Crime News: ವಿಟ್ಲ ಜಾತ್ರೆಯಲ್ಲಿ ಮಳಿಗೆ ಹಾಕಿದ್ದ ವ್ಯಕ್ತಿಗೆ ಪುಂಡರಿಂದ ಹಲ್ಲೆ, ಪತ್ನಿಯ ಮಾನಭಂಗಕ್ಕೆ ಯತ್ನ

By Kannadaprabha NewsFirst Published Jan 21, 2023, 9:48 AM IST
Highlights

ವಿಟ್ಲದ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಪ್ರಯುಕ್ತ ಹಾಕಲಾಗಿದ್ದ ಫ್ಯಾನ್ಸಿ ಅಂಗಡಿಯೊಂದರ ಬಳಿ ಬಂದ ತಂಡವೊಂದು ಅಂಗಡಿ ಮಾಲೀಕರಿಗೆ ಹಲ್ಲೆ ನಡೆಸಿ, ಅವರ ಪತ್ನಿಯ ಮಾನಭಂಗಕ್ಕೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಆರು ಮಂದಿಯ ವಿರುದ್ಧ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ (ಜ.21): ವಿಟ್ಲದ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಪ್ರಯುಕ್ತ ಹಾಕಲಾಗಿದ್ದ ಫ್ಯಾನ್ಸಿ ಅಂಗಡಿಯೊಂದರ ಬಳಿ ಬಂದ ತಂಡವೊಂದು ಅಂಗಡಿ ಮಾಲೀಕರಿಗೆ ಹಲ್ಲೆ ನಡೆಸಿ, ಅವರ ಪತ್ನಿಯ ಮಾನಭಂಗಕ್ಕೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಆರು ಮಂದಿಯ ವಿರುದ್ಧ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ(Bantwal) ತಾಲೂಕು ನೇರ್ಲಾಜೆ ನಿವಾಸಿ ಸುರೇಶ್‌ ದಾಸ್‌(Suresh das) ದೂರದಾರರಾಗಿದ್ದಾರೆ. ಬಂಟ್ವಾಳ ತಾಲೂಕು ವಿಟ್ಲ ಕಸಬ ಗ್ರಾಮದ ಶ್ರೀ ಪಂಚಲಿಗೇಶ್ವರ ದೇವಸ್ಥಾನದ ಪಕ್ಕದಲ್ಲಿ ಜಾತ್ರೆ(Vitla fair)ಯ ಪ್ರಯುಕ್ತ ದೇವಸ್ಥಾನದ ಅನುಮತಿಯಂತೆ ಫ್ಯಾನ್ಸಿ ಮಳಿಗೆ ತೆರೆದು ವ್ಯವಹಾರ ನಡೆಸುತ್ತಿದ್ದು, ಜ.19ರಂದು ರಾತ್ರಿ ವ್ಯಾಪಾರ ಮುಗಿಸಿ ಮಳಿಗೆಯನ್ನು ಮುಚ್ಚುತ್ತಿದ್ದ ವೇಳೆ ಗಣೇಶ್‌ ಕಡಂಬು, ಮಂಜುನಾಥ ಹಾಗೂ ಇತರ ನಾಲ್ವರು ಮಳಿಗೆ ಬಳಿಗೆ ಬಂದು ಮಳಿಗೆ ಮುಚ್ಚುತ್ತಿರುವುದನ್ನು ಆಕ್ಷೇಪಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಇದನ್ನು ಕಂಡ ನನ್ನ ಪತ್ನಿ ಓಡಿ ಜಗಳ ಬಿಡಿಸಲೆತ್ನಿಸಿದಾಗ ಆಕೆಗೂ ಹಲ್ಲೆ ನಡೆಸಿ ಆಕೆಯ ಮಾನಭಂಗಕ್ಕೆ ಯತ್ನಿಸಿದ್ದಾರೆ. ಈ ವೇಳೆ ಜನಸೇರುತ್ತಿದ್ದಂತೆ ನನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಜೀವಬೆದರಿಕೆ ಒಡ್ಡಿ ತಂಡವು ಅಲ್ಲಿಂದ ಪರಾರಿಯಾಗಿದೆ ಎಂದು ಸುರೇಶ್‌ ದಾಸ್‌ ಅವರು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಪ್ರಮುಖ ಆರೋಪಿಗಳಿಬ್ಬರು ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರಿಂದ ಬಂದಿಸಲ್ಪಟ್ಟು ಜೈಲಿನಲ್ಲಿದ್ದು, ಜಾಮೀನಿನ ಮೇಲೆ ಹೊರಬಂದಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

ವಿದ್ಯುತ್‌ ಕದ್ದವರಿಗೆ ಬೆಸ್ಕಾಂ ಶಾಕ್‌: 2.59 ಕೋಟಿ ದಂಡ

ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಯುವತಿ ಆತ್ಮಹತ್ಯೆ

ಕಾರ್ಕಳ: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದಲ್ಲಿ ಜ.18 ರಂದು ನಡೆದಿದೆ. ತೆಳ್ಳಾರು ನಿವಾಸಿ ಪ್ರೀತಿಕಾ (34) ಆತ್ಮಹತ್ಯೆ ಮಾಡಿಕೊಂಡವರು. ಪ್ರೀತಿಕಾ 7 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಔಷಧಿ ಪಡೆಯುತ್ತಿದ್ದರೂ ಗುಣಮುಖವಾಗಿರಲಿಲ್ಲ. ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗುವುದಕ್ಕಾಗಿ ಈಕೆಯನ್ನು ಕಾರ್ಕಳದ ಆಶ್ರಮವೊಂದರಲ್ಲಿ ಸೇರಿಸಲಾಗಿತ್ತು. ಮಾನಸಿಕ ಕಾಯಿಲೆ ಹೆಚ್ಚಾಗಿರುವುದರಿಂದ ಮನನೊಂದು ಆಶ್ರಮದ ಒಳಗಿನ ಟಾಯ್ಲೆಟ್‌ ಬಳಿ ಚೂಡಿದಾರ್‌ ಶಾಲಿನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೆರಿಗೆ ಪಾವತಿಯಲ್ಲಿ ವಂಚನೆ: ದೂರು ದಾಖಲು

ಮಂಗಳೂರು: ಕಂಪನಿಯೊಂದರ ತೆರಿಗೆ ಸಲಹೆಗಾರರಿಬ್ಬರು ಸೇರಿ ತೆರಿಗೆ ಪಾವತಿಸುವ ನೆಪದಲ್ಲಿ ವಂಚನೆ ಮಾಡಿರುವ ಬಗ್ಗೆ ಬಂದರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಜಯರಾಮ್‌ ಮತ್ತು ಅಂಕಿತ್‌ ಬನ್ಸಾಲ್‌ ಪ್ರಕರಣದ ಆರೋಪಿಗಳು.

ಬೈಕಂಪಾಡಿಯ ಇಂಡಸ್ಟ್ರಿಯಲ್‌ ಏರಿಯಾದಲ್ಲಿರುವ ಬ್ರೈಟ್‌ ಪ್ಯಾಕಿಂಗ್‌ ಪ್ರೈ. ಲಿಮಿಟೆಡ್‌ ಕಂಪನಿಗೆ ಸಂಬಂಧಪಟ್ಟಎಲೆಕ್ಟ್ರಾನಿಕ್‌ ದತ್ತಾಂಶ ಮತ್ತು ದಾಖಲಾತಿಗಳನ್ನು ತನಿಖೆಯ ಸಂಬಂಧ ಮಹಜರು ಮೂಲಕ ವಶಪಡಿಸಿಕೊಳ್ಳಲಾಗಿತ್ತು. ಈ ದಾಖಲಾತಿಗಳನ್ನು ಬಂಟ್ಸ್‌ ಹಾಸ್ಟೆಲ್‌ ರಸ್ತೆಯಲ್ಲಿರುವ ಕಮಿಷನರ್‌ ಆಫ್‌ ಸೆಂಟ್ರಲ್‌ ಎಕ್ಸೈಸ್‌ ಮತ್ತು ಸೆಂಟ್ರಲ್‌ ಟ್ಯಾP್ಸ… ಕಟ್ಟಡದ 6ನೇ ಮಹಡಿಯಲ್ಲಿರುವ ಕಚೇರಿಯಲ್ಲಿರಿಸಲಾಗಿತ್ತು. ಮಹಜರು ಸಮಯ ವಶಪಡಿಸಿಕೊಂಡ ದಾಖಲಾತಿಗಳನ್ನು ಪರಿಶೀಲಿಸಿದಾಗ ಕೆಲವೊಂದು ರಶೀದಿಗಳನ್ನು ಹಾಗೂ ನೋಟ್‌ ಬುಕ್‌ನಲ್ಲಿರುವ ಹಾಳೆಗಳನ್ನು ಬದಲಾಯಿಸಲಾಗಿದೆ ಹಾಗೂ ಕೆಲವೊಂದು ಹಾಳೆಗಳನ್ನು ಹರಿದು ಹಾಕಿರುವುದು ಗಮನಕ್ಕೆ ಬಂದಿತ್ತು.

ಹಿಂದೂಗಳಲ್ಲಿ ಆತಂಕ ಹುಟ್ಟಿಸಲು PFI ನಿಂದಲೇ ಪ್ರವೀಣ್ ನೆಟ್ಟಾರು‌ ಹತ್ಯೆ: ಎನ್ಐಎ ಆರೋಪ ಪಟ್ಟಿಯಲ್ಲಿ ಉಲ್ಲೇಖ!

ಕಂಪನಿಯ ತೆರಿಗೆ ಸಲಹೆಗಾರರಾದ ಜಯರಾಮ್‌ ಮತ್ತು ಅಂಕಿತ್‌ ಎಂಬವರು ತೆರಿಗೆ ಪಾವತಿಸುವ ನೆಪದಲ್ಲಿ ಕಚೇರಿಗೆ ಬಂದು ವಶಪಡಿಸಿಕೊಂಡ ದಾಖಲಾತಿಗಳನ್ನು ಬದಲಾಯಿಸಿ ಅದರಲ್ಲಿರುವ ಸಹಿಗಳನ್ನು ನಕಲು ಮಾಡಿ ಮೋಸ ಮಾಡಿರುತ್ತಾರೆ ಎಂದು ಡೆಪ್ಯುಟಿ ಕಮಿಷನರ್‌ ಆಫ್‌ ಸೆಂಟ್ರಲ್‌ ಟ್ಯಾP್ಸ… ಹನುಮಂತ ರಾಜು ಎಂಬವರು ಬಂದರು ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

click me!