* ಪ್ರಾಣ ಸ್ನೇಹಿತರನ್ನು ಬಲಿಪಡೆದ ರಸ್ತೆ ಅಪಘಾತ
* ಒಂದೇ ಬೈಕ್‌ನಲ್ಲಿ ನಾಲ್ವರು ಹೊರಟಿದ್ದರು
* ದಯವಿಟ್ಟು ರಸ್ತೆ ಸುರಕ್ಷತಾ ನಿಯಮ ಪಾಲಿಸಿ
ಬೆಳಗಾವಿ (ಫೆ. 25) ರಸ್ತೆ ನಿಯಮಗಳನ್ನು( Traffic Rules) ಪಾಲಿಸದೇ ಇದ್ದರೆ ಎಂಥ ಅನಾಹುತಗಳು ಸಂಭವಿಸುತ್ತವೆ ಎನ್ನುವುದಕ್ಕೆ ಈ ಪ್ರಕಣವೇ ಸಾಕ್ಷಿ. ಜೀವದ ಗೆಳೆಯರು ಒಟ್ಟಿಗೆ (Death) ಸಾವನ್ನಪ್ಪಿದ್ದಾರೆ. ಒಂದೇ ಬೈಕ್ ನಲ್ಲಿ(Bike) ನಾಲ್ಕು ಜನ ಪ್ರಯಾಣ ಮಾಡಲೆ ಹೋಗಿ ಸಾವಿನ ಮನೆ ಸೇರಿಕೊಂಡಿದ್ದಾರೆ.
ನಿಯಂತ್ರಣ ತಪ್ಪಿದ ಬೈಕ್ ರಸ್ತೆ ಪಕ್ಕದ ಗುಂಡಿಗೆ ಬಿದ್ದು, ಮೂವರು ಯುವಕರು ಸ್ಥಳದಲ್ಲಿಯೇ ಮೃತ ಪಟ್ಟಿದ್ದು ,ಓರ್ವ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾಮೆ. ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಗುರುವಾರ ತಡರಾತ್ರಿ ದುರ್ಘಟನೆ ಸಂಭವಿಸಿದೆ. ಬೈಕ್ ನಿಯಂತ್ರಣ ತಪ್ಪಿ ಅಪಘಾತವಾಗಿದ್ದು ಗೆಳೆಯರು ಸಾವು ಕಂಡಿದ್ದಾರೆ.
ಸಂಕೇಶ್ವರ ಪಟ್ಟಣದ ನಿವಾಸಿಗಳಾದ ನಾಲ್ವರು ಗೆಳೆಯರು ಒಂದೆ ಬೈಕ್ ನಲ್ಲಿ ನಿಪ್ಪಾಣಿ ಕಡೆಯಿಂದ ಸಂಕೇಶ್ವರ ಕಡೆಗೆ ಬರುತ್ತಿರುವ ವೇಳೆ ಏಕಾಏಕಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಗುಂಡಿಗೆ ಬಿದ್ದಿದೆ. ಅಪಘಾtವಾಗಿದ್ದು ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದರು,ಇನ್ನೊಬ್ಬನ ಸ್ಥಿತಿ ಚಿಂತಾಜನಕವಾದ ಪರಿಣಾಮ ಆಸ್ಪತ್ರೆಗೆ ದಾಖಲಿಸಲಾಯಿತು. ಶುಕ್ರವಾರ ಮುಂಜಾನೆ ಆತ ಸಹ ಸಾವಿನ ಮನೆ ಸೇರಿಕೊಂಡ.
ಬಸವರಾಜ ಮಾಳಿ (23),ಪ್ರವೀಣ ಸನದಿ (24), ಮೆಹಬೂಬ ಶೇಗಡಿ (23) ಸ್ಥಳದಲ್ಲೇ ಮೃತಪಟ್ಟವರು. ಫರ್ಹಾನ್ ಮಲಿಕ್ ಜಮಾದಾರ್ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿದ್ದಾರೆ. ಸಂಕೇಶ್ವರ ಪೊಲೀಸ್ ಇನ್ಸಪೆಕ್ಟರ್ ಪ್ರಲ್ಹಾದ ಚನ್ನಗಿರಿ, ಪಿಎಸ್ಐ ಗಣಪತಿ ಕೊಂಗನೊಳ್ಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕ್ರ ಮ ಕೈಗೊಂಡಿದ್ದಾರೆ. ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ .
ಆಲಮಟ್ಟಿ ಅಪಘಾತ: ಬೈಕ್ ಹಾಗೂ ಖಾಸಗಿ ಬಸ್ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಆಲಮಟ್ಟಿ-ನಿಡಗುಂದಿ ರಸ್ತೆಯ ರಾಷ್ಟ್ರೀಯ ಹೆದ್ದಾರಿ-13ರ ಗಂಗಾ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ಬಳಿ ದುರ್ಘಟನೆ ಸಂಭವಿಸಿತ್ತು. ನಿಡಗುಂದಿ ತಾಲೂಕಿನ ಅಬ್ಬಿಹಾಳ ಗ್ರಾಮದ ಸುನೀಲ ಮಲ್ಲಪ್ಪ ಮಂಕಣಿ (24) ಹಾಗೂ ಯಲ್ಲನಗೌಡ ಬಸನಗೌಡ ಮಂಕಣಿ (23) ಸಾವನ್ನಪ್ಪಿದ್ದರು.
ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಬೈಕ್(Bike) ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಈ ಘಟನೆ ಸಂಭವಿಸಿತ್ತು. . ಆಲಮಟ್ಟಿಯಿಂದ(Almatti) ಮರಳಿ ತಮ್ಮೂರು ಅಬ್ಬಿಹಾಳಕ್ಕೆ ತೆರಳುತ್ತಿದ್ದ ಬೈಕ್, ವಿಜಯಪುರದಿಂದ(Vijayapura) ಬೆಂಗಳೂರಗೆ ಹೊರಟಿದ್ದ ಖಾಸಗಿ ಬಸ್ ಮಧ್ಯೆ ಈ ಅಪಘಾತ ಸಂಭವಿಸಿತ್ತು .
ದೀಪ್ ಸಿಧು ದುರ್ಮರಣ: ಪಂಜಾಬಿ ಸಿನಿಮಾ ನಟ, ರೈತ ಹೋರಾಟದಲ್ಲಿ ಕಾಣಿಸಿಕೊಂಡಿದ್ದ ದೀಪ್ ಸಿಧು ರಸ್ತೆ ಅಪಘಾತದಲ್ಲಿ ದುರ್ಮರಣ ಹೊಂದಿದ್ದರು. ದೆಹಲಿ ಸಮೀಪದ (Kundli-Manesar highway) ಕೆಎಂಪಿ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿತ್ತು.
ದೀಪ್ ಸಿಧು ಕಾರಿನಲ್ಲಿ ಪಂಜಾಬ್‌ಗೆ ತೆರಳುತಿದ್ದ ವೇಳೆ ಅಪಘಾತವಾಗಿತ್ತು. ದೀಪ್ ಸಿಧು ತೀವ್ರವಾಗಿ ಗಾಯಗೊಂಡಿದ್ದರು. ದೀಪ್ ಸಿಧು ಪ್ರಯಾಣಿಸುತ್ತಿದ್ದ ಕಾರಿನಲ್ಲಿ ರೀನಾ ಅನ್ನೋ ಯುವತಿ ಕೂಡ ಇದ್ದರು. ಅಪಘಾತದಲ್ಲಿ ರೀನಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ.