Sexual Harassment : ಅಪ್ರಾಪ್ತೆ ಮೇಲೆ ಎರಗಿದ ಪಾದ್ರಿ, ವಿಡಿಯೋ ಮಾಡಿಕೊಂಡ ಪತ್ನಿ!

By Suvarna News  |  First Published Dec 30, 2021, 5:52 PM IST

* ಅಪ್ರಾಪ್ತ ಮೇಲೆ ಅತ್ಯಾಚಾರ ಎಸಗಿದ ಪಾದ್ರಿ
* ಹೀನ ಕೃತ್ಯದ ವಿಡಿಯೋ ಮಾಡಿಕೊಂಡ ಪಾದ್ರಿ ಪತ್ನಿ
* ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತೇವೆ ಎಂದು ಬ್ಲಾಕ್ 


ಸುರತ್(ಡಿ 30)     ಗುಜರಾತ್‌ನ ತಾಪಿ ಜಿಲ್ಲೆಯ ಸೋಂಗಾಧ್ ತಾಲೂಕಿನ ಚರ್ಚ್‌ನ 39 ವರ್ಷದ ಪಾದ್ರಿ 16 ವರ್ಷದ ಬಾಲಕಿ  ಮೇಲೆ ಅತ್ಯಾಚಾರವೆಸಗಿರುವ (Rape) ಪ್ರಕರಣ ಬೆಳಕಿಗೆ ಬಂದಿದೆ.   ಗಂಡ (Husband) ಮಾಡುತ್ತಿರುವ ಹೀನ ಕೆಲಸವನ್ನು ಪತ್ನಿಯೇ (wife)ವಿಡಿಯೋ ಶೂಟ್ ಮಾಡಿಕೊಂಡಿದ್ದು ಅನ್ನು ಇಟ್ಟುಕೊಂಡು ಅಪ್ರಾಪ್ತೆಯನ್ನು ಬ್ಲಾಕ್ ಮೇಲ್ (Blackmail) ಮಾಡಲಾಗುತ್ತಿತ್ತು.

ಈ ವರ್ಷದ ಮೇ ತಿಂಗಳಿನಲ್ಲಿಯೇ ಪ್ರಕರಣ ನಡೆದಿದೆ. ಆದರೆ ಅದರ ಬಗ್ಗೆ ಮಂಗಳವಾರ ಸೋಂಗಧ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.  ದೂರಿನ ಆಧಾರದಲ್ಲಿ  ಪಾದ್ರಿ ಬಲಿರಾಮ್ ಕೊಕ್ನಿ ಮತ್ತು ಅವರ ಪತ್ನಿ ಅನಿತಾ ಅವರನ್ನು ಬಂಧಿಸಿ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Tap to resize

Latest Videos

Animal Brutality : ಸಂಭೋಗ ನಡೆಸ್ತಿದ್ದ ಶ್ವಾನದ ಶಿಶ್ನ ಕತ್ತರಿಸಿ ವಿಕೃತಿ... ಇಂಥವರಿಗೆ ಯಾವ ಶಿಕ್ಷೆ!

16 ವರ್ಷದ ಬಾಲಕಿ ಕೃಷಿ ಕೂಲಿ ಕೆಲಸ ಮಾಡುತ್ತಿದ್ದಳು.  ಚರ್ಚೆ ಗೆ ಪ್ರಾರ್ಥನೆಗೆ ಬರುತ್ತಿದ್ದ ಬಾಲಕಿಯನ್ನು ಪಾದ್ರಿ ನಂಬಿಸಿ ತನ್ನ ವಶಕ್ಕೆ ತೆಗೆದುಕೊಂಡಿದ್ದಾನೆ. ನಂತರ ಒಬ್ಬನೇ ಈರುವಾಘ ಏಕಾಂತದಲ್ಲಿ ಬಂದು ಭೇಟಿ ಮಾಡುವಂತೆ ತಿಳಿಸಿದ್ದಾನೆ.

ಅವಕಾಶ ಬಳಸಿಕೊಂಡು ಬಾಲಕಿಯ ಮೇಲೆ ಎರಗಿದ್ದು ಪತ್ನಿ ಅನಿತಾ ಪೋಟೋ ಮತ್ತು ವಿಡಿಯೋ ತೆಗೆದುಕೊಂಡಿದ್ದಾಳೆ.  ಇವರ ಮೇಲಿನ ಭಯದ ಕಾರಣಕ್ಕೆ ಅಪ್ರಾಪ್ತೆ ಪೊಲೀಸ್ ದೂರು ದಾಖಲಿಸಲು ಹೋಗಿಲ್ಲ.  ಆದರೆ ಈಗ  ಹಿಂಸೆ ತಾಳಲಾರದೆ ದೂರು ದಾಖಲಿಸಿದ್ದು ಆರೋಪಿಗಳನ್ನು ಬಂಧಿಸಲಾಗಿದೆ.'

ಉತ್ತರ ಪ್ರದೇಶದ ಪ್ರಕರಣ: ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ಆರು ವರ್ಷದ ಬಾಲಕಿಯ ಮೇಲೆ 26 ವರ್ಷದ ಯುವಕ ಅತ್ಯಾಚಾರವೆಸಗಿದ್ದ ಪ್ರಕರಣ ಕೆಲವು ದಿನಗಳ ನಂತರ ಬೆಳಕಿಗೆ ಬಂದಿತ್ತು.  ಅಪ್ರಾಪ್ತ ಬಾಲಕಿ ಶಾಲೆಗೆ ಹೋಗುತ್ತಿದ್ದಾಗ ಆರೋಪಿ ಶಹಬಾಜ್ ಕೃತ್ಯ ಎಸಗಿದ್ದ.  ಆಕೆಯನ್ನು ಶಿಥಿಲಗೊಂಡ ಕಟ್ಟಡಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದು ದೂರು ದಾಖಲಾಗಿತ್ತು.

ಧಾರವಾಡದ ಘೋರ ಪ್ರಕರಣ:  ಧಾರವಾಡ ಅಪ್ರಾಪ್ತಯೋರ್ವಳನ್ನು(Minor Girl)  ಕರೆದೊಯ್ದು ಸಾಮೂಹಿಕ ಅತ್ಯಾಚಾರ (Gang Rape) ಎಸಗಿದ್ದು ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ. ಇಲ್ಲಿನ ಲಕ್ಷ್ಮೀಸಿಂಗನಕೇರಿಯ ಅಪ್ರಾಪ್ತಳ ಮೇಲೆ ಅದೇ ಬಡಾವಣೆಯ ಐವರು ಯುವಕರು ಅತ್ಯಾಚಾರ ನಡೆಸಿದ್ದರು.

ಮಿಂಚಿನ ಕಾರ್ಯಾಚರಣೆ ನಡೆಸಿ ಆರು ಜನ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರು.  17 ವರ್ಷದ ಬಾಲಕಿ ಮೇಲೆ ಕಳೆದ ಮೂರು ತಿಂಗಳಿಂದ ನಿರಂತರವಾಗಿ ಐದಕ್ಕಿಂತ ಹೆಚ್ಚು ಬಾಲಕರು ಅತ್ಯಾಚಾರ ನಡೆಸಿರುವ ಬಗ್ಗೆ ಅತ್ಯಾಚಾರಕ್ಕೆ ಒಳಗಾಗಿರುವ ಬಾಲಕಿಯ ಪಾಲಕರು ನಗರದ ಶಹರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಬಾಸೆಲ್ ಮಿಶನ್ ಕಾಲೇಜಿನ ವಿದ್ಯಾರ್ಥಿನಿಯನ್ನು (Student) ನಗರದ ಹೊರವಲಯಕ್ಕೆ ಒತ್ತಾಯದಿಂದ ಕರೆದುಕೊಂಡು ಹೋದ ಅಪ್ರಾಪ್ತ ಯುವಕರು, ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ವಿದ್ಯಾಕಾಶಿಯಲ್ಲಿ ನಡೆದಿರುವಂತಹ ಘಟನೆ ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿತ್ತು.

ಕೆನ್ನೆಗೆ ಬಾರಿಸಿದ್ದ ಅತ್ತಿಗೆಯನ್ನೇ ರೇಪ್ ಮಾಡಿ ಕೊಲೆಗೈದು ಮತ್ತೆ ರೇಪ್! :  ಬಿಹಾರದ (Bihar)ಮುಜಾಫರ್‌ಪುರ ಜಿಲ್ಲೆಯಲ್ಲಿ 32 ವರ್ಷದ ವ್ಯಕ್ತಿಯೊಬ್ಬ ತನ್ನ(sister-in-law) ಅತ್ತಿಗೆಯನ್ನು (Murder) ಕೊಲೆಗೈದಿದ್ದ.  ಆಕೆ ಸಾಯುವುದಕ್ಕೂ ಮುನ್ನ ಮತ್ತು ಸತ್ತ ನಂತರ ಆಕೆ ಮೇಲೆ ಅತ್ಯಾಚಾರ (Rape) ಎಸಗಿದ್ದಾನೆ.

ರೋಪಿಯನ್ನು ಬುಧವಾರ ಬಂಧಿಸಲಾಗಿದೆ ಎಂದು ಮುಜಾಫರ್‌ಪುರ (ಪೂರ್ವ) ಉಪ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಪಾಂಡೆ ತಿಳಿಸಿದ್ದರು. ಅತ್ಯಾಚಾರ ಎಸಗಿದ ನಂತರ ಸಂತ್ರಸ್ತೆಯನ್ನು (Victim) ಗ್ರೈಂಡರ್ ಗೆ ಬಳಸುತ್ತಿದ್ದ ಕಲ್ಲಿನಿಂದ  ಜಜ್ಜಿ ಕೊಂದಿದ್ದಾನೆ. ಆಕೆ ಸತ್ತ ಮೇಲೆಯೂ ತನ್ನ ಕಾಮ ತೃಷೆ ತೀರಿಸಿಕೊಂಡಿದ್ದ.

 

click me!