ಲೋಕಾಯುಕ್ತ ದಾಳಿಯ ಬೆನ್ನಲ್ಲೇ ಅಜ್ಞಾತ ಸ್ಥಳಕ್ಕೆ ತೆರಳಿದ್ದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್‌ಡಿಎಲ್) ಅಧ್ಯಕ್ಷ ಶಾಸಕ ಮಾಡಾಳ್ ವಿರುಪಾಕ್ಷಪ್ಪ, ಇಂದು ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಸಿಕ್ಕ ಬೆನ್ನಲ್ಲೇ ಚೆನ್ನಗಿರಿ ಮನೆಯಲ್ಲಿ ಪ್ರತ್ಯಕ್ಷವಾಗಿದ್ದಾರೆ.
ದಾವಣಗೆರೆ (ಮಾ.07): ಕಳೆದ ಆರು ದಿನಗಳ ಹಿಂದೆ ಲೋಕಾಯುಕ್ತ ದಾಳಿಯ ಬೆನ್ನಲ್ಲೇ ಅಜ್ಞಾತ ಸ್ಥಳಕ್ಕೆ ತೆರಳಿದ್ದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್‌ಡಿಎಲ್) ಅಧ್ಯಕ್ಷ ಶಾಸಕ ಮಾಡಾಳ್ ವಿರುಪಾಕ್ಷಪ್ಪ, ಇಂದು ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಸಿಕ್ಕ ಬೆನ್ನಲ್ಲೇ ಚೆನ್ನಗಿರಿ ಮನೆಯಲ್ಲಿ ಪ್ರತ್ಯಕ್ಷವಾಗಿದ್ದಾರೆ.
ಮಾ.2ರ ಗುರುವಾರ ಸಂಜೆಯ ವೇಳೆ ಖಾಸಗಿ ಕಂಪನಿಯೊಂದರ ಸಿಬ್ಬಂದಿಯಿಂದ ಹಣವನ್ನು ಪಡೆಯುವಾಗ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರ ಪುತ್ರ ಲಂಚ ಪಡೆಯುವ ಹಣದ ಸಮೇತ ಲೋಕಾಯುಕ್ತರ ದಾಳಿಗೆ ಸಿಕ್ಕಿಬಿದ್ದಿದ್ದರು. ಈ ಲಂಚ ಪ್ರಕರಣದ ಸಂಬಂಧ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ (Virupakshappa madalu) ಬಂಧನಕ್ಕೆ ಲೋಕಾಯುಕ್ತ ಪೊಲೀಸರು ಶೋಧ ಮುಂದುವರಿಸಿದ್ದರು. ದಾವಣಗೆರೆ ಮತ್ತು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧಡೆ ಶೋಧ ಕಾರ್ಯ ನಡೆಸಿದ್ದರು. ಕೆಎಸ್‌ಡಿಎಲ್‌ಗೆ ರಾಸಾಯನಿಕ ಕಚ್ಚಾವಸ್ತು ಪೂರೈಕೆ ಕಾರ್ಯಾದೇಶ ನೀಡಲು 81 ಲಕ್ಷ ರೂ. ಲಂಚದ ಬೇಡಿಕೆಯನ್ನು ಕೆಎಸ್‌ಡಿಎಲ್ ಅಧ್ಯಕ್ಷರಾಗಿದ್ದ ವೇಳೆ ಮಾಡಾಳು ಇಟ್ಟಿದ್ದರು. ಅವರ ಪರವಾಗಿ ಮಗ ಪ್ರಶಾಂತ್ 40 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದರು. ಪ್ರಕರಣದಲ್ಲಿ ಶಾಸಕರೇ ಆರೋಪಿ ನಂ.1. ಹೀಗಾಗಿ ಅವರ ಬಂಧನಕ್ಕೆ ಶೋಧ ನಡೆದಿತ್ತು. ಆದರೆ, ಇಂದು ಮಧ್ಯಂತರ ನಿರೀಕ್ಷಣಾ ಜಾಮೀನು ಲಭ್ಯವಾಗಿರುವುದರಿಂದ ಇಂದು ಮನೆಗೆಬರಲು ಮುಂದಾಗಿದ್ದಾರೆ.
ಶಾಸಕ ಮಾಡಾಳು ವಿರುಪಾಕ್ಷಪ್ಪಗೆ ಬಿಗ್ ರಿಲೀಫ್: ಜಾಮೀನು ಮಂಜೂರು ಮಾಡಿದ ಕೋರ್ಟ್
ಘಟನೆ ವಿವರವೇನು: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಚೀಫ್ ಅಕೌಂಟೆಂಟ್ ಪ್ರಶಾಂತ್ ಮಾಡಾಳ್ ಲಂಚ ಸಮೇತ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಪ್ರಶಾಂತ್ ಕಚೇರಿ ಮೇಲೆ ನಡೆಸಿದ ಲೋಕಾಯುಕ್ತ ದಾಳಿ ಅಂತ್ಯವಾಗಿತ್ತು. ಗುರುವಾರ ಸಂಜೆ 6-30 ಕ್ಕೆ ಲೋಕಾಯುಕ್ತ ದಾಳಿ ನಡೆದಿತ್ತು, ಶುಕ್ರವಾರ ಬೆಳಗಿನ ಜಾವ 4 ಗಂಟೆಗೆ ಪರಿಶೀಲನೆ ಅಂತ್ಯವಾಗಿತ್ತು. ಶಾಸಕರ ಪುತ್ರ ಪ್ರಶಾಂತ್ ಮಾಡಾಳ್, ಸಿದ್ದೇಶ್, (ಸಂಬಂಧಿ), ಸುರೇಂದ್ರ (ಅಕೌಂಟೆಂಟ್), ನಿಕೋಲಸ್ (ದುಡ್ಡು ಕೊಡಲು ಬಂದವನು) ಹಾಗೂ ಗಂಗಾಧರ್(ದುಡ್ಡು ಕೊಡಲು ಬಂದವನು) ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಎಂ ಸ್ಟುಡಿಯೋದಲ್ಲಿರುವ ದಾಖಲಾತಿಗಳು, ನಗದನ್ನ ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆದರೆ, ಮಾಡಾಳ್ ವಿರುಪಾಕ್ಷಪ್ಪ ಮಾತ್ರ ಸಿಕ್ಕಿರಲಿಲ್ಲ.
ಶೋಧ ಕಾರ್ಯಕ್ಕೆ ಇಂದು ಮುಕ್ತಿ ನೀಡಿದ್ದ ಕೋರ್ಟ್: ಲಂಚ ಪ್ರಕರಣದ ಸಂಬಂಧ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಬಂಧನಕ್ಕೆ ಲೋಕಾಯುಕ್ತ ಪೊಲೀಸರು ಶೋಧ ಮುಂದುವರಿಸಿದ್ದರು. ದಾವಣಗೆರೆ ಮತ್ತು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧಡೆ ಶೋಧ ಕಾರ್ಯ ನಡೆದಿದೆ ಎನ್ನಲಾಗಿದೆ. ಕೆಎಸ್‌ಡಿಎಲ್‌ಗೆ ರಾಸಾಯನಿಕ ಕಚ್ಚಾವಸ್ತು ಪೂರೈಕೆ ಕಾರ್ಯಾದೇಶ ನೀಡಲು 81 ಲಕ್ಷ ರೂ. ಲಂಚದ ಬೇಡಿಕೆಯನ್ನು ಕೆಎಸ್‌ಡಿಎಲ್ ಅಧ್ಯಕ್ಷರಾಗಿದ್ದ ವೇಳೆ ಮಾಡಾಳು ಇಟ್ಟಿದ್ದರು. ಅವರ ಪರವಾಗಿ ಮಗ ಪ್ರಶಾಂತ್ 40 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದರು. ಪ್ರಕರಣದಲ್ಲಿ ಶಾಸಕರೇ ಆರೋಪಿ ನಂ.1. ಹೀಗಾಗಿ ಅವರ ಬಂಧನಕ್ಕೆ ಶೋಧ ನಡೆದಿತ್ತು. ಆದರೆ, ಇಂದು ಜಾಮೀನು ಮಂಜೂರು ಮಾಡುವ ಮೂಲಕ ಶೋಧ ಕಾರ್ಯಕ್ಕೆ ಮುಕ್ತಿ ನೀಡಲಾಗಿದೆ.
ಪಕ್ಷದಿಂದ ಉಚ್ಛಾಟನೆ ತಡೆಯಲು ಚಿಂತನೆ: ಕೆಎಸ್‌ಡಿಎಲ್ ಅಧ್ಯಕ್ಷರಾಗಿದ್ದ ವಿರೂಪಾಕ್ಷಪ್ಪ ಪರವಾಗಿ ಅವರ ಪುತ್ರ ಪ್ರಶಾಂತ್ ಮಾಡಾಳು 40 ಲಕ್ಷ ರು. ಲಂಚ ಪಡೆಯುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ. ಪ್ರಕರಣದಲ್ಲಿ ವಿರೂಪಾಕ್ಷಪ್ಪ ಮೊದಲನೇ ಆರೋಪಿಯಾಗಿದ್ದಾರೆ. ಪ್ರತಿಪಕ್ಷ ಕಾಂಗ್ರೆಸ್, ಜೆಡಿಎಸ್‌ಗೆ ಈ ಪ್ರಕರಣವು ಅಸ್ತ್ರವಾಗಿದ್ದು, ಪಕ್ಷದ ವರ್ಚಸ್ಸಿಗೂ ಧಕ್ಕೆಯಾಗಿದೆ. ಇದು ವಿಧಾನಸಭಾ ಚುನಾವಣೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ವಿರೂಪಾಕ್ಷಪ್ಪ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡುವ ಬಗ್ಗೆ ಬಿಜೆಪಿಯೊಳಗೆ ತಯಾರಿಗಳು ನಡೆದಿವೆ ಎಂದು ಮೂಲಗಳು ಹೇಳಿವೆ. ಆದರೆ, ಈಗ ಮನೆಗೆ ವಾಪಾಸ್ ಆಗಿದ್ದು, ಕೋರ್ಟ್‌ನಲ್ಲಿ ಶಾಸಕರ ಪರ ವಕೀಲರ ವಾದವನ್ನು ಕೇಳಿದರೆ ಈ ಪ್ರಕರಣದಿಂದ ಮುಕ್ತಿ ಹೊಂದುವ ಸಾಧ್ಯತೆ ಕಂಡುಬರುತ್ತಿದೆ. ಇದೇ ನೆಪವನ್ನು ಇಟ್ಟುಕೊಂಡು ಪುನಃ ಬಿಜೆಪಿಯಿಂದ ಉಚ್ಛಾಟನೆ ಮಾಡದಂತೆ ತಡೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಮರ್ಯಾದೆಗೆ ಅಂಜಿದ ಬಿಜೆಪಿ: ಶಾಸಕ ಮಾಡಾಳು ವಿರುಪಾಕ್ಷಪ್ಪ ಪಕ್ಷದಿಂದ ಉಚ್ಛಾಟನೆ..!
8 ಗಂಟೆಗಳಲ್ಲಿ ವಿಚಾರಣೆಗೆ ಹಾಜರಾಗಲು ಸೂಚನೆ: ಇನ್ನು ಶಾಸಕ ಮಾಡಾಳ್ ವಿರುಪಾಕ್ಷಪ್ಪ ಕಚೇರಿಯ ಮೇಲೆ ಲೋಕಾಯುಕ್ತ ದಾಳಿಯ ಕುರಿತು ಹೈಕೋರ್ಟ್‌ನ ಏಕಸದಸ್ಯ ಪೀಠದಲ್ಲಿ ಇಂದು ವಿಚಾರಣೆ ನಡೆದಿದೆ. ಈ ವೇಳೆ ಶಾಸಕರ ಪರ ವಾದ ಮಂಡಿಸಿದ್ದ ವಕೀಲರು ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿ, ಅದನ್ನು ಪಡೆಯಲು ಯಶಸ್ವಿ ಆಗಿದ್ದಾರೆ. ಇನ್ನು 5 ಲಕ್ಷ ರೂ. ಹಣ ಹಾಗೂ ಇಬ್ಬರನ್ನು ಶೂರಿಟಿ ಇಟ್ಟು ಜಾಮೀನು ಪಡೆದುಕೊಳ್ಳಲು ಅನುಮತಿ ನೀಡಿತ್ತು. ಮತ್ತೊಂದೆಡೆ ಲೋಕಾಯುಕ್ತ ಇಲಾಖೆಯಿಂದ ಸೂಕ್ತ ಆಕ್ಷೇಪಣೆ ಸಲ್ಲಿಸಲು ನೊಟೀಸ್ ಜಾರಿಗೊಳಿಸಿದೆ.