ಪತಿಯ ಕುಡಿತ ಬಿಡಿಸಲು ಮಂತ್ರವಾದಿಯ ಮೊರೆ ಹೋದ ಪತ್ನಿ; ತಂತ್ರದ ಹೆಸರಲ್ಲಿ 10 ತಿಂಗಳು ನಡೆದದ್ದು ಮಾತ್ರ ಬೇರೆ!

Published : Sep 10, 2026, 04:00 PM IST
black magic

ಸಾರಾಂಶ

Crime News: ಗ್ವಾಲಿಯರ್‌ನಲ್ಲಿ, ತನ್ನ ಪತಿಗೆ ಕುಡಿತ ಬಿಡಿಸಲು ಮಂತ್ರವಾದಿಯ ಸಹಾಯ ಪಡೆದ ಮಹಿಳೆಗೆ, ಈ ಮಾಟ ಮಂತ್ರ ದುಬಾರಿಯಾಗಿ ಪರಿಣಮಿಸಿತು. ತಾಂತ್ರಿಕ ಮಹಿಳೆಗೆ ಮಾದಕ ದ್ರವ್ಯ ಬೆರೆಸಿದ ಲಡ್ಡುಗಳನ್ನು ನೀಡಿ, ನಂತರ 10 ತಿಂಗಳ ಕಾಲ ಬೆದರಿಕೆ ಹಾಕಿ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ನಡೆದಿದೆ.

ಗ್ವಾಲಿಯರ್‌: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಪತಿಯ ಮದ್ಯದ ಚಟ ಬಿಡಿಸಲು ತಾಂತ್ರಿಕನ ಮೊರೆ ಹೋದ ವಿವಾಹಿತ ಮಹಿಳೆಯೊಬ್ಬರಿಗೆ ಆಘಾತಕಾರಿ ಅನುಭವವಾಗಿದೆ. ತಂತ್ರ-ಮಂತ್ರದ ಮೂಲಕ ಪತಿಯ ಕುಡಿತದ ಚಟ ಬಿಡಿಸುವುದಾಗಿ ನಂಬಿಸಿದ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೆ, ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಆಕೆಯನ್ನು ಕೆಟ್ಟದಾಗಿ ಬಿಂಬಿಸುವುದಾಗಿ ಹಾಗೂ ಪತಿಯನ್ನು ಕೊಲೆ ಮಾಡುವುದಾಗಿ ಬೆದರಿಸಿ ಸುಮಾರು 10 ತಿಂಗಳ ಕಾಲ ಶೋಷಿಸಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ದೇವಸ್ಥಾನದಲ್ಲಿ ಪರಿಚಯ

ಈ ಘಟನೆ ಗ್ವಾಲಿಯರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸುಮಾರು ಒಂದು ವರ್ಷದ ಹಿಂದೆ ಪತಿಯ ಮದ್ಯದ ಚಟ ಬಿಡಿಸುವ ಉದ್ದೇಶದಿಂದ ಮಹಿಳೆ ದೇವಸ್ಥಾನಕ್ಕೆ ತೆರಳಿದ್ದಳು. ಅಲ್ಲಿಗೆ ಬಂದಿದ್ದ ಕಮಲ್ ರಾಥೋರ್ ಅಲಿಯಾಸ್ ಪಟೇಲ್ ಎಂಬಾತ ತನ್ನನ್ನು ತಾಂತ್ರಿಕ ಎಂದು ಪರಿಚಯಿಸಿಕೊಂಡಿದ್ದಾನೆ. ಪತಿಯ ಮದ್ಯದ ಚಟ ಬಿಡಿಸುವುದಾಗಿ ಹೇಳಿ ಮಹಿಳೆಗೆ ಹಲವು ಬಾರಿ ಭಸ್ಮ ನೀಡಿದ್ದಾನೆ. ಈ ಮೂಲಕ ಆಕೆಯೊಂದಿಗೆ ಪರಿಚಯ ಬೆಳೆಸಿಕೊಂಡು, ಬಳಿಕ ಮಹಿಳೆಯ ಮನೆಗೂ ಆಗಾಗ್ಗೆ ಭೇಟಿ ನೀಡಿದ್ದಾನೆ.

ಪ್ರಸಾದದ ಲಡ್ಡು ನೀಡಿ ಕೃತ್ಯ ಎಸಗಿದ ಆರೋಪ

ಮಹಿಳೆಯ ದೂರಿನ ಪ್ರಕಾರ, 2025ರ ಅಕ್ಟೋಬರ್‌ನಲ್ಲಿ ಆರೋಪಿ ಮಧ್ಯಾಹ್ನದ ವೇಳೆ ಆಕೆಯ ಮನೆಗೆ ಬಂದಿದ್ದಾನೆ. ತಂತ್ರ-ಮಂತ್ರ ಮಾಡಿರುವುದಾಗಿ ಹೇಳಿ ಪ್ರಸಾದದ ರೂಪದಲ್ಲಿ ಲಡ್ಡು ನೀಡಿದ್ದಾನೆ. ಲಡ್ಡು ತಿಂದ ಬಳಿಕ ಮಹಿಳೆ ಪ್ರಜ್ಞೆ ಕಳೆದುಕೊಂಡಿದ್ದು, ಇದೇ ಸಂದರ್ಭದಲ್ಲಿ ಆರೋಪಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಘಟನೆಯ ಬಳಿಕ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಸಮಾಜದಲ್ಲಿ ಕೆಟ್ಟದಾಗಿ ಬಿಂಬಿಸುವುದಾಗಿ ಹಾಗೂ ಪತಿಯನ್ನು ಕೊಲೆ ಮಾಡುವುದಾಗಿ ಆರೋಪಿ ಬೆದರಿಸಿದ್ದಾನೆ. ಈ ಬೆದರಿಕೆಯಿಂದಾಗಿ ಮಹಿಳೆ ಭಯಗೊಂಡು ಘಟನೆಯ ಬಗ್ಗೆ ಯಾರಿಗೂ ಹೇಳದೆ ಮೌನವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

10 ತಿಂಗಳ ಕಾಲ ಶೋಷಣೆ

ಮಹಿಳೆಯ ಮೌನದ ಲಾಭ ಪಡೆದ ಆರೋಪಿ ನಿರಂತರವಾಗಿ ಆಕೆಯನ್ನು ಶೋಷಿಸುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕೊನೆಯದಾಗಿ 2026ರ ಆಗಸ್ಟ್ 8ರಂದು ಆರೋಪಿ ತನ್ನ ಮೇಲೆ ದೌರ್ಜನ್ಯ ಎಸಗಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ. ಕೊನೆಗೆ ನಿರಂತರ ಕಿರುಕುಳದಿಂದ ಬೇಸತ್ತ ಮಹಿಳೆ ಸೆಪ್ಟೆಂಬರ್ 6ರಂದು ಧೈರ್ಯ ಮಾಡಿ ತನ್ನ ಆಪ್ತ ಸ್ನೇಹಿತೆ ಹಾಗೂ ಪತಿಗೆ ನಡೆದಿರುವ ಸಂಪೂರ್ಣ ವಿಚಾರವನ್ನು ತಿಳಿಸಿದ್ದಾರೆ. ಬಳಿಕ ಅವರೊಂದಿಗೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. CSP ಕೃಷ್ಣ ಪಾಲ್ ಸಿಂಗ್ ಅವರ ಪ್ರಕಾರ, ಪೊಲೀಸರು ಕಮಲ್ ರಾಥೋರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Shivamogga: ಶಿಕಾರಿಪುರದ ಪ್ರಸಿದ್ಧ ಹುಚ್ಚರಾಯಸ್ವಾಮಿ ಕೆರೆಗೆ ಹಾರಿದ BCA ವಿದ್ಯಾರ್ಥಿನಿ
Vijayapura: 12 ವರ್ಷಗಳ ಬಳಿಕ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಖೈದಿ ಅರೆಸ್ಟ್; ಕ್ರೈಂ ಥ್ರಿಲ್ಲರ್ ಮೂವಿ ಮೀರಿಸುವ ಕೇಸ್ ಇದು!