ಮಂಗಳೂರು: ಮಗಳ ಮದುವೆಗೆ ಚಿನ್ನಾಭರಣ ಖರೀದಿಸಲು ತೆರಳುತ್ತಿದ್ದ ವ್ಯಕ್ತಿಯಿಂದ 10 ಲಕ್ಷ ರು. ಎಗರಿಸಿದ ಕಳ್ಳ

By Kannadaprabha News  |  First Published Mar 22, 2023, 12:00 AM IST

ಉಪ್ಪಿನಂಗಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ಇಳಂತಿಲ ಗ್ರಾಮದ ಪೆದಮಲೆ ಸರಳೀಕಟ್ಟೆ ರಸ್ತೆಯಲ್ಲಿ ನಡೆದ ಘಟನೆ. 


ಉಪ್ಪಿನಂಗಡಿ(ಮಾ.22): ಮಗಳ ಮದುವೆಗೆ ಚಿನ್ನಾಭರಣ ಖರೀದಿಸಲೆಂದು ದ್ವಿಚಕ್ರ ವಾಹನದಲ್ಲಿ ಹತ್ತು ಲಕ್ಷ ರು. ನಗದು ಹಣ ಕೊಂಡೊಯ್ಯುತ್ತಿದ್ದ ವೇಳೆ ಅಪರಿಚಿತ ಯುವಕನೋರ್ವ ಹಣದ ಕಟ್ಟನ್ನು ಕಿತ್ತೊಯ್ದ ಘಟನೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ಇಳಂತಿಲ ಗ್ರಾಮದ ಪೆದಮಲೆ ಸರಳೀಕಟ್ಟೆ ರಸ್ತೆಯಲ್ಲಿ ಸಂಭವಿಸಿದೆ.

ಇಳಂತಿಲ ಗ್ರಾಮದ ಕಾಯರ್ಪಾಡಿ ಮನೆ ನಿವಾಸಿ ಮಹಮ್ಮದ್‌ ಕೆ. (60) ಎಂಬವರು ತನ್ನ ಮಗಳ ಮದುವೆಗೆಂದು ಸಂಗ್ರಹಿಸಿಟ್ಟಿದ್ದ ಹತ್ತು ಲಕ್ಷ ರು. ಹಣವನ್ನು ಸೋಮವಾರ ಚಿನ್ನಾಭರಣ ಖರೀದಿಸುವ ಸಲುವಾಗಿ ಚೀಲವೊಂದರಲ್ಲಿ ಹಾಕಿ ಸ್ಕೂಟರ್‌ನ ಸೀಟಿನಡಿ ಇರಿಸಿ ತನ್ನ ಪತ್ನಿಯೊಂದಿಗೆ ಉಪ್ಪಿನಂಗಡಿಯ ಚಿನ್ನಾಭರಣ ಮಳಿಗೆಗೆ ಹೋಗುತ್ತಿದ್ದರು. ಈ ವೇಳೆ ಸಂಬಂಧಿಕರೊಬ್ಬರ ಮರಣ ವಾರ್ತೆ ಕೇಳಿ ಸರಳೀಕಟ್ಟೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಮಯ ಸ್ಕೂಟರ್‌ನಿಂದ ಪತ್ನಿ ಆಯತಪ್ಪಿ ಬಿದ್ದಿದ್ದರು. 

Tap to resize

Latest Videos

ಹಾಡಹಗಲೇ ಮಹಿಳಾ ಪ್ರೊಫೆಸರ್ ಎಳೆದೊಯ್ದು ದರೋಡೆ: ದೃಶ್ಯ ಕ್ಯಾಮರಾದಲ್ಲಿ ಸೆರೆ

ಗಾಯಗೊಂಡ ಪತ್ನಿಯನ್ನು ಉಪ್ಪಿನಂಗಡಿಯ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ, ಬಳಿಕ ಅವರನ್ನು ಮನೆಯಲ್ಲಿ ಬಿಟ್ಟು ಸ್ಕೂಟರ್‌ ಬಿದ್ದ ಸ್ಥಳಕ್ಕೆ ಬಂದರು. ತನ್ನಲ್ಲಿದ್ದ ಹಣದ ಕಟ್ಟನ್ನು ಸ್ಕೂಟರ್‌ ಸೀಟಿನಡಿ ಇಡಉವ ಸಂದರ್ಭ ಅಪರಿಚಿತ ಯುವಕನೋರ್ವ ಹಣದ ಕಟ್ಟನ್ನು ಬಲವಂತವಾಗಿ ಹಿಡಿದೆಳೆದು ಓಡಿ ತಪ್ಪಿಸಿಕೊಂಡಿದ್ದಾನೆ ಎಂದು ಪೊಟೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ. ಉಪ್ಪಿನಂಗಡಿ ಎಸೈ ರಾಜೇಶ್‌ ಕೆ.ವಿ. ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ.

click me!