ಹೈಟೆಕ್‌ ವೇಶ್ಯವಾಟಿಕೆ ದಂಧೆ: ಮೂವರು ಆರೋಪಿಗಳ ಸೆರೆ!

Published : Jul 29, 2020, 07:22 AM ISTUpdated : Jul 29, 2020, 09:48 AM IST
ಹೈಟೆಕ್‌ ವೇಶ್ಯವಾಟಿಕೆ ದಂಧೆ: ಮೂವರು ಆರೋಪಿಗಳ ಸೆರೆ!

ಸಾರಾಂಶ

ಹೈಟೆಕ್‌ ವೇಶ್ಯವಾಟಿಕೆ ದಂಧೆ: ಮೂವರು ಆರೋಪಿಗಳ ಸೆರೆ| ಹೋಟೆಲ್‌ ಮ್ಯಾನೇಜರ್‌ ಸೇರಿ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು 

ಬೆಂಗಳೂರುಜು.29): ಹೋಟೆಲ್‌ನಲ್ಲಿ ಹೈಟೆಕ್‌ ವೇಶ್ಯವಾಟಿಕೆ ದಂಧೆ ನಡೆಸುತ್ತಿದ್ದ ಹೋಟೆಲ್‌ ಮ್ಯಾನೇಜರ್‌ ಸೇರಿ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ದೆಹಲಿ ಮೂಲದ ಗೌರವ್‌ರಾಜ್‌ ಕರದಮ್‌, ಈತನ ಪತ್ನಿ ಹೀನಾ ಸಿಂಗ್‌ ಸೋಲಂಕಿ ಹಾಗೂ ಹೋಟೆಲ್‌ ಮ್ಯಾನೇಜರ್‌ ಅಣ್ಣಪ್ಪ ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸುತ್ತಿದ್ದ ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಒಬ್ಬ ಯುವತಿಯ ದೇಹಕ್ಕೆ ಒಂದು ಸಾವಿರ ರೂ.: ಫಾರ್ಮ್‌ ಹೌಸ್‌ನಲ್ಲಿ ನಡೆಯುತ್ತಿತ್ತು ಕೆಟ್ಟ ದಂಧೆ!

ಬನ್ನೇರುಘಟ್ಟಮುಖ್ಯರಸ್ತೆಯಲ್ಲಿರುವ ಶ್ರೀ ಕಂಪಟ್ಸ್‌ರ್‍ ಹೋಟೆಲ್‌ನಲ್ಲಿ ದಂಧೆ ನಡೆಯುತ್ತಿತ್ತು. ದೆಹಲಿ ಮೂಲದ ಗೌರವ್‌ ದಂಧೆಯ ರೂವಾರಿಯಾಗಿದ್ದ. ಈತನ ಪತ್ನಿ ಯುವತಿಯರನ್ನು ಹುಡುಕಿ ದಂಧೆ ತರುವ ಕೆಲಸ ಮಾಡಿದರೆ, ಈತ ಗ್ರಾಹಕರನ್ನು ಹುಡುಕುತ್ತಿದ್ದ. ಕೆಲ ತಿಂಗಳುಗಳಿಂದ ಓಯಾ ಕಂಪನಿ ಮೂಲಕ ಆರೋಪಿ ಹೋಟೆಲ್‌ನ್ನು ಬುಕ್‌ ಮಾಡಿಕೊಂಡು ದಂಧೆ ನಡೆಸುತ್ತಿದ್ದ. ಇದಕ್ಕೆ ಹೋಟೆಲ್‌ ಮ್ಯಾನೇಜರ್‌ ಸಹಕರಿಸಿದ್ದ. ಹೋಟೆಲ್‌ ಮಾಲೀಕರು ತಲೆಮರೆಸಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ಓಯಾ ಕಂಪನಿಯ ಬೆಂಗಳೂರು ಮೇಲ್ವಿಚಾರಕರಿಗೆ ಮಾಹಿತಿ ನೀಡಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಎಸಿಪಿ ಮುದವಿ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಮುಖ ಆರೋಪಿ ಗೌರವ್‌ ವಿವಿಧ ಆಗಾಗ ಹೆಸರು ಬದಲಾಯಿಸಿಕೊಳ್ಳುತ್ತಿದ್ದ. ವಿವಿಧ ಹೆಸರಿನಲ್ಲಿ ಆತ ಆಧಾರ್‌ ಕಾರ್ಡ್‌ ಹೊಂದಿದ್ದ. ಮತ್ತು ವಿಮಾನದಲ್ಲಿ ಸಂಚಾರ ಮಾಡುತ್ತಿದ್ದ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.

ಆಟೋ ಚಾಲಕನ ಮಗಳು ಗೀತಾ ಸೆಕ್ಸ್‌ ರಾಕೆಟ್ ನಡೆಸುವ ಕ್ವೀನ್ ಆಗಿದ್ದು ಹೇಗೆ?

ಪಿಜಿಗೆ ಹಣ ಕಟ್ಟಲು ದುಡ್ಡು ಇರಲಿಲ್ಲ

ವೇಶ್ಯವಾಟಿಕೆಯಲ್ಲಿ ತೊಡಗಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳಾಗಿದ್ದು, ಉತ್ತರ ಪ್ರದೇಶ ಮತ್ತು ಪಂಜಾಬ್‌ ರಾಜ್ಯದವರಾಗಿದ್ದಾರೆ. ಲಾಕ್‌ಡೌನ್‌ನಿಂದಾಗಿ ಇಬ್ಬರು ವಿದ್ಯಾರ್ಥಿಗಳಿಗೆ ಪಿ.ಜಿ.ಗೆ ಕಟ್ಟಲು ಹಣ ಇರಲಿಲ್ಲ. ಸಂಕಷ್ಟದ ಹಿನ್ನೆಲೆಯಲ್ಲಿ ವೇಶ್ಯವಾಟಿಕೆಯಲ್ಲಿ ತೊಡಗಿದ್ದಾಗಿ ಯುವತಿಯರು ತಿಳಿಸಿದ್ದಾರೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು