9 ತಿಂಗಳ ಹಿಂದೆ ನಡೆದ ಕೊಲೆ ಪ್ರಕರಣ ಪತ್ತೆ ಹಚ್ಚಿದ ಕಬ್ಬನ್ ಪಾರ್ಕ್ ಪೊಲೀಸರು!

ಅದು 9 ತಿಂಗಳ ಹಿಂದೆ ನಡೆದಿದ್ದ ಅಪಹರಣ ಹಾಗೂ ಹತ್ಯೆ ಪ್ರಕರಣ. ಹಣಕಾಸಿನ ವಿಚಾರಕ್ಕೆ ಬೆಂಗಳೂರಿನಿಂದ ಕಿಡ್ನಾಪ್‌ ಮಾಡಿ ಚಿತ್ರಹಿಂಸೆ ಕೊಟ್ಟು ಹತ್ಯೆ ಮಾಡಿದ್ರು. ಬಳಿಕ ಶವವನ್ನ ಚಾರ್ಮುಡಿ ಘಾಟ್‌ನಲ್ಲಿ ಬಿಸಾಡಿ ಬಂದಿದ್ರು. ಆದ್ರೆ ಕಿಡ್ನಾಪ್ ಮಾಡಿದ್ದ ವೇಳೆ ಮಾಡಿಕೊಂಡಿದ್ದ ವಿಡಿಯೋ ಮೂಲಕವೇ ಪೊಲೀಸರ ಅತಿಥಿಗಳಾದ್ದಾರೆ.

A murder case that happened nine months ago Cubbon Park police traced the accused rav

ಬೆಂಗಳೂರು (ಡಿ.27) : ಅದು 9 ತಿಂಗಳ ಹಿಂದೆ ನಡೆದಿದ್ದ ಅಪಹರಣ ಹಾಗೂ ಹತ್ಯೆ ಪ್ರಕರಣ. ಹಣಕಾಸಿನ ವಿಚಾರಕ್ಕೆ ಬೆಂಗಳೂರಿನಿಂದ ಕಿಡ್ನಾಪ್‌ ಮಾಡಿ ಚಿತ್ರಹಿಂಸೆ ಕೊಟ್ಟು ಹತ್ಯೆ ಮಾಡಿದ್ರು. ಬಳಿಕ ಶವವನ್ನ ಚಾರ್ಮುಡಿ ಘಾಟ್‌ನಲ್ಲಿ ಬಿಸಾಡಿ ಬಂದಿದ್ರು. ಆದ್ರೆ ಕಿಡ್ನಾಪ್ ಮಾಡಿದ್ದ ವೇಳೆ ಮಾಡಿಕೊಂಡಿದ್ದ ವಿಡಿಯೋ ಮೂಲಕವೇ ಪೊಲೀಸರ ಅತಿಥಿಗಳಾದ್ದಾರೆ.

 9 ತಿಂಗಳ ಬಳಿಕ ಪರಪ್ಪನ ಅಗ್ರಹಾರ(Parappana Agrahara)ಜೈಲು ಸೇರಿದ್ದಾರೆ. ಇದು ಕಳೆದ ಒಂಬತ್ತು ತಿಂಗಳ ಹಿಂದೆ ಹಣಕಾಸಿನ ವಿಚಾರಕ್ಕೆ ಬೆಂಗಳೂರು(Bengaluru)ನಿಂದ ಶರತ್ ಎಂಬ ಯುವಕನನ್ನ ಕಿಡ್ನಾಪ್((Kidnap) ಮಾಡಿದ್ದ ದುಷ್ಕರ್ಮಿಗಳು ಯುವಕನ ಮೇಲೆ‌ ಅಮಾನವೀಯವಾಗಿ ಮಾಡಿರೋ ಹಲ್ಲೆಯ ದೃಶ್ಯಗಳು. 

ವೃದ್ಧ ಜೋಡಿಯ ಕೊಲೆ ಮಾಡಿದ್ದು 12 ವರ್ಷದ ಚಿಂದಿ ಆಯುವ ಬಾಲಕ

ಈ ವಿಡಿಯೋ(Video) ಸೋಷಿಯಲ್‌ಮೀಡಿಯಾ(Social media)ಗಳಲ್ಲಿ ಹರಿದಾಡುತ್ತ ಕೊನೆಗೆ ಕಬ್ಬನ್ ಪಾರ್ಕ್(Cubbon park) ಸಬ್ ಡಿವಿಷನ್ ಎಸಿಪಿಗೂ ತಲುಪಿತ್ತು. ಆ ಹಿನ್ನೆಲೆ ಸುಮೋಟೊ ಕೇಸ್()Sumoto Case( ದಾಖಲಿಸಿಕೊಂಡು ತನಿಖೆ ಕೈಗೊಂಡ ಕಬ್ಬನ್ ಪಾರ್ಕ್ ಪೊಲೀಸರು, ಯುವಕನನ್ನ ಅಪಹರಿಸಿ, ಹತ್ಯೆಗೈದಿದ್ದ ಹಂತಕರನ್ನ 9 ತಿಂಗಳ ಬಳಿಕ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರ ಅತಿಥಿಯಾದ ಹಂತಕರೇ ಈ ಶರತ್ ಅಂಡ್ ಗ್ಯಾಂಗ್.

ಹತ್ಯೆಯಾದ ಶರತ್ ಎಸ್‌ಸಿ ಎಸ್‌ಟಿ ಅಭಿವೃದ್ದಿ ನಿಗಮದಿಂದ ಸಿಗುವ ಕೆಲ ಸೌಲಭ್ಯಗಳನ್ನ ಕೊಡಿಸೋದಾಗಿ ನಂಬಿಸಿ 20 ಲಕ್ಷ ಹಣ ಪಡೆದು ವಂಚಿಸಿದ್ದ. ಈ ಸಂಬಂಧ  ಶರತ್ ಬಳಿ ಹಣ ವಾಪಸ್ಸು ಕೊಡುವಂತೆ ಕೇಳಿ‌ಕೇಳಿ ಸುಸ್ತಾಗಿದ್ದ ಆರೋಪಿ ಶರತ್, ಮಾರ್ಚ್ ತಿಂಗಳಲ್ಲಿ‌ ಶರತ್ ಮೈಸೂರಿನಿಂದ ಬೆಂಗಳೂರಿಗೆ ಬಂದು ಬನಶಂಕರಿ ಬಸ್ ನಿಲ್ದಾಣದ ಬಳಿ ನಡೆದು ಹೋಗ್ತಿದ್ದ ವೇಳೆ ಕಾರಿನಲ್ಲಿ ಕಿಡ್ನಾಪ್ ಮಾಡಿದ್ರು.

ಬಳಿಕ ನೇರವಾಗಿ ಗೌರಿಬಿದನೂರಿನ ಫಾರ್ಮ್ ಹೌಸ್ ಗೆ ಕರೆದೊಯ್ತು ಅಲ್ಲಿನ ಕೋಣೆಯೊಂದ್ರಲ್ಲಿ ಕೂಡಿ ಹಾಕಿ ನಗ್ನಗೊಳಿಸಿ ಹಲ್ಲೆ ಮಾಡಿದ್ರು. ಅಷ್ಟು ಸಾಲದು ಅನ್ನೊ ರೀತಿ ಮರಕ್ಕೆ ನೇತಾಕಿಯೂ ಮನ ಬಂದಂತೆ ಹಲ್ಲೆ ಮಾಡಿದ್ದಾರೆ. ಹಾಗೆ ಹಲ್ಲೆ ನಡೆಸಿದ ವೇಳೆ ತೀವ್ರ ಗಾಯಗೊಂಡಿದ್ದ ಶರತ್ ಸಾವನ್ನಪ್ಪಿದ್ದು, ಶವವನ್ನ ಮೂಟೆಯಲ್ಲಿ ತುಂಬಿದ್ದ ಹಂತಕರು  ಚಾರ್ಮಾಡಿಘಾಟ್(Charmady Ghat) ನಲ್ಲಿ ಬಿಸಾಡಿ ವಾಪಸ್ಸಾಗಿದ್ರು. ಬಳಿಕ ಶರತ್ ಪೋಷಕರಿಗೆ ಮೃತ ಶರತ್ ಫೋನ್ ನಿಂದಲೇ ಕರೆ ಮಾಡಿದ್ದ ಹಂತಕರು, ನನಗೆ ಸಾಲ ಹೆಚ್ಚಾಗಿದೆ. ನಾನು ಊರು ಬಿಟ್ಟು ಹೋಗ್ತಿದ್ದೇನೆ. ಸೆಟೆಲ್‌ ಆದ್ಮೇಲೆ ಬರ್ತೇನೆ ಅಂತೇಳಿ ಫೋನ್ ಸ್ವಿಚ್ ಆಫ್ ಮಾಡಿ ಲಾರಿ ಮೇಲೆ ಎಸೆದಿದ್ರು. 

ಮನೆಯವರು ಮಗ ದುಡಿಯಲು ಹೋಗಿದ್ದಾನೆ ಅಂದುಕೊಂಡಿದ್ದರು. ಇತ್ತ ಆರೋಪಿಗಳು ಯಾರಿಗೂ ಅನುಮಾನ ಬರದಂತೆ 9 ತಿಂಗಳಿಂದ ಆರಾಮಾಗಿ ಜೀವನ ಸಾಗಿಸ್ತಿದ್ರು. ಆದ್ರೆ, ಅವ್ರೇ ಮಾಡಿಕೊಂಡಿದ್ದ ಹಲ್ಲೆಯ ದೃಶ್ಯಗಳು ದಿನಕಳೆದಂತೆ ಹತ್ಯೆಯಲ್ಲಿ ಭಾಗಿಯಾಗಿದ್ದ ಆರೋಪಿಯೊಬ್ಬನಿಂದ ಲೀಕ್ ಆಗಿತ್ತು. ಅದು ಒಬ್ಬರಿಂದ ಒಬ್ಬರ ಮೊಬೈಲ್ ಗೆ ಹರಿದು ಕೊನೆಗೆ ಪೊಲೀಸ್ರ ಕೈ ಸೇರಿತ್ತು. ವಿಡಿಯೋ ನೋಡಿ ಶಾಕ್ ಆದ ಪೊಲೀಸ್ರು ಏನೋ ಆಗಿದೆ ಅನ್ನೋ ಅನುಮಾನದಲ್ಲಿ ಸುಮೋಟೊ ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

Crime News: ಎರಡು ಹೆಣ ಉರುಳಿಸಿ ಪ್ರೇಯಸಿ ಜೊತೆ ಹೋಗಿದ್ದ: ಸ್ಕಾಚ್ ಬಾಟಲ್‌ನಿಂದ ತಗ್ಲಾಕಿಕೊಂಡ ಹಂತಕರು

ಗೌರಿಬಿದನೂರಿನ ಕನ್ನಡಪರ ಸಂಘಟನೆ ಮುಖಂಡ ವೆಂಕಟಾಚಲಪತಿ ಹಾಗೂ ಆತನ ಪುತ್ರ  ಶರತ್  ಆತನ ಕೃತ್ಯಕ್ಕೆ ಸಾಥ್ ನೀಡಿದ್ದ ಮಂಜುನಾಥ್, ಶ್ರೀಧರ್, ದನುಷ್ ಎಂಬುವರನ್ನ ಬಂಧಿಸಿದ್ದು, ಉಳಿದ ಮೂವರು ಆರೋಪಿಗಳ ಬಂಧನಕ್ಕೆ ತನಿಖೆ ಮುಂದುವರೆಸಿದ್ದಾರೆ.

Latest Videos
Follow Us:
Download App:
  • android
  • ios