ಬೀದರ್: ಪೊಲೀಸರ ಮೇಲೆ ಹಲ್ಲೆಗೆ ಯತ್ನ, ದರೋಡೆಕೋರರ ಮೇಲೆ ಫೈರಿಂಗ್‌

By Girish Goudar  |  First Published Mar 21, 2023, 11:37 PM IST

ಹಲವು ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಖದೀಮರ ಹೆಡೆಮುರಿ ಕಟ್ಟಲ್ಲು ಪೊಲೀಸರು ಮುಂದಾಗಿದ್ದರು. ಈ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಇಬ್ಬರು ಖದೀಮರು ಯತ್ನಿಸಿದ್ದರು. ಈ ವೇಳೆ ಗಾಳಿಯಲ್ಲಿ ಒಂದು ಸುತ್ತಿನ ಗುಂಡು ಹಾರಿಸಿದ ಸಿಪಿಐ ಯಾತ‌ನೂರ್. 


ಬೀದರ್(ಮಾ.21): ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ದರೋಡೆಕೋರರ ಮೇಲೆ ಸಿಪಿಐ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಬೀದರ್ ನಗರದ ಮೈಕೂರ್‌ನ ರಿಂಗ್ ರೋಡ್‌ನಲ್ಲಿ ಇಂದು(ಮಂಗಳವಾರ) ನಡೆದಿದೆ. 

ಹಲವು ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಖದೀಮರ ಹೆಡೆಮುರಿ ಕಟ್ಟಲ್ಲು ಪೊಲೀಸರು ಮುಂದಾಗಿದ್ದರು. ಈ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಇಬ್ಬರು ಖದೀಮರು ಯತ್ನಿಸಿದ್ದರು. ಈ ವೇಳೆ ಸಿಪಿಐ ಯಾತ‌ನೂರ್ ಅವರು ಗಾಳಿಯಲ್ಲಿ ಒಂದು ಸುತ್ತಿನ ಗುಂಡು ಹಾರಿಸಿದ್ದಾರೆ. 

Tap to resize

Latest Videos

undefined

Chikkamagaluru: ಅನಧಿಕೃತ ಬಂದೂಕುಗಳ ವಶದ ಬೆನ್ನಲ್ಲೇ ಮೀಸಲು ಅರಣ್ಯದಲ್ಲಿ 60ಕ್ಕೂ ಹೆಚ್ಚು ಫೈರಿಂಗ್ ಕಾಟ್ರೇಜ್ ಪತ್ತೆ

ಖಚಿತ ಮಾಹಿತಿ ಮೇರೆಗೆ ದರೋಡೆಕೋರರ ಮೇಲೆ ಪೊಲೀಸ್ ದಾಳಿ ಮಾಡಿದ್ದಾರೆ. ಓರ್ವ ಆರೋಪಿಯನ್ನ ಬಂಧಿಸಿದ್ದು, ಮತ್ತೊರ್ವ ಆರೋಪಿ ಪರಾರಿಯಾಗಿದ್ದಾನೆ. ಬೀದರ್ ರೂರಲ್ ಸಿಪಿಐ ಮಲ್ಲಿಕಾರ್ಜುನ ಯಾತನೂರ್, ಪಿಎಸ್ಐ ನಾಗೇಂದ್ರ ಮತ್ತು ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆದಿದೆ. 

click me!