ಓರ್ವ ವಿದ್ಯಾರ್ಥಿಯಿಂದ ಆ್ಯಸಿಡ್ ನಾಗ ಪತ್ತೆ, ಇಲ್ಲಿದೆ ಬಂಧನದ ರೋಚಕ ಘಟನೆ

By Suvarna News  |  First Published May 14, 2022, 5:24 PM IST

* ಆ್ಯಸಿಡ್ ಅಟ್ಯಾಕ್ ಕೇಸ್ ನಲ್ಲಿ  ಆರೋಪಿ ನಾಗೇಶ್ ಅರೆಸ್ಟ್
* ಸೂಸೈಡ್ ಗೆ ನಿರ್ಧರಿಸಿದ್ದನಂತೆ ಸೈಕೋ ನಾಗ
* ಕಾಲಿಗೆ ಗುಂಡು ಹಾರಿಸಿ ಖಾಕಿ ಬಂಧನ


ಕಿರಣ್.ಕೆ.ಎನ್. ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರು, (ಮೇ.14):
ಬೆಂಗಳೂರಿನಲ್ಲಿ ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ ಭಾರೀ ಸಂಚಲನ ಮೂಡಿಸಿತ್ತು. ಆರೋಪಿ ಸೈಕೋ ನಾಗೇಶ್ ಪತ್ತೆಗಾಗಿ ಪೊಲೀಸರು ಹುಡುಕಾಡ ಜಾಗವೇ ಇರಲಿಲ್ಲ.. ಕೊನೆಗೆ 16 ದಿನಗಳ ಬಳಿಕ ಆರೋಪಿ ಆಸಿಡ್ ನಾಗ ಸೆರೆ ಸಿಕ್ಕಿದ್ದ..ಏನು ಕ್ಲೂ ಇಲ್ಲದೇ ತಮಿಳುನಾಡಿನ ತಿರುಣಾಮಲೈನ ರಮಣಶ್ರೀ ಆಶ್ರಮದಲ್ಲಿ ಅಡಗಿ ಕುಳಿತಿದ್ದವನನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ..ಆದ್ರೂ ತಲೆ ಹರಟೆ ಮಾಡಿ ಪರಾರಿಯಾಗಲ್ಲೂ ಹೋಗಿ ಪೊಲೀಸರ ಗುಂಡೇಟು ತಿಂದಿದ್ದಾನೆ.

ಇಡೀ ರಾಜ್ಯವನ್ನೇ ಬೆಚ್ಚಿ ಬಿಳಿಸಿದ್ದ ಆ್ಯಸಿಡ್ ಅಟ್ಯಾಕ್ ಕೇಸ್ ಆರೋಪಿ ಸೈಕೋ ನಾಗೇಶ್ ಕೊನೆಗೂ 16 ದಿನಗಳ ಬಳಿಕ ತಮಿಳುನಾಡಿನ ತಿರುಣಾಮಲೈ ರಮಣಶ್ರೀ ಆಶ್ರಮದಲ್ಲಿ ಬಂಧಿಸಲಾಗಿದೆ..ಬಂಧಿಸಿ ಕರೆತರುವಾಗಲ್ಲೂ ಆರೋಪಿ ನಾಗೇಶ್ ಎಸ್ಕೇಪ್ ಆಗೋದಕ್ಕೆ ಹೋದಾಗ ಕಾಲಿಗೆ ಗುಂಡು ಹಾರಿಸಿ ಕೆಂಗೇರಿ ಬಳಿ  ಬಂಧಿಸಲಾಗಿದೆ...

Tap to resize

Latest Videos

ಬೆಂಗಳೂರು ಯುವತಿಯ ಮೇಲೆ ಆಸಿಡ್‌ ಎರಚಿದ್ದ ಪ್ರಕರಣ: ಆರೋಪಿ ನಾಗೇಶ್‌ ಬಂಧನ

ಇಂದು(ಶನಿವಾರ) ಬೆಂಗಳೂರಿನಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಆರೋಪಿ ನಾಗೇಶ್ ಬಂಧನ ಕುರಿತು ಮಾಹಿತಿ ನೀಡಿದ್ರು..ಯಾವುದೇ ಕ್ಲೂ ಇಲ್ಲದಿದ್ರೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ  ಎಂದು ಹೇಳಿದ್ರು.

ಕಳೆದ ಏಪ್ರಿಲ್ 28 ರಂದು ನಗರದ ಸುಂಕದಕಟ್ಟೆಯ ಮುಖ್ಯರಸ್ತೆಯ ಮೂತ್ತೂಟ್ ಫೈನಾನ್ಸ್ ಕಚೇರಿ ಮುಂದೆಯೇ ಸಂತ್ರಸ್ತ ಯುವತಿ ಮದುವೆಯಾಗಲ್ಲೂ ಒಪ್ಪಲಿಲ್ಲ ಎಂಬ ಕಾರಣಕ್ಕೆ ಆರೋಪಿ ನಾಗೇಶ್ ಆ್ಯಸಿಡ್ ಹಾಕಿ ಪರಾರಿಯಾಗಿದ್ದ..ಯುವತಿಯನ್ನು 7 ವರ್ಷದಿಂದ ನೋಡ್ತಿದ್ದ ಆರೋಪಿ ಪ್ರೀತಿಸು,ಮದುವೆಯಾಗುವಂತೆ ಪಿಡಿಸುತ್ತಿದ್ದ.ಆದ್ರೆ ಆಕೆ ಒಪ್ಪದಿದ್ದಾಗ ಕಾದು ಕುಳಿತು ಆ್ಯಸಿಡ್ ಹಾಕಿದ್ದ.. ಬಳಿಕ ಕೋರ್ಟ್ ಬಳಿ ವಕೀಲರನ್ನು ಭೇಟಿಯಾಗಿದ್ದ..ಆದ್ರೆ ಎಫ್ಐಆರ್ ಆಗಿಲ್ಲ ಪೊಲೀಸ್ ಸ್ಟೇಷನ್ ಗೆ ಹೋಗು ಅಂದಿದ್ರು..ನಂತ್ರ ಬೈಕ್ ಅನ್ನ ಅಲ್ಲಿಯೇ ಬಿಟ್ಟು ಹೊಸಕೋಟೆಗೆ ಹೋಗಿದ್ದ. ಪೋನ್ ಕೂಡ ಅಲ್ಲಿಯೇ ಆಫ್ ಮಾಡಿ ಬಿಸಾಡಿ ಹೋಗಿದ್ದ ಎಂದು ಪೊಲೀಸ್ ಕಮಿಷನರ್ ಕಮಲ್ ಪಂತ್ ಹೇಳಿದ್ರು..ಹೊಸಕೋಟೆಯಲ್ಲಿ ಕರೆಗೆ ಹಾರಿ ಸೂಸೈಡ್ ಮಾಡಿಕೊಳ್ಳೋಕ್ಕೆ ಆರೋಪಿ ನಾಗೇಶ್ ನಿರ್ಧರಿಸಿದ್ದ.ಆದರೆ ಮನಸ್ಸು ಬದಲಿಸಿ ತಮಿಳುನಾಡು ಕಡೆ ಪಯಣ ಬೆಳೆಸಿದ್ದ.

ಮಧ್ಯೆ ಕಾರ್ಯಪ್ರವೃತರಾದ ಕಾಮಾಕ್ಷಿಪಾಳ್ಯ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆಕೈಗೊಂಡಿದ್ರು..ಡಿಸಿಪಿ ಸಂಜೀವ್ ಪಾಟೀಲ್ ನೇತೃತ್ವದಲ್ಲಿ 10 ವಿಶೇಷ ತಂಡ ರಚನೆ ಮಾಡಲಾಗಿತ್ತು..ಒಂದೊಂದು ಟೀಮ್ ಒಂದೊಂದು ಆಯಾಮಾಗಳಲ್ಲಿ ವರ್ಕ್ ಮಾಡ್ತಾ ಇತ್ತು.

ಇತ್ತ ಪ್ರಕರಣ ದಾಖಲಾದ ದಿನದಿಂದ ಸರ್ಚಿಂಗ್ ಆಪರೇಷನ್ ನಡೆಸೋ ಪಶ್ಚಿಮ ಪೊಲೀಸರು  10 ವಿಶೇಷ ತಂಡಗಳು ವೊಂದು ಊರುಗಳಲ್ಲಿ ಶೋಧ ಕಾರ್ಯ ಮಾಡ್ತಿರುತ್ತಾರೆ..ಒಂದೊಂದು ತಂಡಕ್ಕೆ ಒಂದೊಂದು ಆಯಮಗಳಲ್ಲಿ ತನಿಖೆ ನಡೆಸೋ ಜವಬ್ದಾರಿ ನೀಡಲಾಗಿರುತ್ತೆ..ಒಂದು ತಂಡ ಸಿಸಿಟಿವಿ, ಒಂದು ತಂಡ ಸಿಡಿಆರ್, ಕಾಲ್ ಡಿಟೈಲ್ಸ್, ಮತ್ತೊಂದು ತಂಡ ಫ್ಯಾಮಿಲಿ, ಫ್ರೆಂಡ್ಸ್ ಸರ್ಕಲ್, ಒಂದು ತಂಡ ಕೆಲಸ ಮಾಡ್ತಿದ್ದ ಜಾಗ, ಮತ್ತು ಅವನ ದಿನಚರ, ಒಂದು ತಂಡ ವರಣಾಸಿ, ಒಂದು ತಂಡ ತಿರುಪತಿ, ಒಂದು ತಂಡ ತಮಿಳು ನಾಡು, ಒಂದು ತಂಡ ತಿರುಪತಿ,ಧರ್ಮಸ್ಥಳ ಸೇರಿದಂತೆ ಧಾರ್ಮಿಕ ಸ್ಥಳಗಳು ಸೇರಿ ಡೆಹ್ರಾಡೋನ್ ನಲ್ಲೂ  ತಂಡಗಳು ಹುಡುಕಾಟ ನಡೆಸುತ್ತವೆ.

ನಾಗೇಶ್ ಕುಟುಂಬವನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿದ್ರು..ಈ ವೇಳೆ ಆತ ಹೆಚ್ಚು ದೇವಸ್ಥಾನಗಳಿಗೆ ಸುತ್ತಿದ್ದ ಕಳೆದ ಒಂದು ವರ್ಷದ ಇಸ್ಟ್ರೀ ಕಲೆಕ್ಟ್ ಮಾಡಿದ್ರು.  ಅದರಲ್ಲೂ ತಮಿಳು ನಾಡಿನ ತಿರುವಣ್ಣಾಮಲೈನಲ್ಲಿರುವ ಆಂಜನೇಯ ದೇವಸ್ಥಾನ ಮತ್ತು ಮಠಗಳಿಗೆ ಕಳೆದ ಒಂದು ವರ್ಷದಲ್ಲಿ 2 ಬಾರಿ ಭೇಟಿ ಮಾಡಿದ್ದ ಎಂದು ಮಾಹಿತಿ ಸಿಕ್ಕಿತ್ತು..

ಹೀಗೆ ಇನ್ಫಾರ್ಮೆಷನ್ ಬರ್ತಿದ್ದಾಗೆ ತಮಿಳುನಾಡಿನಲ್ಲಿದ್ದ ಟೀಂ ಅಲರ್ಟ್ ಆಗುತ್ತೆ. ಅವನ ಫೋಟೋ ಮತ್ತು ಮುಖ ಚಹರೆಗಳಿರುವ ಪಾಂಪ್ಲೆಟ್‌ಗಳನ್ನ ಮಾಡಿ ತಿರುವಣ್ಣಾಮಲೈನ ಬೀದಿ ಬೀದಿಗಳಲ್ಲಿ ಅಂಟಿಸುತ್ತಾರೆ, ಆಶ್ರಮಗಳ ಸುತ್ತಮುತ್ತಲೂ ಬಿತ್ತರಿಸಿ ಬಂದಿರುತ್ತಾರೆ.

ಸ್ಟುಡೆಂಟ್‌ನಿಂದ ಸಿಕ್ಕ ನಾಗ
ಈ ಪಾಂಪ್ಲೆಟ್ ಅನ್ನ ತಿರುವಣ್ಣಾಮಲೈನ ಒಬ್ ಸ್ಟುಡೆಂಟ್‌ಗೆ ಸಿಕ್ಕಿಬಿಡುತ್ತೆ. ಆತ ಈ ಪಾಂಪ್ಲೆಟ್ ಫೋಟೋ ತೆಗೆದು ವಾಟ್ಸಪ್ ಗ್ರೂಪ್‌ನಲ್ಲಿ ಶೇರ್ ಮಾಡ್ತಾನೆ. ಅವರ ಫ್ರೆಂಡ್ಸ್ ನೋಡಿದ ಒಬ್ಬ ಅದೇ ಗ್ರೂಪ್‌ನಲ್ಲಿ ರಮಣಾಶ್ರೀ ಆಶ್ರಮದಲ್ಲಿ ಈ ವ್ಯಕ್ತಿ ಇದ್ದಾನೆ ಅನ್ನೋ ಮಾಹಿತಿ ತಿಳಿಸುತ್ತಾನೆ.

ಆಗ ಆ ಯುವಕ ಪಾಂಪ್ಲೆಟ್‌ನಲ್ಲಿದ್ದ ನಂಬರ್, ಅಂದ್ರೆ ಕಾಮಾಕ್ಷಿಪಾಳ್ಯ ಇನ್ಸ್‌ಪೆಕ್ಟರ್ ಪ್ರಶಾಂತ್ ಅವರಿಗೆ ಕಾಲ್ ಮಾಡಿ ಮಾಹಿತಿ ತಿಳಿಸುತ್ತಾರೆ. ಈ ನಡುವಲ್ಲೇ ಕರೆ ಮಾಡಿದ್ದ ಯುವಕನಿಗೆ ಇನ್ಸ್‌ಪೆಕ್ಟರ್ ಪ್ರಶಾಂತ್ ಆತನಿಗೆ ಗೊತ್ತಾಗದೇ ಒಂದು ಫೋಟೋ ತೆಗೆದು ಕಳುಹಿಸಿ ಅಂತಾರೆ. ಆಗ ಆತ ತೆಗೆದು ಕಳಿಸುವ ಫೋಟೋ ನೋಡಿದವರು ಇದು ಅವನೇ ಅನ್ನೋದು ಕನ್ಫರ್ಮ್ ಆಗ್ತಿದ್ದಂತೆ ಪೊಲೀಸರು ಫುಲ್ ಅಲರ್ಟ್ ಆಗಿಬಿಡ್ತಾರೆ.

ನಂತರ ಕೂಡಲೇ ಇನ್ಸ್‌ಪೆಕ್ಟರ್‌ ಪ್ರಶಾಂತ್, ತಮಿಳುನಾಡಿನಲ್ಲಿದ್ದ ಟೀಂನ ಅಲರ್ಟ್ ಮಾಡ್ತಾರೆ. ಆ ತಂಡ ಕೂಡ ತಿರುವಣ್ಣಾಮಲೈನಲ್ಲೇ ಬೀಡು ಬಿಟ್ಟಿರುತ್ತೆ. ತಡಮಾಡದೇ ರಮಣಾ ಶ್ರೀ ಆಶ್ರಮದತ್ತ ಎಎಸೈ ಶಿವಣ್ಣ ಮತ್ತು ಕಾನ್ಸ್ಟೇಬಲ್ ರವಿಕುಮಾರ್ ಮಠದ ಒಳಗ್ಗೆ ನುಗ್ಗಿಬಿಡ್ತಾರೆ. 

ರಮಣಶ್ರೀ ಆಶ್ರಮಕ್ಕೆ ಭಕ್ತಾದಿಗಳ ರೂಪದಲ್ಲಿ ಎಂಟ್ರಿ ಕೊಡ್ತಾರೆ. ಅಲ್ಲೇ ಈ ನಾಗ ಧ್ಯಾನ ಮಾಡುತ್ತಾ ಕೂತಿರುತ್ತಿದ್ದ. ಇವರು ಅವನ ಪಕ್ಕದಲೇ ಹೋಗಿ ಕೂತಿಕೊಳ್ತಾರೆ. ಎರಡು ಮೂರು ಬಾರಿ ನಿಮ್ಮ ಹೆಸರು ನಾಗೇಶ್ ಅಲ್ವಾ ಅಂತ ಕೇಳ್ತಾರೆ, ಆತ ರೆಸ್ಪಾಂಡ್ ಮಾಡೋದಿಲ್ಲ ಮೂರನೇ ಬಾರಿಗೆ ಗದರಿದಾಗ ಹೌದು ನಾನು ನಾಗೇಶ್ ಅಂತ ಹೇಳ್ತಾನೆ. ಅವನನ್ನ ಲಾಕ್ ಮಾಡಿಕೊಂಡು ಬೆಂಗಳೂರಿನ ಕಡೆಗೆ ಬರ್ತಾರೆ.

ಪಿಎಸ್ ಐ ಶಿವಣ್ಣ ಹಾಗೂ ಕಾನ್ಸ್ ಟೇಬಲ್ ರವಿಕುಮಾರ್  ತಡ ಮಾಡದೇ ಯಾವ ಗಾಡಿ ಸಿಗುತ್ತೋ ಹತ್ತಿಕೊಂಡು ಬರ್ತಾ ಇರ್ತಾರೆ. ಬಳಿಕ ಪಿಎಸ್ ಐ ಗೋವಿಂದ ರಾಜ್ ಕಾರ್ ಸಿಗುತ್ತೆ.ಆರೋಪಿ ನಾಗೇಶ್ ನನ್ನು ಬೆಂಗಳೂರಿನ ಕೆಂಗೇರಿ ಬಳಿ ಕರೆದುಕೊಂಡು ಬರ್ತಾ ಇರ್ತಾರೆ..ಈ ವೇಳೆ ಮೂತ್ರ ವಿಸರ್ಜನೆಗೆ ಇಳಿದಾಗ ಹೆಡ್ ಕಾನ್ಸ್ ಟೇಬಲ್ ಮಹಾದೇವಯ್ಯ ಮೇಲೆ ಅಟ್ಯಾಕ್ ಮಾಡಿ ಪರಾರಿಯಾಗಲ್ಲೂ ಯತ್ನಿಸಿದ್ದ. ಈ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಕಾಮಾಕ್ಷಿಪಾಳ್ಯ ಇನ್ಸ್ ಪೆಕ್ಟರ್ ಪ್ರಶಾಂತ್ ಎಚ್ಚರಿಕೆ ಕೊಟ್ಟಿದ್ರು.

ಆದ್ರೂ ಆತ ತಪ್ಪಿಸಿಕೊಂಡು ಓಡುವಾಗ ಬಲಗಾಲಿಗೆ ಗುಂಡು ಹಾರಿಸುತ್ತಾರೆ. ರಕ್ತದ ಮಡುವಿನಲ್ಲಿ ಕೆಳಗೆ ಬಿದ್ದ ಆರೋಪಿ ಕಾಮುಕ ನಾಗೇಶ್ ನನ್ನು ರಾಜಾರಾಜೇಶ್ವರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ರು..ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ,ತನಿಖೆ ಮುಂದುವರೆಸಿದ್ದಾರೆ.

click me!