ಘಟನೆಯ ದಿನ ಮನೆಗೆ ಹಿಂತಿರುಗಲು ವಿಫಲವಾದಾಗ ರಾಜುಖಾನ್ ನಾಪತ್ತೆಯಾದ ಬಗ್ಗೆ ಕುಟುಂಬದವರು ತಿಳಿಸಿದ್ದಾರೆ. ಅಕ್ರಮ ಚಟುವಟಿಕೆಗಳ ಬಗ್ಗೆ ಕಲ್ಲು ಖಾನ್ ಅವರೊಂದಿಗೆ ಈ ಮೊದಲು ವಿವಾದಗಳಿರೋದಾಗಿ ಕುಟುಂಬಸ್ಥರು ಆರೋಪಿಸಿದ್ದರು.
ಭೋಪಾಲ್ (ನವೆಂಬರ್ 28, 2023): 2 ತಿಂಗಳ ಹಿಂದೆ ಚರಂಡಿಯಲ್ಲಿ ಮಾನವ ಮುಂಡ ಪತ್ತೆಯಾಗಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಗ್ವಾಲಿಯರ್ ಜಿಲ್ಲೆಯ ಜನಕ್‌ಗಂಜ್ ಪೊಲೀಸರು ಪ್ರಮುಖ ಶಂಕಿತ ನಜೀರ್ ಖಾನ್ ಎಂಬಾತನನ್ನು ಬಂಧಿಸುವ ಮೂಲಕ ಪ್ರಕರಣವನ್ನು ಭೇದಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಸೆಪ್ಟೆಂಬರ್ 29 ರಂದು ಮಾನವ ಮುಂಡವೊಂದು ಪತ್ತೆಯಾಗಿದ್ದು, ಮೃತರನ್ನು ಡಿಎನ್ಎ ವಿಶ್ಲೇಷಣೆಯ ಮೂಲಕ 35 ವರ್ಷ ವಯಸ್ಸಿನ ರಾಜು ಖಾನ್ ಎಂದು ಗುರುತಿಸಲಾಗಿದೆ. ಈ ಬಗ್ಗೆ ಗ್ವಾಲಿಯರ್ ಎಸ್ಪಿ ರಾಜೇಶ್ ಸಿಂಗ್ ಚಾಂಡೆಲ್ ಮಾಹಿತಿ ನೀಡಿದ್ದಾರೆ.
undefined
ಇದನ್ನು ಓದಿ: 9 ವರ್ಷದ ವಿದ್ಯಾರ್ಥಿಗೆ ಕಂಪಾಸ್‌ನಿಂದ ಹಲ್ಲೆ ನಡೆಸಿದ ಸಹಪಾಠಿಗಳು: ಪೋಷಕರು ದೂರು ನೀಡಿದ್ರೂ ಕ್ಯಾರೆ ಎನ್ನದ ಶಾಲೆ!
ಡಿಎನ್‌ಎ ಸ್ಯಾಂಪಲ್‌ಗಳು ಆತನ ತಾಯಿಯೊಂದಿಗೆ ಹೊಂದಿಕೆಯಾಗುತ್ತವೆ. ಘಟನೆಯ ದಿನ ಮನೆಗೆ ಹಿಂತಿರುಗಲು ವಿಫಲವಾದಾಗ ರಾಜುಖಾನ್ ನಾಪತ್ತೆಯಾದ ಬಗ್ಗೆ ಕುಟುಂಬದವರು ತಿಳಿಸಿದ್ದಾರೆ. ಅಕ್ರಮ ಚಟುವಟಿಕೆಗಳ ಬಗ್ಗೆ ಕಲ್ಲು ಖಾನ್ ಅವರೊಂದಿಗೆ ಈ ಮೊದಲು ವಿವಾದಗಳಿರೋದಾಗಿ ಅವರ ಕುಟುಂಬಸ್ಥರು ಆರೋಪಿಸಿದ್ದರು.
ಇನ್ನು, ಆರೋಪಿಯ ಕೃತ್ಯವನ್ನು ರುಜುವಾತುಪಡಿಸಲು ಪೊಲೀಸರು ಘಟನೆಯ ಪ್ರದೇಶದ ಸುತ್ತಮುತ್ತಲಿನ ವಿವಿಧ ಸ್ಥಳಗಳಿಂದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ ಎಂದೂ ತಿಳಿದುಬಂದಿದೆ. ಜನಕ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಬಕ್ರ ಮಂಡಿ ನಿವಾಸಿ ಹಾಗೂ ಆರೋಪಿ ನಜೀರ್ ಖಾನ್ ಕೊಲೆಗೆ ಯೋಜನೆ ರೂಪಿಸಿದ್ದರು ಎಂದು ತನಿಖೆಯ ವೇಳೆ ಕಂಡುಬಂದಿದೆ.
ಇದನ್ನೂ ಓದಿ: ಟಿಂಡರ್ ಬಳಸೋ ಮುನ್ನ ಹುಷಾರ್: ‘ಪ್ರಿಯೆ’ ಎಂದು ಡೇಟ್ ನೆಪ ಹೇಳಿ ಯುವಕನ ಬರ್ಬರ ಕೊಲೆ ಮಾಡಿದ ಸುಂದರಿ!
ಕಿರಾಣಿ ಅಂಗಡಿ ವ್ಯಾಪಾರದ ಜತೆಗೆ ತಂದೆ ಅಕ್ರಮ ಚಟುವಟಿಕೆ ನಡೆಸುತ್ತಿದ್ದ ಬಗ್ಗೆ ರಾಜುಖಾನ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಶಂಕಿಸಿ ನಜೀರ್ ಖಾನ್ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸೆಪ್ಟೆಂಬರ್ 21 ರಂದು ಸಂಜೆ ನಜೀರ್ ಮತ್ತು ಅವನ ತಂದೆ, ರಾಜು ಖಾನನ್ನು ಸುಳ್ಳು ನೆಪದಲ್ಲಿ ಮನೆಗೆ ಕರೆದೊಯ್ದು ಕಬ್ಬಿಣದ ಡಂಬೆಲ್‌ನಿಂದ ಮಾರಣಾಂತಿಕವಾಗಿ ಹೊಡೆದಿದ್ದಾರೆ ಎಂದು ತಿಳಿದುಬಂದಿದೆ.
ನಂತರ, ರಾಜು ಖಾನ್ ಮೃತದೇಹವನ್ನು ವಿಲೇವಾರಿ ಮಾಡಲು 15 ರಿಂದ 16 ತುಂಡುಗಳಾಗಿ ತುಂಡರಿಸಿದರು. ಸ್ಕೂಟರ್ ಬಳಸಿ, ಇಬ್ಬರೂ ಸ್ವರ್ಣ್ ರೇಖಾ ಡ್ರೈನ್ ಉದ್ದಕ್ಕೂ ನಾಲ್ಕು ಪ್ರತ್ಯೇಕ ಸ್ಥಳಗಳಲ್ಲಿ ಅವಶೇಷಗಳನ್ನು ಎಸೆದರು ಎಂದು ತಿಳಿದುಬಂದಿದೆ. ಆದರೆ, ತೀವ್ರ ಪ್ರಯತ್ನಗಳ ಹೊರತಾಗಿಯೂ, ಕೊಲೆಯ ಆಯುಧ ಮತ್ತು ದೇಹದ ಭಾಗಗಳನ್ನು ವಿಲೇವಾರಿ ಮಾಡಲು ಬಳಸಿದ ಆಕ್ಟಿವಾ ವಾಹನವನ್ನು ಪೊಲೀಸರು ಇನ್ನೂ ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: ದುಬೈಗೆ ಕರ್ಕೊಂಡು ಹೋಗ್ಲಿಲ್ಲ ಅಂತ ಗಂಡನ ಮೂಗಿಗೆ ಗುದ್ದಿದ ಹೆಂಡ್ತಿ: ಉದ್ಯಮಿ ಪ್ರಾಣ ಪಕ್ಷಿಯೇ ಹಾರಿ ಹೋಯ್ತು!
ಕೃತ್ಯಕ್ಕೆ ಬಳಸಲಾದ ಚಾಕು ಸೇರಿದಂತೆ ನಿರ್ಣಾಯಕ ಪುರಾವೆಗಳಿಗಾಗಿ ಅಧಿಕಾರಿಗಳು ಹುಡುಕಾಟವನ್ನು ಮುಂದುವರೆಸಿರುವುದರಿಂದ ತನಿಖೆ ಮುಂದುವರೆದಿದೆ. ಜನಕ್‌ಗಂಜ್‌ನ ಮೋಟೆ ಮಹಾದೇವ ದೇವಸ್ಥಾನ ಮತ್ತು ಜಿವಾಜಿಗಂಜ್ ಸೇತುವೆಯ ಬಳಿ ದೇಹದ ಭಾಗಗಳನ್ನು ಬಿಸಾಡಿರುವುದಾಗಿ ನಜೀರ್ ಖಾನ್ ತಪ್ಪೊಪ್ಪಿಕೊಂಡಿದ್ದಾರೆ. ಆದರೆ, ಚರಂಡಿಯಲ್ಲಿ ವ್ಯಾಪಕ ಶೋಧ ನಡೆಸಲಾಗಿದ್ದರೂ ದೇಹದ ಹೆಚ್ಚಿನ ಭಾಗಗಳು ಪತ್ತೆಯಾಗಿಲ್ಲ.
ಇದನ್ನೂ ಓದಿ: ಬಿರಿಯಾನಿ ಹಣಕ್ಕಾಗಿ ಯುವಕನ ಕತ್ತು ಹಿಸುಕಿ ಇರಿದು ಕೊಂದ; ನಂತರ ಶವದ ಮೇಲೆ ಡ್ಯಾನ್ಸ್ ಮಾಡಿದ ಬಾಲಕ!