ದರ್ಶನ್​ ಮನವಿ ಪುರಸ್ಕರಿಸಿದ ಹೈಕೋರ್ಟ್​: ನಟನಿಗೆ ತಾತ್ಕಾಲಿಕ ಬಿಗ್​ ರಿಲೀಫ್​- ನ್ಯಾಯಾಲಯ​ ಹೇಳಿದ್ದೇನು

Published : Sep 18, 2026, 07:25 PM IST
Darshan

ಸಾರಾಂಶ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರಿಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಸಾಕ್ಷಿಗಳ ಪಾಟಿ ಸವಾಲಿನ ವೇಳೆ ನ್ಯಾಯಾಲಯಕ್ಕೆ ಖುದ್ದು ಹಾಜರಾಗಲು ದರ್ಶನ್ ಸಲ್ಲಿಸಿದ್ದ ಮೇಲ್ಮನವಿಯನ್ನು ಕೋರ್ಟ್ ಪುರಸ್ಕರಿಸಿದೆ. ಸೂಕ್ತ ಭದ್ರತೆಯೊಂದಿಗೆ ಅವರನ್ನು ಕರೆತರಲು ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ.

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ವಿಚಾರಣೆಗೆ ಸಂಬಂಧಿಸಿದಂತೆ ನಟ ದರ್ಶನ್​ ಅವರಿಗೆ ಸದ್ಯ ಗುಡ್​ನ್ಯೂಸ್​ ಸಿಕ್ಕಿದೆ. ತಾತ್ಕಾಲಿಕವಾಗಿ ಅವರಿಗೆ ರಿಲೀಫ್​ ಸಿಕ್ಕಿದೆ. ಇವರ ಮನವಿಯನ್ನು ಹೈಕೋರ್ಟ್​ ಪುರಸ್ಕರಿಸಿದೆ. ಅದೇನೆಂದರೆ, ಈ ಕೇಸ್​​ನ ವಿಚಾರಣೆಯ ಸಮಯದಲ್ಲಿ ದೈಹಿಕವಾಗಿ ತಮ್ಮನ್ನು ಹಾಜರುಪಡಿಸುವಂತೆ ಮಾಡಿದ್ದ ಮನವಿಯನ್ನು ಹೈಕೋರ್ಟ್​ ಪುರಸ್ಕರಿಸಿದೆ. ಈ ಕೋರಿಕೆಯನ್ನು ವಿಚಾರಣಾ ನ್ಯಾಯಾಲಯ ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ದರ್ಶನ್​ ಅವರು, ಪತ್ನಿ ವಿಜಯಲಕ್ಷ್ಮಿ ಮೂಲಕ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು, ಈ ಅನುಮತಿಯನ್ನು ನೀಡಿದೆ.

ಈ ಹಿನ್ನೆಲೆಯಲ್ಲಿ, ಪ್ರಕರಣದ ಪ್ರಮುಖ ಸಾಕ್ಷಿಗಳ ವಿಚಾರಣೆ ವೇಳೆ ಕೋರ್ಟ್​ಗೆ ದರ್ಶನ್​ ಅವರು ಇನ್ನುಮುಂದೆ ಖುದ್ದು ಹಾಜರಾಗಬಹುದಾಗಿದೆ. ಇಲ್ಲಿಯವರೆಗೆ ಅವರು ವಿಡಿಯೋ ಕಾನ್​ಫರೆನ್ಸ್​ ಮೂಲಕ ಹಾಜರಾಗುತ್ತಿದ್ದರು. ಆದರೆ, ಸಾಕ್ಷಿಗಳ ಪಾಟಿ ಸವಾಲಿನ ವೇಳೆ ತಮ್ಮ ವಕೀಲರೊಂದಿಗೆ ಸಮಾಲೋಚನೆ ನಡೆಸಲು ಹಾಗೂ ಸಾಕ್ಷಿಗಳನ್ನು ಮುಖಾಮುಖಿ ವೀಕ್ಷಿಸಲು ತಮಗೆ ಖುದ್ದು ಹಾಜರಾತಿಗೆ ಅವಕಾಶ ನೀಡಬೇಕೆಂದು ದರ್ಶನ್ ಕೋರಿದ್ದರು. ಅದನ್ನು ಕೋರ್ಟ್​ ಈಗ ಮಾನ್ಯ ಮಾಡಿದೆ. ಈ ಮೂಲಕ, ಪ್ರಕರಣದ 7 ಪ್ರಮುಖ ಸಾಕ್ಷಿಗಳ ಮುಖ್ಯ ವಿಚಾರಣೆ ಮುಕ್ತಾಯಗೊಂಡ ನಂತರ, ಅವರ 'ಪಾಟಿ ಸವಾಲು' ನಡೆಸುವ ಸಮಯದಲ್ಲಿ ನಟ ದರ್ಶನ್ ಖುದ್ದು ಹಾಜರಿರಲು ಹೈಕೋರ್ಟ್ ಅನುಮತಿ ನೀಡಿದೆ.

ಹೈಕೋರ್ಟ್​ ಹೇಳಿದ್ದೇನು?

ವಿಚಾರಣೆ ವೇಳೆ ಪೀಠವು ಸಿಆರ್‌ಪಿಸಿ ನಿಯಮಗಳನ್ನು ಉಲ್ಲೇಖಿಸಿದೆ. "ಸಿಆರ್‌ಪಿಸಿ ಕಾಯ್ದೆಯ ಪ್ರಕಾರ ವಿಚಾರಣೆ ವೇಳೆ ಆರೋಪಿಯನ್ನು ಖುದ್ದು ನ್ಯಾಯಾಲಯಕ್ಕೆ ಕರೆತರಲು ಅವಕಾಶವಿದೆ. ದರ್ಶನ್ ಸದ್ಯಕ್ಕೆ ಕೇವಲ ಆರೋಪಿಯಷ್ಟೇ. ಅವರು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ, ಇದರ ಅರ್ಥ ಅವರು ನ್ಯಾಯಾಲಯದ ವಶದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ, ಆರೋಪಿಯ ರಕ್ಷಣೆ ಮಾಡುವುದು ನ್ಯಾಯಾಲಯದ ಕರ್ತವ್ಯ ಮತ್ತು ಹೊಣೆಯಾಗಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.

ಪ್ರತ್ಯೇಕ ದಿನಾಂಕ ನಿಗದಿ

ಪ್ರಕರಣದ ವಿಚಾರಣೆ ನಡೆಸುತ್ತಿರುವ ಸೆಷನ್ಸ್ ಕೋರ್ಟ್​, ಏಳು ಪ್ರಮುಖ ಸಾಕ್ಷಿಗಳ ಮುಖ್ಯ ವಿಚಾರಣೆಯ ನಂತರ, ಪಾಟಿ ಸವಾಲು ನಡೆಸುವುದಕ್ಕಾಗಿ ಪ್ರತ್ಯೇಕ ದಿನಾಂಕಗಳನ್ನು ನಿಗದಿಪಡಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ. ನಿಗದಿತ ದಿನಾಂಕಗಳಂದು ಪಾಟಿ ಸವಾಲು ನಡೆಸುವ ವೇಳೆ ರಾಜ್ಯ ಸರ್ಕಾರವು ಅತ್ಯುನ್ನತ ಮತ್ತು ಸೂಕ್ತ ಪೊಲೀಸ್ ಭದ್ರತೆಯನ್ನು ಒದಗಿಸಬೇಕು. ಭದ್ರತೆಯೊಂದಿಗೆ ದರ್ಶನ್ ಸೇರಿದಂತೆ ನ್ಯಾಯಾಲಯದ ಅನುಮತಿ ಕೋರುವ ಇತರ ಆರೋಪಿಗಳನ್ನು ಸತ್ರ ನ್ಯಾಯಾಲಯಕ್ಕೆ ಸುರಕ್ಷಿತವಾಗಿ ಕರೆತರಬೇಕು ಎಂದು ಸರ್ಕಾರಕ್ಕೆ ನ್ಯಾಯಮೂರ್ತಿಗಳು ನಿರ್ದೇಶನ ನೀಡಿದ್ದಾರೆ.

ಸಾಕ್ಷಿಗಳ ಪಾಟಿ ಸವಾಲು ಮತ್ತು ನಟ ದರ್ಶನ್ ಅವರ ಹಾಜರಾತಿ ವೇಳೆ ನ್ಯಾಯಾಲಯದ ಆವರಣದಲ್ಲಿ ನೂಕುನುಗ್ಗಲು ಅಥವಾ ಭದ್ರತಾ ಲೋಪ ಉಂಟಾಗುವ ಸಾಧ್ಯತೆಗಳಿದ್ದರೆ, ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯಬಿದ್ದರೆ 'ಗೌಪ್ಯ ವಿಚಾರಣೆ' (ಇನ್-ಕ್ಯಾಮೆರಾ ಪ್ರೊಸೀಡಿಂಗ್ಸ್) ನಡೆಸಬಹುದು ಎಂದು ಸೆಷನ್ಸ್​ ಕೋರ್ಟ್​ಗೆ ಹೈಕೋರ್ಟ್ ಅವಕಾಶ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Bengaluru: ಪತ್ನಿಗೆ ಆಸಿಡ್‌ ಹಾಕಿ ಮಚ್ಚಿನಿಂದ ಮನಬಂದಂತೆ ಕೊಚ್ಚಿದ ಪತಿ; ಬೆಂಗಳೂರಿನಲ್ಲಿ ಭೀಕರ ಘಟನೆ
ಖ್ಯಾತ ಟ್ಯಾಟೂ ಆರ್ಟಿಸ್ಟ್‌ ಘೋಸ್ಟ್ ಅರ್ಜುನ್ ಮೇಲೆ ಪ್ರೇಯಸಿಯಿಂದಲೇ ಭೀಕರ ಹಲ್ಲೆ! ಅಸಲಿಯತ್ತೇನು?