ಬಲೆಗೆ ಬಿದ್ದ ಸ್ವಪ್ನ ಸುಂದರಿ, ನಾಲ್ಕು ಗಂಡರ ಕಳ್ಳ ಹೆಂಡತಿ ಕಹಾನಿ!

Published : Jul 28, 2020, 10:46 PM ISTUpdated : Jul 28, 2020, 10:48 PM IST
ಬಲೆಗೆ ಬಿದ್ದ ಸ್ವಪ್ನ ಸುಂದರಿ, ನಾಲ್ಕು ಗಂಡರ ಕಳ್ಳ ಹೆಂಡತಿ ಕಹಾನಿ!

ಸಾರಾಂಶ

ಪೊಲೀಸರ ಬಲಗೆ ಬಿದ್ದ ನಾಲ್ಕು ಜನರ ಹೆಂಡತಿ!/ ಮದುವೆ ಮಾಡಿಕೊಂಡು ಪುರುಷರ ಬ್ಲಾಕ್ ಮೇಲ್ ಮಾಡ್ತಿದ್ದ ಚಾಲಾಕಿ/ ತಿರುಪತಿ ಮಹಿಳೆಯ ಮ್ಯಾಟ್ರಿಮೋನಿ ಕಹಾನಿ/ ವಂಚನೆ ಜಾಲ ಬೀಸುತ್ತಿದ್ದುದ್ದು ಚಮತ್ಕಾರಿ

ತಿರುಪತಿ(ಜು.  28)   ಮದುವೆಯಾಗುತ್ತೇನೆ ಎಂದು ನಂಬಿಸಿ ಪುರುಷರಿಗೆ ಲಕ್ಷಾಂತರ ರೂ. ವಂಚನೆ ಮಾಡುತ್ತಿದ್ದ ಮಹಿಳೆ ಕೊನೆಗೂ ಬಲೆಗೆ ಬಿದ್ದಿದ್ದಾಳೆ.

ಆಂಧ್ರ ಪ್ರದೇಶ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.   ತನ್ನ ಅಂಕಲ್ ಅನ್ನೇ ಮೊದಲು ಮದುವೆಯಾಗಿದ್ದ ಸ್ವಪ್ನ ಆತ ದೈಹಿಕವಾಗಿ ಶಕ್ತಿಯುತವಾಗಿಲ್ಲ ಎಂದು ತೊರೆದು ಬೇರೆ ಪುರುಷರಿಗೆ ಬಲೆ ಬೀಸಿದ್ದಳು.

ನಂತರ ಪ್ರಥ್ವಿರಾಜ್ ಎಂಬಾತನ ಮದುವೆಯಾದ ಸ್ವಪ್ನ ಆತನಿಗೆ ಶಾಕ್ ನೀಡುತ್ತಾಳೆ.  ಸುಖ ದಾಂಪತ್ಯದ ಕನಸು ಕಾಣುತ್ತಿದ್ದವನ ಮೇಲೆ ಪೊಲೀಸ್ ಕಂಪ್ಲೇಂಟ್ ನೀಡುತ್ತಾಳೆ. 25  ಲಕ್ಷ ರೂ. ಗೆ ಈ ಪ್ರಕರಣ ಸೆಟಲ್ ಮೆಂಟ್ ಆಗುತ್ತದೆ.

ಗರ್ಲ್ ಫ್ರೆಂಡ್ ಮಾತು ನಂಬಿ ವಿಡಯೋ ಕಾಲ್ ನಲ್ಲಿ ಬೆತ್ತಲಾಗಿ ಎಲ್ಲ ಕಳ್ಕೊಂಡ

ಇದಾದ ಮೇ ಲೆ ಅತ್ಮಾಕುರ್ ನ ಸುಧಾಕರ್ ಎಂಬಾತನ್ನು ಬಲೆಗೆ ಹಾಕಿಕೊಳ್ಳುತ್ತಾಳೆ.  ಜರ್ಮನಿಯಲ್ಲಿ ಕೆಲಸ ಮಾಡುತ್ತಿದ್ದ ಸುಧಾಕರ್ ನನ್ನು ಮ್ಯಾಟ್ರಿಮೋನಿ ಸೈಟ್ ಮೂಲಕ ಪರಿಚಯ ಮಾಡಿಕೊಳ್ಳುತ್ತಾಳೆ. ಸುಧಾಕರ್ ಗೆ ಕಿರುಕುಳ ನೀಡಲು ಶುರುವಿಟ್ಟುಕೊಂಡು ಮುಕ್ತಿ ಬೇಕೆಂದರೆ  5 ಲಕ್ಷ ರೂ. ನೀಡಬೇಕು ಎಂದು ಕೇಳುತ್ತಾಳೆ.

ಇಲ್ಲಿಂದ ಡೆನ್ಮಾರ್ಕ್ ನಲ್ಲಿ ಕೆಲಸ ಮಾಡುತ್ತಿದ್ದ ರಾಮಲಿಂಗರಾಜು ಬಲೆಗೆ ಬೀಳುತ್ತಾರೆ. ಮದುವೆಯಾದ ಮೇಲೆ ನಾಲ್ಕನೇ ಗಂಡ ರಾಮಲಿಂಗರಾಜುಗೆ ಅನುಮಾನ ಶುರುವಾಗುತ್ತದೆ. ಆಕೆಗೆ ಗೊತ್ತಿಲ್ಲದಂತೆ ರಾಜು ಡೆನ್ಮಾರ್ಕ್ ನಿಂದ ನಾಪತ್ತೆಯಾಗುತ್ತಾನೆ.

ರಾಮಲಿಂಗರಾಜು ಮೇಲೆಯೂ ದೂರು ನೀಡುತ್ತಾಳೆ. ತನಿಖೆ ಮಾಡಿದಾಗ ಮಹಿಳೆಯ ಬಣ್ಣ ಬಯಲಾಗುತ್ತದೆ. ತನ್ನ ಹೆಸರುಗಳನ್ನು, ಪ್ರೋಪೈಲ್ ಗಳನ್ನು ಮೇಲಿಂದ ಮೇಲೆ ಬದಲಾಯಿಸಿಕೊಳ್ಳುವ ಸ್ವಪ್ನ ಯುವಕರನ್ನು ಮದುವೆಯಾಗಿ ಅವರಿಗೆ ಬ್ಲಾಕ್ ಮೇಲೆ ಮಾಡುತ್ತಿದ್ದಳು. 

ಇಂಗ್ಲಿಷ್ ನಲ್ಲಿಯೂ ಓದಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅರವಿಂದ್ ರೆಡ್ಡಿಗೆ ಬೆದರಿಕೆ ಪತ್ರ ಪ್ರಕರಣ, ಸ್ಯಾಂಡಲ್‌ವುಡ್ ನಟಿಯ ಗೆಳೆಯ ವೈಶಾಕ್ ಬಂಧನ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ
ಜೈಲಲ್ಲೇ ವ್ಯಾಲಂಟೈನ್‌ ಡೇ ಆಚರಿಸಲಿರುವ ಅನೈತಿಕ ಪ್ರೇಮಿಗಳು; ಕಮಲಾಕರ್‌, ಸುಚಿತ್ರಾಗೆ ಕೋರ್ಟ್‌ ಶಾಕ್‌!