
ಉಡುಪಿ(ನ. 15) ಸೆಪ್ಟಂಬರ್ ತಿಂಗಳಲ್ಲಿ ಕುಂದಾಪುರ ತಾಲೂಕಿನ ಬೀಜಾಡಿ ಗ್ರಾಮದ ಬೀಪಾನ್‌ಬೆಟ್ಟಿನ ಜಯರಾಜ್ ಶೆಟ್ಟಿ ಅವರ ಮನೆಯಲ್ಲಿ ಸುಮಾರು 9,88,500 ರು. ಮೌಲ್ಯದ ಚಿನ್ನ - ಬೆಳ್ಳಿಯ ಆಭರಣಗಳನ್ನು ಕಳವು ಮಾಡಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳು ಧಾರವಾಡದ ಜನತಾನಗರದ ನಿವಾಸಿಗಳಾದ ರಾಜು ಪಾಮಡಿ (42) ಹಾಗೂ ಆತನ ಹೆಂಡತಿ ಪದ್ಮ ಪಾಮಡಿ (37), ಅವರಿಂದ ಒಟ್ಟು 202 ಗ್ರಾಂ ಚಿನ್ನ ಹಾಗೂ 1.683 ಕೆಜಿ ಬೆಳ್ಳಿ, 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ರೈತರ ಟ್ರ್ಯಾಕ್ಟರ್ ಕದ್ದು ರೈತರಿಗೆ ಲೀಸ್ ಕೊಡ್ತಿದ್ದ
ರಾಜೇಶ್ ಮೂಲತಃ ಉಡುಪಿಯ ಇಂದ್ರಾಳಿಯವನಾಗಿದ್ದು, ಕಾಪು, ಮಣಿಪಾಲಗಳಲ್ಲಿ ಕಳ್ಳತನ ನಡೆಸಿ ಜೈಲಿನಲ್ಲಿದ್ದು, ಜುಲೈನಲ್ಲಿ ಜಾಮೀನು ಮೇಲೆ ಬಿಡುಗಡೆಗೊಂಡು, ಮತ್ತೇ ಹೆಂಡತಿಯೊಂದಿಗೆ ಕುಂದಾಪುರ, ಸುರತ್ಕಲ್ , ಮುಲ್ಕಿ, ಮಣಿಪಾಲ, ಗಂಗೊಳ್ಳಿ, ಭಟ್ಕಳ, ಮುರ್ಡೇಶ್ವರ, ಗೋಕರ್ಣ, ಕುಮಟಾ, ಹೊನ್ನಾವರ, ಕಾರಾವಾರಗಳಲ್ಲಿ ಮನೆ ಹಾಗೂ ದೇವಸ್ಥಾನ, ದೈವಸ್ಥಾನಗಳಲ್ಲಿ ಕಳವು ಮಾಡಿದ್ದಾನೆ.
ಕುಂದಾಫುರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್., ಎಸೈ ಸದಾಶಿವ ಗವರೋಜಿ, ಟ್ರಾಫಿಕ್ ಎಸೈ ಸುದರ್ಶನ್, ಶಂಕರನಾರಾಯಣ ಎಸೈ ಶ್ರೀಧರ ನಾಯ್ಕ ಮತ್ತು ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ