1994 ರಲ್ಲಿ ಕ್ಯಾರಕೊಪ್ಪ ಗ್ರಾಮ ಪಂಚಾಯತ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ಕಲಂಗಳ ಅಡಿ ಅಪರಾದ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿತನಾದ ಕ್ಯಾರಕೊಪ್ಪ ಗ್ರಾಮದ ಚಂದ್ರಪ್ಪ ತಂದೆ ಆಶ್ವತಪ್ಪ ಹುರಳಿ ಎಂಬ ವ್ಯಕ್ತಿ 28 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಈ ಕುರಿತು ಧಾರವಾಡ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು..
ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
ಧಾರವಾಡ (ಡಿ.27) : 1994 ರಲ್ಲಿ ಕ್ಯಾರಕೊಪ್ಪ ಗ್ರಾಮ ಪಂಚಾಯತ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ಕಲಂಗಳ ಅಡಿ ಅಪರಾದ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿತನಾದ ಕ್ಯಾರಕೊಪ್ಪ ಗ್ರಾಮದ ಚಂದ್ರಪ್ಪ ತಂದೆ ಆಶ್ವತಪ್ಪ ಹುರಳಿ ಎಂಬ ವ್ಯಕ್ತಿ 28 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಈ ಕುರಿತು ಧಾರವಾಡ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು..
ಕಳೆದ 28 ವರ್ಷಗಳಿಂದ ಧಾರವಾಡ ಗ್ರಾಮೀಣ ಪೋಲಿಸ್ ಠಾಣೆ(Dharwad Rural Police Station)ಯಲ್ಲಿ ನೂರಾರು ಪಿಎಸ್‌ಐಗಳು ಸಿಪಿಐಗಳು ಬಂದು ಕೆಲಸ ನಿರ್ವಹಣೆ ಮಾಡಿದ್ದಾರೆ ಆದರೆ ಅವರೆಲ್ಲ ಕೇವಲ ತಮ್ಮ ತಮ್ಮ ಕೆಲಸದಲ್ಲಿದ್ದೂ ಅವರ ಅಧಿಕಾರ ಅವಧಿಯಲ್ಲಿ ಈ ಆರೋಪಿಯನ್ನ ಪತ್ತೆ ಹಚ್ಚಲು ಆಗಿರಲಿಲ್ಲ ಆದರೆ ಸದ್ಯ ಈಗಿನ ಗ್ರಾಮೀಣ ಪೋಲಿಸ್ ಠಾಣೆಯ ಇನ್ಸಪೆಕ್ಟರ್ ಮಂಜುನಾಥ್ ಕುಸುಗಲ್ (Manjunath kusugal) 28 ವರ್ಷದ ಪ್ರಕರಣದ ಆರೋಪಿಯನ್ನ ಬಂದಿಸಲು ಯಶಸ್ವಿಯಾಗಿದ್ದಾರೆ. ಇನ್ನು ಈ ಸಿಪಿಐ ಕಾರ್ಯಕ್ಕೆ ಪೋಲಿಸ್ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
9 ತಿಂಗಳ ಹಿಂದೆ ನಡೆದ ಕೊಲೆ ಪ್ರಕರಣ ಪತ್ತೆ ಹಚ್ಚಿದ ಕಬ್ಬನ್ ಪಾರ್ಕ್ ಪೊಲೀಸರು!
ಆರೋಪಿಯ ಪತ್ತೆಗಾಗಿ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಒಂದು ವಿಶೇಷ ತನಿಖಾ ತಂಡವನ್ನು ರಚನೆ ಮಾಡಿ, ಪತ್ತೆ ಕಾರ್ಯ ಕೈಗೊಳ್ಳಲಾಗಿತ್ತು ಆರೋಪಿ ಸದ್ಯ ಮೈಸೂರಿನಲ್ಲಿ ಇರುವ ಬಗ್ಗೆ ಮಾಹಿತಿ ಕಲೆಹಾಕಿ, ಮೈಸೂರಿಗೆ ತೆರಳಿ ಚಾಮುಂಡಿ ಬೆಟ್ಟ ರಸ್ತೆಯ K.R.Mill Guest house ಹತ್ತಿರ ಆರೋಪಿತ ಚಂದ್ರಪ್ಪ ಅಶ್ವತಪ್ಪ ಹುರಳಿಯನ್ನು ಬಂಧಿಸಿದ್ದಾರೆ. ಡಿಸೆಂಬರ್ 20, 2022 ರಂದು ಠಾಣೆಗೆ ಕರೆದುಕೊಂಡು ಬಂದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯದ ಆದೇಶದಂತೆ ಸದ್ಯ ಆರೋಪಿಯು ನ್ಯಾಯಾಂಗ ಬಂಧನದಲ್ಲಿದ್ದಾನೆ.
ಆರೋಪಿ ಸಿಕ್ಕಿದ್ದೇ ರೋಚಕ:
ಕಳೆದ 28 ವರ್ಷಗಳಿಂದತಲೆಮರೆಸಿಕೊಂಡಿದ್ದ ಆರೋಪಿ ಪತ್ತೆಗಾಗಿ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನ ರಚನೆ ಮಾಡಿ ಎಲ್‌ಪಿಸಿ 8/2009 (ಲಾಂಗ್ ಪೆಂಡಿಂಗ್ ಕೇಸ್ ), ಪ್ರಕರಣ ಸಂಖ್ಯೆ 54/1994 ಈ ಪ್ರಕರಣದಡಿ ಅಡಿಯಲ್ಲಿ ಆರೋಪಿ ವಿರುದ್ಧ 143,147,148,341,324,504,506 ಕಲಂ ನಡಿ ಕೇಸ್ ದಾಖಿಸಿಕೊಂಡು ಆರೋಪಿ ಚಂದ್ರಪ್ಪ ಪತ್ತೆಗೆ ಜಾಲ ಬೀಸಿದ್ದರು.
ಇತ್ತ ಆರೋಪಿ ಚಂದ್ರಪ್ಪ ಕೆಲಸ ಅರಸಿ ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ ಬೆಟ್ಟದಲ್ಲಿ ಬದುಕು ಕಟ್ಟಿಕೊಂಡಿದ್ದನು. ಆತನ ಮಗ ಅದೇ ಚಾಮುಂಡೇಶ್ವರಿ ಬೆಟ್ಟದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಹೀಗಿದ್ದಾಗ ಧಾರವಾಡ ತಾಲೂಕಿನ ಕ್ಯಾರಕೊಪ್ಪ (kyarakoppa)ಗ್ರಾಮಸ್ಥರು ಚಾಮುಂಡೇಶ್ವರಿ(Chamundeshwari Temple) ದೇವರ ದರ್ಶನ ತೆರಳಿದ್ದರು. ಆಗ ಭಕ್ತರು ಸರದಿ ಸಾಲಿನಲ್ಲಿ ನಿಂತಾಗ ಇದನ್ನು ಚಂದ್ರಪ್ಪನ ಮಗ ಗಮನಿಸಿ ಕ್ಯಾರಕೊಪ್ಪದ ಗ್ರಾಮದ ಜನರನ್ನ ದೇವರ ದರ್ಶನ ಮಾಡಿಸುತ್ತಾನೆ. ಆಗ ಗ್ರಾಮಸ್ಥರು ನಿಮ್ಮ ತಂದೆ ಎಲ್ಲಿ ಅಂತಾ ಕೇಳ್ತಾರೆ. ಆಗ ಮಗ ತಂದೆ ಮನೆಯಲ್ಲಿರುವುದಾಗಿ ಹೇಳುತ್ತಾನೆ. ಬಳಿಕ ಚಾಮುಂಡೇಶ್ವರಿ ದರ್ಶನ ಮುಗಿಸಿಕೊಂಡು ಗ್ರಾಮಕ್ಕೆ ಮರಳಿದ ಜನರು ಚಂದ್ರಪ್ಪ ಚಾಮುಂಡಿ ಬೆಟ್ಟದಲ್ಲಿ ಇರುವ ಬಗ್ಗೆ ಗ್ರಾಮದಲ್ಲಿ ಮಾತನಾಡಿಕೊಳ್ಳುತ್ತಾರೆ. ಇದು ಹೇಗೋ ಗ್ರಾಮೀಣ ಠಾಣೆ ಸಿಪಿಐ ಮಂಜುನಾಥ ಕುಸುಗಲ್ ಕಿವಿಗೆ ಬಿಳ್ಳುತ್ತದೆ. ಇದನ್ನ ಕನ್ಫರ್ಮ್ ಮಾಡಿಕೊಳ್ಳಲು ಗ್ರಾಮೀಣ ಠಾಣೆಯ ಪೊಲೀಸರು ಚಾಮುಂಡೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ವಿಚಾರಿಸುತ್ತಾರೆ. ಆಗ ಆರೋಪಿ ಚಂದ್ರಪ್ಪ ದೇವಸ್ಥಾನದಲ್ಲಿ ಇರುವ ಬಗ್ಗೆ ಗೊತ್ತಾಗುತ್ತದೆ. ಬಳಿಕ ಪೊಲೀಸರು ಆತನನ್ನು ಚಾಮುಂಡಿ ಬೆಟ್ಟದ ರಸ್ತೆಯ ಕೆ.ಆರ್.ಮಿಲ್ ಗೆಸ್ಟ್ ಹೌಸ್ ಹಿಡಿದು ಪ್ರಶ್ನಿಸಿದಾಗ ಆರೋಪಿ ಚಂದ್ರಪ್ಪ ಕೂಡ ತಾನು ಮಾಡಿರುವ ಪ್ರಕರಣಗಳ ಬಗ್ಗೆ ತಪ್ಪೊಪ್ಪಿಕೊಳ್ಳುತ್ತಾನೆ.
ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ಪಿಐ ಮಂಜುನಾಥ ಕುಸುಗಲ್ ಅವರ ನೇತೃತ್ವದಲ್ಲಿ ಠಾಣೆಯ ಸಿಬ್ಬಂದಿ ಕೆ.ಎಚ್. ಕಾಂಬಳೆ, ಕೃಷ್ಣಾ ವಿಭೂತಿ, ಮಾರುತಿ ಕುಂಬಾರ ಹಾಗೂ ಇತರೆ ಸಿಬ್ಬಂದಿಯವರು 1994 ರಿಂದ ಸುಮಾರು 28 ವರ್ಷದಿಂದ ತಲೆಮರೆಸಿಕೊಂಡಿರುವ ಆರೋಪಿತನನ್ನು ಪತ್ತೆ ಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
Crime News: ದಟ್ಟ ಕಾಡಿನಲ್ಲಿ ಪ್ರೇಮಿಗಳ ದುರಂತ ಅಂತ್ಯ: ಆತ್ಮಹತ್ಯೆಗೆ ಕಾರಣ 'ಅವಳು'?
ಈ ಪ್ರಕರಣ ಬೇಧಿಸುವಲ್ಲಿ ಮಹತ್ವದ ಪಾತ್ರವಹಿಸಿದ ತಂಡದ ಕಾರ್ಯವನ್ನು ಶ್ಲಾಘಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಅವರು ಸಿಬ್ಬಂದಿ ಮಾಡಿರುವ ಕೆಲಸಕ್ಕೆ ಬಹುಮಾನವನ್ನು ಘೋಷಿಸಿದ್ದಾರೆ.. ಈ ಬಹುಮಾನ ನೂರಾರು ಪೋಲಿಸ್ ಸಿಬ್ಬಂದಿಗೆ ಸ್ಪೂರ್ತಿಯಾಗಿದೆ.