ರಾಜ್ಯದಲ್ಲಿ ಮತ್ತೆ ಸ್ಯಾಟಲೈಟ್ ಫೋನ್ ಸೌಂಡ್: ಪೊಲೀಸರಿಗೆ ಸ್ಪಷ್ಟ ನಿರ್ದೇಶನ ನೀಡಿದ ಗೃಹ ಸಚಿವ

By Suvarna News  |  First Published Sep 21, 2021, 10:56 PM IST

* ರಾಜ್ಯದಲ್ಲಿ ಮತ್ತೆ ಸದ್ದು ಮಾಡಿದ ಸ್ಯಾಟಲೈಟ್ ಫೋನ್ 
* ಸ್ಯಾಟಲೈಟ್ ಫೋನ್ ಯಾದಗಿರಿ ಜಿಲ್ಲೆಯಲ್ಲಿ ಬಳಕೆ
* ಈ ಬಗ್ಗೆ ಪೊಲೀಸರಿಗೆ ಸ್ಪಷ್ಟ ನಿರ್ದೇಶನ ನೀಡಿದ ಸಚಿವ ಆರಗ ಜ್ಞಾನೇಂದ್ರ 


ಬೆಂಗಳೂರು, (ಸೆ.21):  ದೇಶದ್ರೋಹಿಗಳು ಬಳಕೆ ಮಾಡುವ ಅಪಾಯಕಾರಿ ಸ್ಯಾಟಲೈಟ್ ಫೋನ್ ಯಾದಗಿರಿ ಜಿಲ್ಲೆಯಲ್ಲಿ ಬಳಕೆ ಮಾಡಿರುವ ಆತಂಕಕಾರಿ ಸಂಗತಿ ಹೊರ ಬಿದ್ದಿದೆ.

ಯಾದಗಿರಿಯಿಂದ ಪಾಕಿಸ್ತಾನಕ್ಕೆ ಸ್ಯಾಟಲೈಟ್ ಪೋನ್ ಕರೆ ಹೋಗಿರುವ ಸಂಗತಿಯನ್ನು ರಾಜ್ಯ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ.

Tap to resize

Latest Videos

undefined

ಯಾದಗಿರಿಯಿಂದಲೂ ಪಾಕಿಸ್ತಾನಕ್ಕೆ ನಿಷೇಧಿತ ಸ್ಯಾಟಲೈಟ್ ಕರೆ

ಕರಾವಳಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಅಕ್ರಮವಾಗಿ ಸ್ಯಾಟಲೈಟ್ ಫೋನ್ ಬಳಕೆಯಾಗುತ್ತಿರುವ ಕುರಿತು ಅಗತ್ಯ 
ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ‌ ಎಂದು ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.

ಕರಾವಳಿ ಭಾಗದಲ್ಲಿ ಸ್ಥಳೀಯ ಪೊಲೀಸರು, ಕರಾವಳಿ ಕಾವಲು ಪಡೆ, ಸ್ಯಾಟಲೈಟ್ ಫೋನ್ ನಲ್ಲಿ ಸಂವಹನ ನಡೆಸುವ ವ್ಯಕ್ತಿಗಳ ಮೇಲೆ ವಿಶೇಷ ನಿಗಾ ವಹಿಸಿದೆ. ಇದು ದೇಶದ ಭದ್ರತೆಯ ವಿಚಾರವಾಗಿದ್ದು, ಇತ್ತೀಚೆಗೆ ಸುಮಾರು 220 ಬಾರಿ ಸ್ಯಾಟಲೈಟ್ ಫೋನ್ ಮುಖಾಂತರ ಬೇರೆ ದೇಶದ ಜೊತೆ ಸಂಪರ್ಕ ಸಾಧಿಸಿರುವುದನ್ನು ಪತ್ತೆ ಹಚ್ಚಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಕರಾವಳಿ ಭಾಗದಲ್ಲಿ ಸ್ಥಳೀಯ ಪೊಲೀಸರು, ಕರಾವಳಿ ಕಾವಲು ಪಡೆ, ಸ್ಯಾಟಲೈಟ್ ಫೋನ್ ನಲ್ಲಿ ಸಂವಹನ ನಡೆಸುವ ವ್ಯಕ್ತಿಗಳ ಮೇಲೆ ವಿಶೇಷ ನಿಗಾ ವಹಿಸಿದೆ. ಇದು ದೇಶದ ಭದ್ರತೆಯ ವಿಚಾರವಾಗಿದ್ದು, ಇತ್ತೀಚೆಗೆ ಸುಮಾರು 220 ಬಾರಿ ಸ್ಯಾಟಲೈಟ್ ಫೋನ್ ಮುಖಾಂತರ ಬೇರೆ ದೇಶದ ಜೊತೆ ಸಂಪರ್ಕ ಸಾಧಿಸಿರುವುದನ್ನು ಪತ್ತೆ ಹಚ್ಚಲಾಗಿದೆ. (2/2)

— Araga Jnanendra (@JnanendraAraga)
click me!