
ಮೊಡಾಸಾ (ಫೆ.26): ವ್ಯಕ್ತಿಯೊಬ್ಬ ಆತ್ಮಾಹುತಿ ಬಾಂಬ್ ಸ್ಫೋಟಿಸಿಕೊಂಡು ಪತ್ನಿಯನ್ನು ಕೊಲೈಗೈದು (Murder) ತಾನೂ ಸಾವನ್ನಪ್ಪಿರುವ (Death) ಘಟನೆ ಗುಜರಾತಿನ (Gujarat) ಅರ್ವಳ್ಳಿ ಜಿಲ್ಲೆಯ ಬಿ.ಟಿ. ಛಪ್ರ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ. 47 ವರ್ಷದ ಲಾಲಾ ಪಗಿ (Lala Pagi) ಎಂಬಾತ ಜಿಲೆಟಿನ್ ಕಡ್ಡಿ, ಡಿಟೋನೇಟರ್ ಸ್ವಿಚ್ ಮತ್ತು ವೈರ್‌ಗಳನ್ನು ಸುತ್ತಿಕೊಂಡು ಅತ್ತೆಯ ಮನೆಗೆ ತೆರಳಿದ್ದಾನೆ.
ಅಲ್ಲಿ ಪತ್ನಿ ಶಾರದಾಬೆನ್ (43) ಅಪ್ಪಿಕೊಂಡು ಡಿಟೋನೇಟರ್ ಸ್ವಿಚ್ ಆನ್ ಮಾಡಿದ್ದಾನೆ. ಈ ವೇಳೆ ಸಂಭವಿಸದ ಸ್ಫೋಟದಲ್ಲಿ ದಂಪತಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು (Police) ತಿಳಿಸಿದ್ದಾರೆ. ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಪಗಿ ಮತ್ತು ಶಾರದಾಬೆನ್ ವಿವಾಹವಾಗಿ 20 ವರ್ಷಗಳು ಕಳೆದಿದ್ದು, ಪತಿ ಆಗಾಗ ಹೆಂಡತಿಗೆ ಹೊಡೆಯುತ್ತಿದ್ದ.
ಕುಟುಂಬ ಕಲಹದಿಂದ ಬೇಸತ್ತ ಶಾರದಾಬೆನ್ ಕಳೆದ ತಿಂಗಳು ಗಂಡನ ಮನೆ ಬಿಟ್ಟು ತಾಯಿ ಮನೆಗೆ ಬಂದು ನೆಲೆಸಿದ್ದರು. ಇದರಿಂದ ಹೆಂಡತಿ ಮೇಲೆ ಲಾಲಾ ಪಗಿ ಸಿಟ್ಟಾಗಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣ ಸಂಬಂಧ ಪಗಿ ವಿರುದ್ಧ ಕೊಲೆ ಕೇಸ್ ದಾಖಲಿಸಲಾಗಿದೆ. ಸ್ಫೋಟಕಗಳ ಮೂಲದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಮಗಳನ್ನು ಕೊಂದ ತಂದೆ, ಕಾರಣ ಕೇಳಿದ್ರೆ ಕಣ್ಣಂಚಿನಲ್ಲಿ ನೀರು ತರಿಸುತ್ತೆ
ಪೊಲೀಸ್ ನಡೆಯಿಂದ ಪ್ರಾಣ ಕಳೆದುಕೊಂಡ ಮಹಿಳೆ: 'ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ' ಎನ್ನುವಂತೆ ಪತಿ ಮಾಡಿದ ಸಾಲಕ್ಕೆ ಪತ್ನಿಯನ್ನು ಪೊಲೀಸರು ಠಾಣೆಗೆ ಕರತಂದಿದ್ದಾರೆ. ಈ ಅವಮಾನ ತಾಳತಾರದೆ ಪತ್ನಿ ಮನೆಗೆ ತೆರಳಿದ ಬಳಿಕ ನೇಣಿಗೆ (Suicide) ಶರಣಾಗಿದ್ದಾರೆ. ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ಮಾರುತಿನಗರದಲ್ಲಿ ಘಟನೆ ನಡೆದಿದೆ. ಅಖಿಲಾ (35) ಮೃತ ದುರ್ದೈವಿ.
ಫ್ರಾಡ್, ಫ್ರಾಡ್ ಅಂತಾ ಸದಾ ಅವಮಾನ ಮಾಡ್ತಾರೆ ಎಂದು ಡೆತ್ ನೋಟ್ (Death Note) ಬರೆದು ಅಖಿಲಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಅಖಿಲಾ ಅವರಿಗೆ ಎರಡು ಮಕ್ಕಳು ಇವೆ. ಅಖಿಲಾ ಅವರ ಪತಿ ಮಧುಕುಮಾರ್ ಸ್ಥಳೀಯ ನಿವಾಸಿ ಚಂದನ್ ಅಲಿಯಾಸ್ ಚನ್ನಕೇಶವ ಎಂಬಾತನ ಬಳಿ 1 ಲಕ್ಷ ಹಣ ಸಾಲ ಪಡೆದಿದ್ದರು. ಹಣ ವಾಪಸ್ಸು ನೀಡುವ ವಿಚಾರಕ್ಕೆ ಚಂದನ್ ಕಿರುಕುಳ ನೀಡಿತ್ತಿದ್ದ. ಪೊಲೀಸರ ಕಡೆಯಿಂದಲೂ ಕಿರುಕುಳ ಕೊಡಿಸುತ್ತಿದ್ದ ಎಂದು ಅರೋಪಿಸಿದ್ದರು.
ಪತಿ ಮನೆಯಲ್ಲಿ ಇರದ ಸಮಯದಲ್ಲಿ ಅಖಿಲಾರನ್ನ ಠಾಣೆಗೆ ಕರೆದುಕೊಂಡು ವಿಚಾರಣೆ ನೆಪದಲ್ಲಿ ಟಾರ್ಚರ್ ಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಠಾಣೆಯಿಂದ ನೇರವಾಗಿ ಮನೆಗೆ ಬಂದು ಅಖಿಲಾ ಸೂಸೈಡ್ ಮಾಡಿಕೊಂಡಿದ್ದಾರೆ. ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಜಯ್ ಕುಮಾರ್ ಮಾಡಿದ ಬಿಸಿನೆಸ್ಸು (Business) ಲಾಸ್ ಆಗಿತ್ತು. ಇತ್ತೀಚೆಗೆ ಕೆಲಸದಿಂದ ಸಹ ತೆಗೆಯಲಾಗಿತ್ತು.
Road Accident: ಒಂದೇ ಬೈಕ್‌ನಲ್ಲಿ ಬೆಳಗಾವಿಯ ನಾಲ್ವರು ಸ್ನೇಹಿತರು.. ಮೃತ್ಯು ಅಪ್ಪಿಕೊಂಡರು
ಇದರಿಂದ ವಿಜಯ ಕುಮಾರ್ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ವೆಲ್ಡ್ಡಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದ್ರೆ, ಕಂಪನಿ ಲಾಸ್ ನಲ್ಲಿ ನಡೆಯುತ್ತಿದೆ ಎಂದು ವಿಜಯ್ ಕುಮಾರ್ ಸೇರಿದಂತೆ ಹತ್ತು ಮಂದಿಯನ್ನು ಕೆಲಸದಿಂದ ತೆಗೆಯಲಾಗಿತ್ತು. ಹಾಗಾಗಿ ತಾನು ಮಾಡಿದ ಸಾಲ ತೀರಿಸೋಕೆ ಆಗಿರಲಿಲ್ಲ. ಗಂಡ, ಹೆಂಡತಿ ಕೆಲಸಕ್ಕೆ ಹೋದ್ರೂ, ಮಗಳ ಭವಿಷ್ಯ ಏನು ಎಂಬ ಚಿಂತೆ ತಂದೆಗೆ ಕಾಡಿತ್ತು, ಹೀಗಾಗಿ ಮಗಳನ್ನು ಕೊಂದು ತಾನೂ ನೇಣಿಗೆ ಕೊರಳೊಡ್ಡಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ