ರಕ್ತಚರಿತ್ರೆ, ಅಮಾನುಷ ಅಪರಾಧ ಘಟನೆಗಳಿಗೆ ಸಾಕ್ಷಿಯಾಗಿರುವ ಭೀಮಾತೀರದಲ್ಲಿ ಇಂದು ಸಂಜೆ ಮತ್ತೆ ಪೈರಿಂಗ್ ಸದ್ದು ಕೇಳಿಬಂದಿದೆ. ಜ್ಯೂವೆಲ್ಲರಿ ಶಾಪ್‌ನಲ್ಲಿ ದರೋಡೆ ಮಾಡಲು ಬಂದಿದ್ದ ಐವರು ದುಷ್ಕರ್ಮಿಗಳು ಗನ್ ಪೈರಿಂಗ್ ಮಾಡಿದ್ದಾರೆ.
ವಿಜಯಪುರ (ಫೆ.13): ಕರ್ನಾಟಕ ರಾಜ್ಯದಲ್ಲಿ ರಕ್ತಚರಿತ್ರೆಯನ್ನು ಹೊಂದಿರುವ ಹಾಗೂ ಅಮಾನುಷವಾದ ಅಪರಾಧ ಘಟನೆಗಳಿಗೆ ಸಾಕ್ಷಿಯಾಗಿರುವ ವಿಜಯಪುರ ಜಿಲ್ಲೆಯ ಭೀಮಾತೀರದಲ್ಲಿ ಇಂದು ಸಂಜೆ ಮತ್ತೆ ಪೈರಿಂಗ್ ಸದ್ದು ಕೇಳಿಬಂದಿದೆ. ಜ್ಯೂವೆಲ್ಲರಿ ಶಾಪ್‌ನಲ್ಲಿ ಸಂಜೆ ವೇಳೆಯೇ ಹೊಕ್ಕು ದರೋಡೆ ಮಾಡಲು ಬಂದಿದ್ದವರು ಗನ್ ಪೈರಿಂಗ್ ಮಾಡಿದ್ದಾರೆ.
ರಸ್ತೆಯಲ್ಲಿ ವೇಗವಾಗಿ ನುಗ್ಗುವ ನಂಬರ್ ಪ್ಲೇಟ್ ಇಲ್ಲದ ಪಲ್ಸರ್ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಭೀಮಾತೀರದಲ್ಲಿರುವ ಸಿಂದಗಿ ಪಟ್ಟಣದ ಚಾಮುಂಡೇಶ್ವರಿ ಜ್ಯುವೆಲ್ಲರಿ ಶಾಪ್‌ಗೆ ಹೊಕ್ಕಿದ್ದಾರೆ. ಅಲ್ಲಿದ್ದ ಬಂಗಾರ, ಚಿನ್ನ, ವಜ್ರಾಭರಣಗಳನ್ನು ದರೋಡೆ ಮಾಡಲು ಪ್ರಯತ್ನ ಮಾಡಿದ್ದಾರೆ. ಆದರೆ, ಇದಕ್ಕೆ ಬಗ್ಗದಿದ್ದಾಗ ಮೂರು ಸುತ್ತು ಗನ್ ಫೈರಿಂಗ್ ಮಾಡಿದ್ದಾರೆ. ಈ ವೇಳೆ ಸುತ್ತಲಿನ ಜನತೆ ಜುವೆಲ್ಲರಿ ಮಳಿಗೆಯಲ್ಲಿ ಚಿನ್ನಾಭರಣಗಳ ದರೋಡೆಗೆ ಬಂದಿದ್ದ ಸ್ಥಳಕ್ಕೆ ಧಾವಿಸಲು ಮುಂದಾಗಿದ್ದಾರೆ. ಜನರು ಬರುತ್ತಿದ್ದಂತೆಯೇ ಮತ್ತೊಂದು ಸತ್ತಿನ ಗನ್ ಫೈರಿಂಗ್ ಮಾಡಿದ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
undefined
ಬೆಳಗಾವಿ ಕೆಎಎಸ್ ಅಧಿಕಾರಿಯ ಗಂಡನ ಶವ ಪತ್ತೆ: ಬಾಡಿಬಿಲ್ಡರ್ ಜೀವನ ದುರಂತ ಅಂತ್ಯ
ಬಂದೂಕು ಫೈರಿಂಗ್ ಸದ್ದಿಗೆ ಬೆಚ್ಚಿಬಿದ್ದ ಜನತೆ: ಇನ್ನೂ ಮಸುಕಾದ ಬೆಳಕು ಇದ್ದು, ಆಗಷ್ಟೇ ಕತ್ತಲಾಗುವ ಮುನ್ಸೂಚನೆ ಇದ್ದುದರಿಂದ ವಿದ್ಯುತ್ ಬೀದಿ ದೀಪಗಳು ಕೂಡ ಹೊತ್ತಿರಲಿಲ್ಲ. ಜನರ ಸಂಚಾರವೂ ಕೂಡ ವಿರಳವಾಗಿರುವ ಸಮಯವೆಂದು ಐವರು ಹಂತಕರು ದರೋಡೆಗೆ ಬಂದಿದ್ದಾರೆ. ಈ ಪೈಕಿ ಮೂವರು ಮಳಿಗೆಯೊಳಗೆ ಹೋದರೆ ಉಳಿದಿಬ್ಬರು ಹೊರಗೆ ಇದ್ದು ಸಾರ್ವಜನಿಕರ ಬರದಂತೆ ಹಾಗೂ ಬಂದರೂ ಸುಳಿವು ನೀಡುವುದಕ್ಕೆ ಸಿದ್ಧವಾಗಿದ್ದರು. ಆದರೆ, ಜುವೆಲ್ಲರಿ ಮಳಿಗೆಯ ಒಳಗೆ ಹೋದವರಿಗೆ ಕಳ್ಳತನ ವಿಫಲವಾಗಿದೆ. ಆಗ ಎಲ್ಲರೂ ತಪ್ಪಿಸಿಕೊಂಡು ಓಡಿ ಹೋಗಬೇಕು ಎನ್ನುವಾಗ ಜನರು ಅಡ್ಡ ಬಂದಿದ್ದು ಗನ್ ಫೈರಿಂಗ್ ಮಾಡಿದ್ದಾರೆ. ಈ ಬಂದೂಕು ಫೈರಿಂಗ್‌ನಿಂದಾಗಿ ಸಿಂಧಗಿ ಪಟ್ಟಣದ ಜನರು ಬೆಚ್ಚಿ ಬಿದ್ದಿದ್ದಾರೆ.
ಇಬ್ಬರನ್ನು ಅಟ್ಟಾಡಿಸಿಕೊಂಡು ಹಿಡಿದ ಜನರು: ಸಿಂದಗಿ ಪಟ್ಟಣದ ಚಾಮುಂಡೇಶ್ವರಿ ಜ್ಯುವೆಲರಿ ಶಾಪ್‌ನಲ್ಲಿ ಕಳ್ಳತನ ವಿಫಲವಾದ ನಂತರ ಪಲ್ಸರ್ ಮೇಲೆ ಬಂದ ಐವರ ಪೈಕಿ ಓರ್ವನ ಬಳಿ ಬಂದೂಕು ಇದ್ದು ಮೂರು ಸುತ್ತು ಗುಂಡು ಹಾರಿಸಿದ್ದಾನೆ. ಗುಂಡಿನ ಶಬ್ಧ ಕೇಳಿ ಬಂದ ಕೂಡಲೇ ಸ್ಥಳಿಯರು ಜಮಾಯಿಸಿದ್ದಾರೆ. ಈ ವೇಳೆ ಜನರನ್ನು ಕಂಡು ಪರಾರಿಯಾಗಲು ಯತ್ನ ಮಾಡಿದ್ದಾರೆ. ನಂಬರ್ ಇಲ್ಲದ ಪಲ್ಸರ್ ಬೈಕ್ ನಲ್ಲಿ ಬಂದಿದ್ದ ಕಿರಾತಕರು ತಪ್ಪಿಸಿಕೊಂಡು ಹೋಗಲು ಪ್ರಯತ್ನ ಮಾಡಿದ್ದಾರೆ. ಈ ವೇಳೆ ಇಬ್ಬರು ದುಷ್ಕರ್ಮಿಗಳು ಜನರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಜೊತೆಗೆ, ಅವರು ಪರಾರಿಯಾಗಲು ಮುಂದಾಗಿದ್ದ ಒಂದು ನಂಬರ್ ಪ್ಲೇಟ್ ಇಲ್ಲದ ಪಲ್ಸರ್ ಬೈಕ್ ಅಡ್ಡಗಟ್ಟಿದ್ದಾರೆ. ಆಗ ಬೈಕ್ ಬಿಟ್ಟು ಓಡಿ ಹೋಗಲು ಮುಂದಾಗಿದ್ದು, ಜನರು ಅಟ್ಟಾಡಿಸಿಕೊಮಡು ಹೋಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ, ಮೂವರು ಸ್ಥಳದಿಂದ ತಪ್ಪಿಸಿಕೊಂಡು ಪರಾರಿ ಆಗಿದ್ದಾರೆ.
Valentine Day: ಸ್ನೇಹಿತೆಯೊಂದಿಗೆ ಪಬ್‌ಗೆ ತೆರಳಿದ ಯುವಕ 3ನೇ ಮಹಡಿಯಿಂದ ಜಿಗಿದು ಸಾವು
ಕಂಟ್ರೀ ಪಿಸ್ತೂಲ್- ಜೀವಂತ ಗುಂಡು ವಶ: ದರೋಡೆಗೆ ಬಂದು ಸಾರ್ವಜನಿಕರ ಕೈಗೆ ಸಿಲುಕಿ ಪೊಲೀಸರ ಅತಿಥಿಯಾಗಿರುವ ಇಬ್ಬರು ದುಷ್ಕರ್ಮಿಗಳಿಂದ ಒಂದು ಕಂಟ್ರೀ ಪಿಸ್ತೂಲ್, ಮೂರು ಜೀವಂತ ಗುಂಡುಗಳು ಹಾಗೂ ಮಾರಕಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರ ಮುಂದೆ ತಾವು ಮೂನಾದಿಂದ ಬಂದಿದ್ದೇವೆ ಎಂದು ಹೇಳಿದ್ದಾರೆ. ಇದರಿಂದ ಸಿಂದಗಿ ಪಟ್ಟಣದ ಜನತೆಯಲ್ಲಿ ಆತಂಕ ಮನೆ ಮಾಡಿದೆ. ಇನ್ನೂ ಮೂವರು ಹಂತಕರು ಪರಾರಿ ಆಗಿದ್ದು, ರಸ್ತೆಯಲ್ಲಿ ಸಂಚರಿಸುವ ಜನರು ಅಥವಾ ಮನೆ ಸೇರಿ ಇನ್ನಿತರೆ ಮಳಿಗೆಗಳಿಗೆ ಹೊಕ್ಕು ದರೋಡೆ ಮಾಡಬಹುದು ಎಂಬ ಆತಂಕ ಹೆಚ್ಚಾಗಿದೆ.
ಪೊಲೀಸರಿಂದ ಸ್ಥಳ ಪರಿಶೀಲನೆ: ಇಬ್ಬರು ದುಷ್ಕರ್ಮಿಗಳನ್ನು ಬಂಧಿಸಿರುವ ಪೊಲೀಸರು ಅವರನ್ನು ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ, ಘಟನಾ ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ಮಾಡಿದ್ದು, ಸುತ್ತಮುತ್ತಲಿನ ಸಿಸಿ ಕ್ಯಾಮರಾಗಳನ್ನು ಕೂಡ ವೀಕ್ಷಣೆ ಮಾಡಿದ್ದಾರೆ. ಕೆಲವು ಕ್ಯಾಮರಾಗಳಿಂದ ಸಿಸಿಟಿವಿ ಫೋಟೇಜ್‌ಗಳನ್ನು ಕೂಡ ಪಡೆದುಕೊಂಡಿದ್ದಾರೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.