Bank Robbery: SBI ಬ್ಯಾಂಕ್ ಸಿಬ್ಬಂದಿ ಶೂಟ್ ಮಾಡಿ ಹಣ ಹೊತ್ತೊಯ್ದರು... ಭಯಾನಕ ದೃಶ್ಯ

Published : Dec 30, 2021, 03:56 PM ISTUpdated : Dec 30, 2021, 03:59 PM IST
Bank Robbery: SBI ಬ್ಯಾಂಕ್ ಸಿಬ್ಬಂದಿ ಶೂಟ್ ಮಾಡಿ ಹಣ ಹೊತ್ತೊಯ್ದರು... ಭಯಾನಕ ದೃಶ್ಯ

ಸಾರಾಂಶ

* ಹಾಡಹಗಲೇ ಬ್ಯಾಂಕಿಗೆ ನುಗ್ಗಿದ ದರೋಡೆಕೋರರು * ವಾಣಿಜ್ಯ ರಾಜಧಾನಿ ಮುಂಬೈನಿಂದ ಆಘಾತಕಾರಿ ಪ್ರಕರಣ * ಬ್ಯಾಂಕ್ ಸಹಾಯಕ ಸಿಬ್ಬಂದಿಯ ಹತ್ಯೆ ಮಾಡಿದರು * ಕ್ಯಾಶಿಯರ್ ಬಳಿ ಇದ್ದ ಹಣ ದೋಚಿ ಪರಾರಿ

ಮುಂಬೈ( ಡಿ. 30) ಬ್ಯಾಂಕ್ ಕ್ಲೋಸಿಂಗ್ ವೇಳಿ ನುಗ್ಗಿದ  ಇಬ್ಬರು ಡಕಾಯಿತರು  (Robbey ಒಬ್ಬ ಸಿಬ್ಬಂದಿಯ ಹತ್ಯೆ ಮಾಡಿ ಹಣ ದೋಚಿದ್ದಾರೆ. ವಾಣಿಜ್ಯ ರಾಜಧಾನಿ ಮುಂಬೈನಿಂದ (Mumbai) ಆಘಾತಕಾರಿ ಪ್ರಕರಣ (Crime News) ವರದಿಯಾಗಿದೆ.   ಬ್ಯಾಂಕ್ ನ ಸಿಸಿಟಿವಿ(CCTV)ಯಲ್ಲಿ ಭಯಾನಕ ದೃಶ್ಯಗಳು ದಾಖಲಾಗಿವೆ.

ಸರಿಯಾದ ಭದ್ರತೆ ಇಲ್ಲದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಗೆ ಇಬ್ಬರು ಶಸ್ತ್ರಧಾರಿ ಡಕಾಯಿತುರು ನುಗ್ಗಿದ್ದಾರೆ. ಬ್ಯಾಂಕ್ ಕೆಲಸದ ಅವಧಿ ಕ್ಲೋಸ್ ಮಾಡಲು ಇನ್ನು ಕೆಲವೇ ನಿಮಿಷ ಬಾಕಿ ಇತ್ತು. ಬ್ಯಾಂಕ್ ನ ಸಹಾಯಕ ಸಂದೇಶ್ ಗೋಮಾನೆ ಎನ್ನುವರ ಮೇಲೆ ಗುಂಡಿನ ದಾಳಿ ಮಾಡಿದ್ದು ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಗನ್ ತೋರಿಸಿ ಉಳಿದ ಸಿಬ್ಬಂದಿ ಭಯ ಬೀಳಿಸಿದ್ದು  ಕ್ಯಾಶಿಯರ್ ಬಳಿ ಇದ್ದ  2.5  ಲಕ್ಷ ರೂ. ತೆಗೆದುಕೊಂಡು ಪರಾರಿಯಾಗಿದ್ದಾರೆ. ಪೊಲೀಸರು ಹೇಳುವಂತೆ   ಮಧ್ಯಾಹ್ನ 3.27 ಕ್ಕೆ ಪ್ರಕರಣ ನಡೆದಿದೆ.  ಘಟನೆ ನಡೆಯುವ ವೇಳೆ ಬ್ಯಾಂಕ್ ನಲ್ಲಿ ಯಾವುದೆ ಭದ್ರತಾ ಸಿಬ್ಬಂದಿ ಇರಲಿಲ್ಲ.  ಶಟರ್ ಸಹ ಅರ್ಧ ಕ್ಲೋಸ್ ಮಾಡಲಾಗಿತ್ತು.  ಬ್ಯಾಂಕ್ ಸಹಾಯಕನ ಎದೆಗೆ ಅತಿ ಹತ್ತಿರದಿಂದ ಗುಂಡು ಹಾರಿಸಿದ್ದಾರೆ ಎಂದು  ಮಾಹಿತಿ ನೀಡಿದ್ದಾರೆ.

Robbery; ದೇವರ ಹುಂಡಿ ಕಳ್ಳತನಕ್ಕೂ ಮುನ್ನ  ನಮಸ್ಕಾರ ಮಾಡಿಕೊಂಡ! ವಿಡಿಯೋ

ದರೋಡೆಕೋರರ ಚಲನವಲನ ಗಮನಿಸಿದರೆ ಅವರು ಸ್ಥಳೀಯರಂತೆ ಕಂಡಿದ್ದು ಪಕ್ಕಾ ಮಾಹಿತಿ ಪಡೆದುಕೊಂಡೆ ಕಳ್ಳತನಕ್ಕೆ ಬಂದಿದ್ದಾರೆ.  ರೈಲ್ವೆ ನಿಲ್ದಾಣದ ಬಳಿಯ ದಹಿಸರ್ ವೆಸ್ಟ್‌ನಲ್ಲಿರುವ ಗುರುಕುಲ ಸೊಸೈಟಿ ಪ್ರದೇಶದ ಬ್ಯಾಂಕ್ ಕೇವಲ 8 ರಿಂದ 10 ಸಿಬ್ಬಂದಿ ಇದ್ದಾರೆ. ಮೂವರು ಮಹಿಳೆಯರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 

ತಾನು ಕೆಲಸ ಮಾಡುವ ಬ್ಯಾಂಕ್ ನ್ನೇ ದೋಚಿದ್ದ:   ಮೊಹಾಲಿಯ ಪರ್ಚ್ ಆಕ್ಸಿಸ್ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಸೆಕ್ಯೂರಿಟಿ ಗಾರ್ಡ್ ತಾನೇ ಕೆಲಸ ಮಾಡುತ್ತಿದ್ದ ಬ್ಯಾಂಕ್ ದರೋಡೆ ಮಾಡಿ ಸಿಕ್ಕಿಬಿದ್ದಿದ್ದ.  ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಸಿಬ್ಬಂದಿಗೆ ರೈಫಲ್ ತೋರಿಸಿ 10.44ಲಕ್ಷ ರೂ. ದೋಚಿದ್ದ ಚಾಲಾಕಿ ಆಸಾಮಿ ಬಲೆಗೆ ಬಿದ್ದಿದ್ದ.

ಪ್ರಕರಣ ನಡೆದು 24  ಗಂಟೆಯೊಳಗೆ ಆರೋಪಿಯನ್ನು ಬಂಧಿಸಲಾಗಿತ್ತು.  ಡೆಪ್ಯೂಟಿ ಮ್ಯಾನೇಜರ್, ಅಸಿಸ್ಟಂಟ್ ಮ್ಯಾನೇಜರ್ ಮತ್ತು ಕ್ಯಾಶಿಯರ್ ಹೊರಗೆ ಹೋಗಿದ್ದ ವೇಳೆತನ್ನ ಮಗನಿಗೆ ಮೈ ಹುಷಾರಿಲ್ಲ ಎಂದು ಹೇಳಿದ ಸೆಕ್ಯೂರಿಟಿ ಗಾರ್ಡ್ ಬಲ್ಜಿತ್ ಸಿಂಗ್ ಅಲ್ಲಿಂದ ಹೊರಟಿದ್ದಾನೆ.  ಈ ವೇಳೆ ಬ್ಯಾಂಕ್ ನಲ್ಲಿ ಮ್ಯಾನೇಜರ್ ಅಮನ್ ಗಜೆಂಜಾ ಮತ್ತು ಪಿವನ್ ಮಾತ್ರ ಇದ್ದರು.

 ಇದಾದ ಮೇಲೆ ಸ್ವಲ್ಪ ಹೊತ್ತಿನ ನಂತರ ಮುಸುಕುಧಾರಿ ವ್ಯಕ್ತಿಯೊಬ್ಬ ಗನ್ ಹಿಡಿದು ಬಂದಿದ್ದಾನೆ . ಆದರೆ ಸರಿಯಾಗಿ ವಿಚಾರಣೆ ನಡೆಸಿದಾಗ ಬ್ಯಾಂಕ್ ಸೆಕ್ಯೂರಿಟಿಗೆ ಇದ್ದವನೇ ದರೋಡೆ ಮಾಡಿದ್ದು ಬಹಿರಂಗವಾಗಿತ್ತು. 

ಧಾರಾವಾಹಿ ದರೋಡೆ:  ತಮಿಳುನಾಡಿನ (Tamil Nadu) ಕಾಂಚೀಪುರಂನಲ್ಲಿ ಮನೆಯೊಂದನ್ನು ದರೋಡೆ (Robbery) ಮಾಡಲಾಗಿದೆ. ಕಳ್ಳರು ದರೋಡೆ ಮಾಡುತ್ತಿರುವಾಗ ಇಬ್ಬರು ಮಹಿಳೆಯರು (Woman) ಸೀರಿಯಲ್  (TV serial) ನೋಡುತ್ತಲೇ  ಇದ್ದರು! ನಾಲ್ವರು ಕಳ್ಳರ ತಂಡ ಮನೆಯನ್ನು ದರೋಡೆ ಮಾಡಿದ್ದು ಸುಮಾರು  19 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು (Gold Jewellery)ದೋಚಿ ಪರಾರಿಯಾಗಿತ್ತು. 

ವೃತ್ತಿಯಲ್ಲಿ ಆಡಿಟರ್ ಆಗಿರುವ ಮೇಗನಾಥನ್  ಅವರ ಮನೆ ದರೋಡೆಯಾಗಿದೆ. ಅವರ  ಸಹೋದರ ಸರ್ಕಾರಿ ನೌಕರ.  ಗುರುವಾರ ರಾತ್ರಿ ಕಳ್ಳತನವಾಗಿದೆ. ಕಳ್ಳತನ ನಡೆಯುವ ವೇಳೆ ಮೇಘನಾಥನ್ ಅವರ ಪತ್ನಿ ತನ್ನ ಸೋದರ ಸಂಬಂಧಿಯೊಂದಿಗೆ  ಸೀರಿಯಲ್ ನೋಡುತ್ತಿದ್ದರು!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ