡ್ ಹೆಸರಲ್ಲಿ ನಕಲಿ ಮದ್ಯ: ಇದನ್ನ ಕುಡಿದರೆ ದೇವರೇ ಕಾಪಾಡಬೇಕು!
ಆರೋಪಿಗಳ ಹೆಡೆಮುರಿ ಕಟ್ಟಿದ ಅಬಕಾರಿಗಳು:
ಈ ವೇಳೆ ಖಚಿತ ಮಾಹಿತಿ ಬಂದ ತಕ್ಷಣ ಸಿಂದಗಿ ಹಾಗೂ ವಿಜಯಪುರ ಅಬಕಾರಿ ಪೊಲೀಸರು ಹಾಗೂ ಅಧಿಕಾರಿಗಳು ದಾಳಿ ನಡೆಸಿ ಜಮೀನು ಮಾಲೀಕ ಅಮೋಘಸಿದ್ದ ಹೂಗಾರ, ಹುಬ್ಬಳ್ಳಿಯ ಕೃಷ್ಣಾ ಬಾಂಡಗೆ, ಅಕ್ರಯ ಜಾಧವ, ಅಭೀಷೇಕ ಜಾಧವ, ನಾಗರಾಜ ಬೋಜಗೇರಿ, ವಿನಾಯಕ ಕಲಾಲ ಬಂಧಿಸಿದ್ದಾರೆ. ಅಬಕಾರಿ ಆಯುಕ್ತ ವೀರಣ್ಣ ಬಾಗೇವಾಡಿ ನೇತೃತ್ವದಲ್ಲಿ ರೇಡ್ ಮಾಡಿದ ಸಿಂದಗಿ ಅಬಕಾರಿ ಅಧಿಕಾರಿ ಶಿವಾನಂದ ಹೂಗಾರ, ವಿಜಯಪುರ ಅಬಕಾರಿ ನಿರೀಕ್ಷಕ ಮಹಾದೇವ ಪೂಜಾರಿ ಹಾಗೂ ತಂಡ ಒಟ್ಟು ಆರು ಜನರನ್ನು ಹೆಡೆಮುರಿ ಕಟ್ಟಿ ಮುಂದಿನ ತನಿಖೆ ನಡೆಸುತ್ತಿದೆ.
ಜಮೀನೊಂದರಲ್ಲಿ ನಕಲಿ ಮದ್ಯ ತಯಾರಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ಈ ವೇಳೆ ಆರು ಆರೋಪಿಗಳನ್ನು ಬಂಧಿಸಿ, ನಕಲಿ ಮದ್ಯ ತುಂಬಿಸಿದ 18.50 ಲಕ್ಷ ಮೌಲ್ಯದ ಬಾಟಲಿಗಳನ್ನು ಜಪ್ತಿ ಮಾಡಲಾಗಿದೆ. ಇವರೆಲ್ಲ ಹಳೆಯ ಆರೋಪಿಗಳು ಎಂಬುವುದು ಗೊತ್ತಾಗಿದ್ದು, ಅದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಅಬಕಾರಿ ಡಿಸಿ ವೀರಣ್ಣ ಬಾಗೇವಾಡಿ ತಿಳಿಸಿದ್ದಾರೆ.