ಹಿರೇಕೇರೂರು: ಎನ್ಐಎ ದಾಳಿಯಿಂದ ಬೇಸತ್ತು ಪ್ರತೀಕಾರಕ್ಕೆ ಸಜ್ಜಾಗಿದ್ದ ಪಿಎಫ್ಐ ತಾಲೂಕಾಧ್ಯಕ್ಷ ಅರೆಸ್ಟ್

By Girish Goudar  |  First Published Sep 27, 2022, 8:09 PM IST

ಮುಂಜಾಗ್ರತಾ ಕ್ರಮವಾಗಿ ರಬ್ಬಾನಿಯನ್ನು ಬಂಧಿಸಿರುವುದಾಗಿ ತಿಳಿಸಿದ ಪೊಲೀಸ್ ಇಲಾಖೆ 


ವರದಿ- ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾವೇರಿ

ಹಾವೇರಿ(ಸೆ. 27):  ಜಿಲ್ಲೆಯ ಹಿರೇಕೆರೂರು ತಾಲೂಕು ಪಿಎಫ್ಐ ಸಂಘಟನೆಯ ತಾಲೂಕಾಧ್ಯಕ್ಷನನ್ನು ಪೊಲೀಸರು ಇಂದು(ಮಂಗಳವಾರ) ಬಂಧಿಸಿದ್ದಾರೆ. ರಬ್ಬಾನಿ ಲೋಹಾರ (29) ಬಂಧಿತ ಆರೋಪಿಯಾಗಿದ್ದಾನೆ.

Tap to resize

Latest Videos

undefined

ಮುಂಜಾಗ್ರತಾ ಕ್ರಮವಾಗಿ ರಬ್ಬಾನಿಯನ್ನು ಬಂಧಿಸಿರುವುದಾಗಿ ಪೊಲೀಸ್ ಇಲಾಖೆ ತಿಳಿಸಿದೆ. ಪಟ್ಟಣದ ಬಸವೇಶ್ವರ ನಗರದ ಮೂರನೇ ಕ್ರಾಸ್​ನಲ್ಲಿರೋ ನಿವಾಸದಲ್ಲಿದ್ದ ವೇಳೆ ಅವರನ್ನು ಅರೆಸ್ಟ್ ಮಾಡಲಾಗಿದೆ. ಅರೆಸ್ಟ್ ಮಾಡಿ ತಾಲೂಕು ದಂಡಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರು ಪಡಿಸಲಾಗಿದೆ.

ಎನ್‌ಐಎ ದಾಳಿ ಪ್ರತಿಕಾರಕ್ಕೆ ಸಂಚು, ತುಮಕೂರು ಪಿಎಫ್‌ಐ ಜಿಲ್ಲಾಧ್ಯಕ್ಷನ ಬಂಧನ

ಇತ್ತೀಚೆಗೆ ಎನ್ಐಎಯಿಂದ ಪಿಎಫ್ಐ ಮುಖಂಡರ ಮೇಲೆ ನಿರಂತರವಾಗಿ ದಾಳಿ ನಡೆದ ಕಾರಣ ಬೇಸತ್ತಿದ್ದ ರಬ್ಬಾನಿ ಪ್ರತೀಕಾರಕ್ಕೆ ಸಜ್ಜಾಗಿದ್ದ. ಸಮಾಜದಲ್ಲಿ ಶಾಂತಿ ಕದಡಲು ಸಂಚು ರೂಪಿಸಿದ್ದ. ಹೀಗಾಗಿ ಮುಂಜಾಗೃತಾ ಕ್ರಮವಾಗಿ ಅರೆಸ್ಟ್ ಮಾಡಿರುವುದಾಗಿ ಪೊಲೀಸ್ ಇಲಾಖೆ ತಿಳಿಸಿದೆ.
 

click me!